ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಮಾರಣಹೋಮಕ್ಕೆ ಅವಕಾಶ ಬೇಡ

Last Updated 14 ಜುಲೈ 2019, 20:15 IST
ಅಕ್ಷರ ಗಾತ್ರ

ಗೋವಾಕ್ಕೆ ಹೊಸ ವಿದ್ಯುತ್‌ ಮಾರ್ಗ ನಿರ್ಮಿಸಲು ರಾಜ್ಯ ವ್ಯಾಪ್ತಿಯ ಪಶ್ಚಿಮ ಘಟ್ಟದ 177 ಹೆಕ್ಟೇರ್‌ ಕಾಡು ನಾಶವಾಗಲಿದೆ ಎನ್ನುವ ವರದಿ ಓದಿ (ಪ್ರ.ವಾ., ಜುಲೈ 14) ದಿಗಿಲಾಯಿತು.

ಗದಗ, ಧಾರವಾಡ ಭಾಗಕ್ಕೆ ಮೂಲ ಅಗತ್ಯವಾದ ಕುಡಿಯುವ ನೀರು ಒದಗಿಸುವ ಉದ್ದೇಶಿತ ಕಳಸಾ ಬಂಡೂರಿ ಯೋಜನೆಯನ್ನು ವಿರೋಧಿಸಿ, ನದಿ ತಿರುವಿನಿಂದ ಅರಣ್ಯ ನಾಶ, ಪರಿಸರ ಹಾನಿ, ಜಲಚರಗಳ ನಾಶವಾಗುತ್ತದೆ ಎನ್ನುವ ಗೋವಾ ಸರ್ಕಾರವು ಈಗ ತನ್ನ ರಾಜ್ಯದ ವಿದ್ಯುತ್ ಸರಬರಾಜಿಗೆ ಲಕ್ಷಾಂತರ ಮರಗಳ ಮಾರಣಹೋಮಕ್ಕೆ ಪೀಠಿಕೆ ಹಾಕುತ್ತಿರುವುದನ್ನು ಸಹಿಸಲಾಗದು. ಅರಣ್ಯ ನಾಶಕ್ಕೆ ಕಾರಣವಾಗುವ ಈ ಬಗೆಯ ಯೋಜನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು.

- ಎಸ್.ನಾಗರಾಜ ನಾಗೂರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT