ಊಟ ಮುಗಿಸಿದವರು ಜಾಗ ಬಿಡಬೇಕು

‘ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ’ ಎನ್ನುವ ಗಾದೆಗೆ ಮತ್ತೆ ಜೀವ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಮಿಕಿಮಿಕಿ ನೋಡುವಂತಾಗಿದೆ. ಕೆಲವೇ ವರ್ಷಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನಡುವೆ ನಡೆದ ಹಗ್ಗಜಗ್ಗಾಟ ಮತ್ತೆ ಬೀದಿಗೆ ಬಂದಿದೆ. ಪಾತ್ರಗಳು ಬೇರೆ, ಕಥಾವಸ್ತು ಒಂದೇ.

ಅರ್ಧ ಅವಧಿಗಾದರೂ ಮತ್ತೆ ಸಿ.ಎಂ. ಮಾಡಿರಿ, ದಾಖಲೆ ಆಸೆ ಈಡೇರಿಸಿ
ಕೊಳ್ಳುವೆ ಎಂದು ದುಂಬಾಲು ಬಿದ್ದಿದ್ದ ಟಗರು ಈಗ ಮತ್ತೂ ಮತ್ತೂ ನಾನೇ ಸಿ.ಎಂ., ನಾನಿಲ್ಲದಿದ್ದರೆ ಸರ್ಕಾರವೇ ಇಲ್ಲ ಎಂದು ಗುಟುರು ಹಾಕುತ್ತಿದೆ. ಶ್ರಮಕ್ಕೆ ತಕ್ಕ ಕೂಲಿ ಕೊಡಿ ಎಂದು ಕೇಳುತ್ತಿರುವ ಬಂಡೆಗೆ ಸತ್ಯದರ್ಶನ ಆಗತೊಡಗಿದೆ. ಇಂದು ಇಲ್ಲವಾದರೆ ಮತ್ತೆಂದೂ ಇಲ್ಲ... ಎಂಬ ಅಂತರ್ಬೋಧೆ ಅದನ್ನು ಬಡಿದೆಬ್ಬಿಸುತ್ತಿದೆ.

ಊಟ ಆದ ಮೇಲೆ ಮೇಲೆದ್ದು ಹಸಿದವರಿಗೆ ಜಾಗ ಬಿಟ್ಟುಕೊಡುವುದು ಸುಸಂಸ್ಕೃತ ನಡವಳಿಕೆ. ಇದನ್ನು ಬೇರೆ ಯಾರಿಂದಲೂ ಬಾಯಿಬಿಟ್ಟು
ಹೇಳಿಸಿಕೊಳ್ಳಬಾರದು.

ಟಿ. ಗೋವಿಂದರಾಜು, ಬೆಂಗಳೂರು

ಹುದ್ದೆಯ ಗೌರವ ರಾಜ್ಯಪಾಲರದೇ ಹೊಣೆ

ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರ ನ್ಯಾಯಾಲಯ ವ್ಯಾಖ್ಯಾನ ಮಾಡಬೇಕಾಗಿ ಬರುವಂತಹ ಸ್ಥಿತಿ ಬಂದುದು ದುರದೃಷ್ಟಕರ. ಇದಕ್ಕೆ ಕಾರಣ, ಕೇಂದ್ರವು ಆ ಹುದ್ದೆಗಳಿಗೆ ರಾಜಕೀಯ ನಿರಾಶ್ರಿತರನ್ನು ನೇಮಿಸುತ್ತಿರುವುದು. ಕೇಂದ್ರದ ಆಣತಿಯಂತೆ ವರ್ತಿಸಿ ಅವರ ಋಣವನ್ನು ತೀರಿಸುವ ವ್ಯವಸ್ಥೆ ಬದಲಾಗಬೇಕಾಗಿದೆ. ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಹುದ್ದೆಗಳಿಗೆ ಸಂವಿಧಾನದಡಿ ದತ್ತವಾಗಿರುವ ಘನತೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ ವ್ಯಾಖ್ಯಾನ ಮಾಡಿದೆಯಷ್ಟೇ. ಅಂದಾಕ್ಷಣ ರಾಜ್ಯಪಾಲರ ನಿಷ್ಕ್ರಿಯತೆ ಅಥವಾ ನಿರ್ಧಾರಗಳು ಸರಿ ಎಂದು ಅರ್ಥ ಅಲ್ಲ. ಸ್ಥಾನದ ಗೌರವವನ್ನು ಕಾಪಾಡಬೇಕಾದ ಹೊಣೆ ಆ ಹುದ್ದೆ ಅಲಂಕರಿಸಿದವರದು.

ಕೆ.ಎಂ. ನಾಗರಾಜು, ಮೈಸೂರು

ಸಾರ್ವಜನಿಕ ಎಚ್ಚರಕ್ಕೆ ಮೊಬೈಲ್ ಪೊರೆ

ಟ್ರಾಫಿಕ್ ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ವರದಿಯಾಗಿದೆ. ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ತಡೆಯಲು ಸಾಕಷ್ಟು ಸಮಯವಿತ್ತು. ಆದರೆ, ಆ ವ್ಯಕ್ತಿಯ ಸುತ್ತ ನೆರೆದ ಅನೇಕರು ಮೂಕ ಪ್ರೇಕ್ಷಕರಂತೆ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ನಿಂತಿದ್ದುದು ವಿಷಾದಕರ. ಬೆಂಕಿ ಹಚ್ಚಿಕೊಂಡ ವ್ಯಕ್ತಿ ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಸ್ಥಳದಲ್ಲಿದ್ದವರು ಕೊಂಚ ಎಚ್ಚರ ವಹಿಸಿದ್ದರೆ ಅವಘಡ ತಪ್ಪಿಸಬಹುದಾಗಿತ್ತು.

ಮುರುಗೇಶ ಡಿ., ದಾವಣಗೆರೆ

ಮಾದಕ ದ್ರವ್ಯಗಳಿಂದ ಎಳೆಯರನ್ನು ರಕ್ಷಿಸಿ

ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದಲ್ಲಿ ಮಕ್ಕಳ
ಪಾಲ್ಗೊಳ್ಳುವಿಕೆಯ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. 2021ರಲ್ಲಿ 52 ಮಕ್ಕಳನ್ನು ಮಾದಕ ದ್ರವ್ಯ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. 2023ರಲ್ಲಿ
ಈ ಸಂಖ್ಯೆ 92ಕ್ಕೆ ಏರಿದೆ. 2024ರಲ್ಲಿ 120ಕ್ಕೂ ಹೆಚ್ಚು ಮಕ್ಕಳು ಬಂಧನ
ಕ್ಕೊಳಗಾಗಿದ್ದಾರೆ. ಸಿಂಥೆಟಿಕ್ ಮಾದಕ ದ್ರವ್ಯಗಳು ಹೊಸ ರೀತಿಯ ಸಮಸ್ಯೆ ತಂದೊಡ್ಡಿವೆ ಎಂದು ವರದಿಯಾಗಿದೆ. ಐವತ್ತಕ್ಕೂ ಹೆಚ್ಚು ರಾಸಾಯನಿಕ
ಸಂಯೋಜನೆಗಳನ್ನು ಹೊಂದಿರುವ ಇವುಗಳನ್ನು ಗುರುತಿಸುವುದು ವೈದ್ಯರಿಗೂ ಕಷ್ಟ. ಮಾದಕ ಪದಾರ್ಥಗಳ ಜಾಲದಲ್ಲಿ ಮಕ್ಕಳು ಬಳಕೆಯಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತರಲಿ.

ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು

ಗಂಧದ ಘಮ ರೈತರ ಬದುಕಲ್ಲೂ ಇರಲಿ

ಕರ್ನಾಟಕದ ಶ್ರೀಗಂಧದ್ದು ವಿಶ್ವಪ್ರಸಿದ್ಧಿ. ಆದರೆ, ಗಂಧದ ಮರಗಳ ಕೃಷಿಯಲ್ಲಿ ತೊಡಗಿರುವ ಕೃಷಿಕರ ಬವಣೆ ಹೇಳತೀರದು. ಶ್ರೀಗಂಧದ ಮರಗಳನ್ನು ರಕ್ಷಿಸಿಕೊಳ್ಳು ವಲ್ಲಿ ಹಾಗೂ ಮಾರಾಟ ಮಾಡುವಲ್ಲಿ ರೈತರು ಎದುರಿಸುವ ಸವಾಲು ಸಾಮಾನ್ಯ
ವಾದುದಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಸುತ್ತಿ ಸುತ್ತಿ ಬಸವಳಿಯ
ಬೇಕು. ಕಾಗದಪತ್ರಗಳ ಜಂಜಾಟದಲ್ಲಿ ದಣಿಯಬೇಕು. ಇದರ ಜೊತೆಗೆ, ಹಗಲಿರುಳು ಕಾವಲು ಕಾಯುವ ಸ್ಥಿತಿ. ಈ ಸಮಸ್ಯೆ–ಸವಾಲುಗಳ ಕುರಿತು ‘ಒಳನೋಟ’ಗಳನ್ನು ನೀಡುವ ಗಾಣಧಾಳು ಶ್ರೀಕಂಠರ ಲೇಖನ (ಪ್ರ.ವಾ., ನ. 23), ಸರ್ಕಾರದ ಕಣ್ಣನ್ನೂ ತೆರೆಸುವಂತಾಗಲಿ. ಆ ಮೂಲಕ ಶ್ರೀಗಂಧದ ಮರಗಳ ಬೆಳೆಗಾರರಿಗೆ ಅನುಕೂಲವಾಗುವ ನೀತಿ ರೂಪುಗೊಳ್ಳಲಿ.

ಬಸವಚೇತನ ಹೂಗಾರ್, ಬೀದರ್

ಮೌಲ್ಯಾಧಾರಿತ ಶಿಕ್ಷಣ ಈ ಹೊತ್ತಿನ ಅಗತ್ಯ

ನೂರಕ್ಕೆ ನೂರು ಅಂಕ ಅಥವಾ ಶೇ 100 ಫಲಿತಾಂಶವನ್ನೇ ಗುಣಮಟ್ಟದ ಶಿಕ್ಷಣದ ಮಾಪಕವಾಗಿ ನೋಡುವ ಪರಿಸ್ಥಿತಿ ರೂಪುಗೊಂಡಿದೆ. ಮಕ್ಕಳ ಚಿಂತನಾಶಕ್ತಿ, ಪ್ರಶ್ನಿಸುವ ಮನೋವೃತ್ತಿ, ಮೌಲ್ಯಗಳು, ಜೀವನ ಕೌಶಲ್ಯ ಇವುಗಳಿಗೆ ಮಹತ್ವ ಸಿಗುತ್ತಿಲ್ಲ. ಪಾಠಪುಸ್ತಕದ ಹೊರಗಿನ ಪ್ರಶ್ನೆ ಕೇಳಿದರೆ ಮಕ್ಕಳು ಕಣ್ಣು ಬಿಡುವಂತಾಗಿದೆ. ಶಿಕ್ಷಕರು ತರಗತಿಯಲ್ಲಿ ತೋರಿಸುವ ಶ್ರಮ ಹಾಗೂ ಬೋಧನೆಯಲ್ಲಿ ಅವರು ತರುತ್ತಿರುವ ಬದುಕಿನ ಅನುಭವ ಅಳೆಯಲು ಅಂಕಗಳೇ ಮಾನದಂಡವಲ್ಲ.

ಶಾಲೆಗಳಲ್ಲಿ ಪುಸ್ತಕದ ಜ್ಞಾನಕ್ಕೂ, ಬದುಕಿನ ಪಾಠಕ್ಕೂ ಸಮಾನ ಸ್ಥಾನ ಸಿಗಬೇಕು. ವಿಜ್ಞಾನ ಕಲಿಯುವ ಮಗುವಿಗೆ ತೆರೆದ ಮನಸ್ಸಿನಿಂದ ಪ್ರಶ್ನೆ ಕೇಳಲು ಧೈರ್ಯವಿರಬೇಕು. ಈ ಧೈರ್ಯ ಬೆಳೆಸಿದಾಗ ಮಾತ್ರ ಸಮಾಜ ಜ್ಞಾನವಂತ
ವಾಗುತ್ತದೆ. ‘ಒಳ್ಳೆಯ ನಾಗರಿಕ’ರ ಸೃಷ್ಟಿ ಮೌಲ್ಯಾಧಾರಿತ ಶಿಕ್ಷಣದಿಂದ ಸಾಧ್ಯವೇ ಹೊರತು, ಅಂಕಗಳಿಂದಲ್ಲ.

ಶಿವಯೋಗಿ ಎಂ.ವಿ., ರಾಂಪುರ

ಗಾಳ–ದಾಳ!

ಅವರಿಂದ ಗಾಳ
ಇವರಿಂದ ದಾಳ
ಅವರು ಬಗ್ಗಲ್ಲ
ಇವರು ಜಗ್ಗಲ್ಲ
‘ಕುರ್ಚಿ’ ಕಚ್ಚಾಟದಲ್ಲಿ
ಕೇಳೋರು ಯಾರು
ಜನಸಾಮಾನ್ಯರ ಗೋಳ!

ಮ.ಗು. ಬಸವಣ್ಣ, ಮೈಸೂರು