ಬುಧವಾರ, ಮಾರ್ಚ್ 22, 2023
26 °C

ವಾಚಕರ ವಾಣಿ | ಸ್ಯಾಂಟ್ರೊ ರವಿ ಸಿಕ್ಕಿದ್ದಕ್ಕೆ ADGP ಹರಕೆ ತೀರಿಸಿದ ಕುರಿತು ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಚಾರ ಆರೋಪದ ಮೇಲೆ ಸ್ಯಾಂಟ್ರೊ ರವಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್ ಅವರು ದೇವಾಲಯವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ರವಿಯ ಬಂಧನಕ್ಕಾಗಿ ತಾವು ಹೊತ್ತಿದ್ದ ಹರಕೆ ಫಲಪ್ರದವಾಗಿದ್ದಕ್ಕೆ ಈ ಪೂಜೆ ಎಂದು ಅವರು ಸ್ವತಃ ಕಾರಣ ನೀಡಿದ್ದಾರೆ! ಸ್ಯಾಂಟ್ರೊ ರವಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ ಎಂಬುದು ಆತನದು ಎನ್ನಲಾದ ಆಡಿಯೊ ಕ್ಲಿಪಿಂಗ್‌ಗಳಿಂದ ತಿಳಿದುಬರುತ್ತದೆ. ಹೀಗಿದ್ದೂ ಆತನ ಬಂಧನ ಅಷ್ಟೊಂದು ಕ್ಲಿಷ್ಟಕರವಾಗಿತ್ತೇ ಎಂಬ ಅನುಮಾನ ಮೂಡದಿರದು.

ಇದನ್ನೂ ಓದಿ: ಸ್ಯಾಂಟ್ರೊ ರವಿ ಸಿಕ್ಕಿದ್ದಕ್ಕೆ ನಿಮಿಷಾಂಬಾ ದೇವಿಗೆ ಹರಕೆ ತೀರಿಸಿದ ADGP ಅಲೋಕ್‌

ಇತರ ಅನೇಕ ಪ್ರಕರಣಗಳಲ್ಲಿ ಹಲವಾರು ದಿನಗಳು ಕಳೆದರೂ ಆರೋಪಿಗಳ ಬಂಧನ ಆಗಿರುವುದಿಲ್ಲ. ಇಂತಹ ಪ್ರಕರಣಗಳಲ್ಲೂ ಆರೋಪಿಗಳು ಬೇಗ ಪೊಲೀಸರಲ್ಲಿ ಶರಣಾಗಲೆಂದು ಅಥವಾ ಅವರ ಬಂಧನವಾಗಲೆಂದು ಪೊಲೀಸ್ ಅಧಿಕಾರಿಗಳು ದೇವರಿಗೆ ಹರಕೆ ಹೊರಲಿ.
–ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು