ಶನಿವಾರ, ಸೆಪ್ಟೆಂಬರ್ 25, 2021
24 °C

ವಾಚಕರ ವಾಣಿ | ಶಿಕ್ಷಣಕ್ಕೆ ಮೀಸಲಾಗಲಿ ಹೆಚ್ಚು ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘...ಶಿಕ್ಷಣ ಕ್ರಾಂತಿಗಾಗಿ ಬಜೆಟ್‌ನಲ್ಲಿ ಶೇ 25ರಷ್ಟು ಹಣವನ್ನು ಮೀಸಲಿಟ್ಟು, ಸಮರ್ಪಕವಾಗಿ ಬಳಕೆ ಮಾಡಲಾಯಿತು’ ಎಂಬ ದೆಹಲಿಯ ಎಎಪಿ ಶಾಸಕಿ ಹೇಳಿಕೆ (ಪ್ರ.ವಾ., ಆ. 14) ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ ತುಂಬ ಗಮನಾರ್ಹವಾದುದಾಗಿದೆ. ಚಂದನ ವಾಹಿನಿಯ ಮೂಲಕ ನಮ್ಮ ಪ್ರೌಢಶಾಲಾ ಮಕ್ಕಳಿಗೆ ಈಗ ನೀಡುತ್ತಿರುವ ಆನ್‌ಲೈನ್ ತರಗತಿಗಳನ್ನು ಗಮನಿಸಿ: ಎರಡು ಅವಧಿಗಳಲ್ಲಿ ಬೋಧಿಸಬಹುದಾದ ವಿಷಯವನ್ನು ಒಂದೇ ಅವಧಿಯಲ್ಲಿ ವೇಗವಾಗಿ ಹಾಗೂ ಸಂಕ್ಷಿಪ್ತವಾಗಿ ನಿರೂಪಿಸಲಾಗುತ್ತಿದೆ.

ಕೈ ಬೆರಳು ಅಥವಾ ಕೋಲಿನಿಂದ ನಿರ್ದಿಷ್ಟವಾಗಿ ಸೂಚಿಸದೆ ಇರುವುದರಿಂದ ಕಪ್ಪು ಹಲಗೆಯ ಬಳಕೆ ಸಮರ್ಪಕವಾಗಿದ್ದರೂ ಮಕ್ಕಳಿಗೆ ಅದು ಸಂವಹನವಾಗುತ್ತಿಲ್ಲ. ಇವೆಲ್ಲ ಒಂದು ರೀತಿಯಲ್ಲಿ ಪುನರಾವರ್ತನೆಯ ತರಗತಿಗಳ ಹಾಗೆ ಪರಿಣಮಿಸಿವೆ. ಮೊದಲ ಕೇಳುಗರಾದ ಬಹುಮಕ್ಕಳ ಗ್ರಹಿಕೆಗೆ ತ್ರಾಸದಾಯಕವಾಗಿವೆ.

ಇಂತಹ ಸಮಸ್ಯೆಗಳನ್ನು ಶಿಕ್ಷಕರು ಶಿಕ್ಷಣ ಅಧಿಕಾರಿಗಳೊಂದಿಗೆ ನಿವೇದಿಸಿಕೊಂಡರೂ ಅವರು ಆರ್ಥಿಕ ಕೊರತೆಯ ಕಾರಣ ಮತ್ತು ಹೆಚ್ಚಿನ ಹಣ ಮಂಜೂರಾತಿಗಾಗಿನ ಬೇಡಿಕೆಯು ತಾಂತ್ರಿಕವಾಗಿ ದುಸ್ಸಾಧ್ಯವೆಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಬಜೆಟ್ಟಿನಲ್ಲಿ ಈಗ ಶಿಕ್ಷಣಕ್ಕಾಗಿ ಮೀಸಲಿರಿಸಿರುವ ಮೊತ್ತವನ್ನು ಕನಿಷ್ಠ ದುಪ್ಪಟ್ಟುಗೊಳಿಸಬೇಕು. ನಾಡಿನ ಭವಿಷ್ಯದ ದೃಷ್ಟಿಯಿಂದ ಶಿಕ್ಷಣದ ಮಹತ್ವವನ್ನು ಅರಿತು ಈ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.

- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.