ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸರ್ಗದ ಆರಾಧನೆಗೆ ಬೇಕಿರುವುದು ಕೃತಕ ಪರಿಸರವಲ್ಲ

Last Updated 29 ಸೆಪ್ಟೆಂಬರ್ 2021, 18:26 IST
ಅಕ್ಷರ ಗಾತ್ರ

ಜೋಗದ ಬಳಿ ಪಂಚತಾರಾ ಹೋಟೆಲ್‍ಗೆ ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ನಿರ್ಧಾರ ಆಘಾತ ಕಾರಿಯಾದುದು. ಶಿವಮೊಗ್ಗದಿಂದ ಕೇವಲ ನೂರು ಕಿಲೊ ಮೀಟರ್ ದೂರದಲ್ಲಿರುವ ಜಲಪಾತದ ಹತ್ತಿರ ಇಂತಹ ಕಟ್ಟಡಗಳು ಅವಶ್ಯವೇ? ಪ್ರವಾಸಿಗರು ಉಳಿದುಕೊಳ್ಳಲು ಶಿವಮೊಗ್ಗ ಅಥವಾ ಕೇವಲ 30 ಕಿಲೊ ಮೀಟರ್ ದೂರದಲ್ಲಿರುವ ಸಾಗರದಲ್ಲಿ ಎಂತಹ ಪಂಚತಾರಾ ಹೋಟೆಲ್‍ಗಳನ್ನು ಬೇಕಾದರೂ ನಿರ್ಮಿಸಬಹುದಲ್ಲವೇ?

ಪಾರಂಪರಿಕ ಪ್ರಕೃತಿ ತಾಣಗಳನ್ನು ಮೂಲ ರೂಪದಲ್ಲಿ ಉಳಿಸಿಕೊಳ್ಳುವುದು ಆದ್ಯತೆಯಾಗಬೇಕೇ ವಿನಾ ಅಲ್ಲಿರುವ ಅರಣ್ಯ ನಾಶಪಡಿಸಿ ಕೃತಕ ಪರಿಕರಗಳನ್ನು ನಿರ್ಮಿಸುವುದಲ್ಲ. ಹಾಗೆಯೇ ರೋಪ್ ವೇ, ಜಿಪ್‌ ವೇಗಳ ಅವಶ್ಯಕತೆಯೂ ಇಲ್ಲ. ಅಲ್ಲಿನ ರುದ್ರ ರಮಣೀಯ ಸೌಂದರ್ಯವನ್ನು ಸವಿಯಲು ಸಂವೇದನಾಶೀಲ ಮನಸ್ಸು ಬೇಕೇ ವಿನಾ ಕೃತಕ ಪರಿಕರಗಳಲ್ಲ. ಕರ್ನಾಟಕದ ಹೆಮ್ಮೆಯಾದ ಜೋಗ ಜಲಪಾತದ ಸೌಂದರ್ಯವನ್ನು ಉಳಿಸಲು ಪರಿಸರ ಮಾರಕ ಅಭಿವೃದ್ಧಿಯನ್ನು ಮೊದಲು ತಡೆಯಬೇಕಾಗಿದೆ.ಶ್ರೀ

– ಡಾ. ಎಸ್.ಶಿಶುಪಾಲ,ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT