ಭಾನುವಾರ, ಜನವರಿ 17, 2021
22 °C

ದಾರಿ ತೋರಬೇಕಾದವರೇ ಗಲಿಬಿಲಿಗೆ ಒಳಗಾದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಜುವಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಪ್ರಕಟವಾಗಿದೆ (ಪ್ರ.ವಾ., ನ. 26). ಸಮಾಜ ತಪ್ಪು ಹಾದಿಯಲ್ಲಿ ನಡೆದಾಗ ಅಥವಾ ಗೊಂದಲದಲ್ಲಿ ಸಿಲುಕಿಕೊಂಡಾಗ, ಒಳ್ಳೆಯ ವಿಚಾರಗಳನ್ನು ತಿಳಿಸಿ ಸಮಾಜವನ್ನು ಸರಿದಾರಿಗೆ ತರಬೇಕಾದದ್ದು ಸ್ವಾಮೀಜಿಗಳ ಆದ್ಯ ಕರ್ತವ್ಯ.

ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಬೇಕಾದ ಸ್ವಾಮಿಗಳೇ ಸ್ವತಃ ಗಲಿಬಿಲಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವವರು ಯಾರು? ಸನ್ಮಾರ್ಗ ಯಾವುದು ಎಂದು ತಿಳಿಸಬೇಕಾದ ಅನೇಕ ಮಾಧ್ಯಮಗಳು ಅಂತಹ ಕೆಲಸವನ್ನು ಬಹುತೇಕ ನಿಲ್ಲಿಸಿವೆ. ಇರುವುದರಲ್ಲಿ ಪುರಾಣ ಪ್ರವಚನ, ಸ್ವಾಮಿಗಳ ಉಪನ್ಯಾಸಗಳು ಕೊಂಚಮಟ್ಟಿಗೆ ಆ ಕೊರತೆಯನ್ನು ನೀಗುತ್ತಿವೆ. ಈಗ ಅದನ್ನೂ ಕಳೆದುಕೊಂಡರೆ ನೀತಿ ಹೇಳುವವರು ಯಾರು? ಸ್ವಾಮಿಗಳೇ ಆತ್ಮಹತ್ಯೆಗೆ ಶರಣಾಗುವುದು ಸಮಾಜದ ದುರಂತ ಮತ್ತು ದೌರ್ಭಾಗ್ಯ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.