ಶುಕ್ರವಾರ, ಆಗಸ್ಟ್ 6, 2021
21 °C

ವಾಚಕರ ವಾಣಿ | ಗತಕಾಲಕ್ಕೆ ಕೊಂಡೊಯ್ದ ‘ಕೋಲ್ಮಿಂಚು’ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋವಿಡ್ ಕಾಲದ ಕೋಲ್ಮಿಂಚುಗಳು’ ತಲೆಬರಹದಡಿ ಮಾನವೀಯ ಮತ್ತು ಭಾವನಾತ್ಮಕವಾದ ಎರಡು ವಿಶೇಷ ಬರಹಗಳು (ಪ್ರ.ವಾ., ಜುಲೈ 12) ಹಿಂದಿನ ಜನಜೀವನವನ್ನು ನೆನಪು ಮಾಡಿಕೊಡುವ ಮೂಲಕ ನಮ್ಮ ಸಂಸ್ಕೃತಿಯೆಡೆಗೆ ಮತ್ತೆ ಹೋಗಬೇಕಾದ ಅನಿವಾರ್ಯವನ್ನು ಒತ್ತಿ ಹೇಳಿವೆ. ಈ ಭಾಗದಲ್ಲಿ ಮುಯ್ಯಾಳು ಎನ್ನುವ ಪದ್ಧತಿ ಜಾರಿಯಲ್ಲಿತ್ತು. ಅದೀಗ ಕೂಲಿಯಾಳು ಕೊರತೆಯಿಂದ ಶಿರಸಿಯಲ್ಲಿ ಭತ್ತದ ನಾಟಿ ಸಂದರ್ಭದಲ್ಲಿ ಮತ್ತೆ ಚಾಲ್ತಿಗೆ ಬಂದಿದೆ.

ಐದಾರು ದಶಕಗಳ ಹಿಂದೆ ಶಿಕ್ಷಣಕ್ಕೆ ಮಹತ್ವ ಇಲ್ಲದ ಸಂದರ್ಭದಲ್ಲಿ ಕೂಲಿ ಮಠದ ವ್ಯವಸ್ಥೆ ಇತ್ತು. ಅದೇ ರೀತಿ, ಕಲಬುರ್ಗಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರು ವಾಸವಿರುವ ವಠಾರಕ್ಕೇ ತೆರಳಿ ಪಾಠ ಮಾಡುತ್ತಿರುವುದು ಶ್ಲಾಘನೀಯ. ಬದಲಾದ ಸನ್ನಿವೇಶದಲ್ಲಿ ಗತಕಾಲದ ಇಂತಹ ಕ್ರಮಗಳು ಮರುಜೀವ ಪಡೆದಿರುವುದು ಕೊರೊನಾ ಮಹಿಮೆ.
-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು