ಸೋಮವಾರ, ಜೂನ್ 21, 2021
21 °C

ವಾಚಕರ ವಾಣಿ: ಸುಶಿಕ್ಷಿತರ ಮೌಢ್ಯ; ಬೇಕು ವಿಶೇಷ ಅಧ್ಯಯನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ ಪಡೆಯುವವರ ಸಂಖ್ಯೆ ಮತ್ತು ವಿಜ್ಞಾನದ ಬೆಳವಣಿಗೆ ಹೆಚ್ಚಾದಂತೆ ಮೌಢ್ಯ ಹಾಗೂ ಮೌಢ್ಯ ಪ್ರಚಾರಕರು ಕೂಡ ಹೆಚ್ಚಾಗುತ್ತಿದ್ದಾರೆ ಎಂದು ಪ್ರೊ. ಅಬ್ದುಲ್ ರೆಹಮಾನ್ ಪಾಷ ತಮ್ಮ ಲೇಖನದಲ್ಲಿ (ಸಂಗತ, ಆ. 20) ಉಲ್ಲೇಖಿಸಿದ್ದಾರೆ.

ಸುಶಿಕ್ಷಿತರ ಮೌಢ್ಯ ಆಚರಣೆ ಕುರಿತು ವಿಶೇಷವಾದ ಅಧ್ಯಯನಗಳೇ ನಡೆಯಬೇಕೇನೊ. ಇಂಥ ಆಚರಣೆ ನಡೆಸುವವರಲ್ಲಿ ವಿಜ್ಞಾನವನ್ನು ಬೋಧಿಸುವ, ಸಂಶೋಧಿಸುವ ಶಿಕ್ಷಕರು, ಉಪನ್ಯಾಸಕರು, ಪ್ರೊಫೆಸರ್‌ಗಳು ಮತ್ತು ವಿಜ್ಞಾನಿಗಳು ಕೂಡ ಇದ್ದಾರೆ. ಇಂತಹವರನ್ನು ಕುರಿತೇ ಕುವೆಂಪು ಅವರು ‘ವಿಜ್ಞಾನದ ಭಾರವನ್ನು ಹೊತ್ತು ತಿರುಗುವ ಹೇಸರಗತ್ತೆಗಳು’ ಎಂದು ಕರೆದಿರಬಹುದು.

ರಾಜಕಾರಣಿಗಳಿಗಾದರೆ ಮೌಢ್ಯಾಚರಣೆಯಿಂದ ಜಾತಿ-ಸಮುದಾಯಗಳ ಮತಬೇಟೆಯ ಲಾಭ ಸಿಗಬಹುದೇನೊ. ಆದರೆ ವಿಜ್ಞಾನ ಆಧಾರಿತ ಈ ಕೆಲವು ವೃತ್ತಿನಿರತರಿಗೆ ಆತ್ಮವಂಚನೆಯ ವಿನಾ ಬೇರೇನು ಸಿಗುತ್ತದೋ ಅರ್ಥವಾಗುವುದಿಲ್ಲ. ಆದರೆ ಇಂಥ ಬೋಧಕರು, ಸಂಶೋಧಕರು ತಮ್ಮ ಬೋಧನೆ ಮತ್ತು ಸಂಶೋಧನೆಗಳಲ್ಲಿ ಒಂದನ್ನು ಪ್ರತಿಪಾದಿಸಿ, ನಡೆ-ನುಡಿಯಲ್ಲಿ ಮತ್ತೊಂದನ್ನು ಪ್ರತಿಪಾದಿಸುತ್ತ ಜನಸಾಮಾನ್ಯರನ್ನು ದ್ವಂದ್ವಕ್ಕೆ ಸಿಲುಕಿಸುವುದು ಸರಿಯೇ?
-ಡಿ.ಎಂ.ನದಾಫ್, ಅಫಜಲಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು