ಗುರುವಾರ , ಆಗಸ್ಟ್ 18, 2022
24 °C

ಶುಲ್ಕ ಗೊಂದಲ: ಅನಗತ್ಯ ಗುದ್ದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸರ್ಕಾರ ಹಾಗೂ ಪೋಷಕರ ನಡುವಿನ ಶುಲ್ಕ ಗೊಂದಲದ ಗುದ್ದಾಟದಲ್ಲಿ ಶಿಕ್ಷಕರು ಬಡವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಕೊರೊನಾ ಕಾರಣದಿಂದ ಬಹುತೇಕ ಖಾಸಗಿ ಶಾಲೆಗಳು ಶಿಕ್ಷಕರ ಸಂಖ್ಯೆಯನ್ನು ಶೇ 50ಕ್ಕಿಂತ ಕಡಿಮೆ ಮಾಡಿರುವುದಲ್ಲದೆ, ಸಂಬಳದಲ್ಲೂ ಕಡಿತ ಮಾಡಿವೆ.

ಶಾಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಡಲು ಶ್ರಮಿಸುವ ಶಿಕ್ಷಕರ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಇಲ್ಲಿ ಸರ್ಕಾರವು ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದರ ಬದಲು, ಆಯಾ ಶಾಲಾ ಸಿಬ್ಬಂದಿಗೆ ಕಾಲಕಾಲಕ್ಕೆ ಸಂಬಳ ಸಿಗುವಂತೆ ಮಾಡಲಿ. ಅವರ ಆರೋಗ್ಯದ ಬಗೆಗೆ ಕಾಳಜಿ ವಹಿಸಲಿ. ಯಾರಾದರೂ ಅಕಾಲಿಕವಾಗಿ ಮರಣ ಹೊಂದಿದರೆ ಅವರ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ನೆರವಾಗುವ ರೀತಿಯಲ್ಲಿ ಮಾನದಂಡ
ಗಳನ್ನು ರೂಪಿಸಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಿ. ಆಗ ಬಡಪಾಯಿ ಶಿಕ್ಷಕರನ್ನು ನಂಬಿರುವ ಕುಟುಂಬಗಳಿಗೆ ಆಸರೆಯಾದೀತು. ಅದು ಬಿಟ್ಟು, ಬಹುತೇಕ ಉಳ್ಳವರೇ ತಮ್ಮ ಮಕ್ಕಳನ್ನು ಸೇರಿಸುವ ಶಾಲೆಗಳ ಶುಲ್ಕದ ಬಗ್ಗೆ ಅನಗತ್ಯ ಗುದ್ದಾಟ ಬೇಡ.

- ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು