ವಾಚಕರ ವಾಣಿ: ತೈಲದ ಬೆಲೆ ಮತ್ತು ತೋಳದ ಕಥೆ!
ಮೇಲಿನಿಂದ ಕೆಳಗೆ ನೀರು ಹರಿಯುವಾಗ, ಮೇಲೆ ನೀರು ಕುಡಿಯುತ್ತಿದ್ದ ತೋಳವು ಕೆಳಗೆ ನೀರು ಕುಡಿಯುತ್ತಿದ್ದ ಕುರಿಯೊಂದಿಗೆ ‘ನೀನೇ ನೀರು ಎಂಜಲು ಮಾಡಿದ್ದು’ ಎನ್ನುತ್ತಾ ಕಾಲು ಕೆರೆದು ಜಗಳ ಮಾಡಿತು. ‘ನಾನು ಕೆಳಗೆ ನೀರು ಕುಡಿಯುತ್ತಿದ್ದೇನೆ, ನಿನಗೆ ಹೇಗೆ ಎಂಜಲಾದೀತು?’ ಎಂದಾಗ ‘ಅದೆಲ್ಲಾ ನನಗೆ ಗೊತ್ತಿಲ್ಲ, ನೀನಲ್ಲವಾದರೆ ನಿನ್ನ ಅಪ್ಪ, ಅಜ್ಜ ಇರಬಹುದು’ ಎಂದು ತೋಳ ತನ್ನ ವಾದವನ್ನು ಸಮರ್ಥಿಸಲು ನೋಡಿತು. ನಿರಂತರವಾಗಿ ಏರುತ್ತಿರುವ ತೈಲ ಬೆಲೆ ಏರಿಕೆಯ ಕಾರಣದ ಹೊಣೆಯನ್ನು ಸರ್ಕಾರ ಇನ್ನೊಬ್ಬರಿಗೆ ಹೊರಿಸುವಾಗ, ಈ ಕಥೆ ಏನಾದರೂ ನೆನಪಿಗೆ ಬಂತೇ?
ಭರತ್ ಬಿ.ಎನ್., ಮೈಸೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.