ಬುಧವಾರ, ಆಗಸ್ಟ್ 10, 2022
23 °C

ವಾಚಕರ ವಾಣಿ: ಮಾದಕ ವಸ್ತುಗಳು ಇನ್ನೂ ಹಲವಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸ್ತುತ ಪ್ರಚಲಿತದಲ್ಲಿರುವ ಡ್ರಗ್ಸ್ ಜಾಲದ ಪ್ರಕರಣವು ಮಾಧ್ಯಮಗಳಲ್ಲಿ ತುಂಬಾ ಸುದ್ದಿಯಾಗುತ್ತಿದ್ದು ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಲವಾರು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇದರಲ್ಲಿ ಸಿಕ್ಕಿಬಿದ್ದವರು ಹಾಗೂ ಸಿಕ್ಕಿಹಾಕಿಕೊಳ್ಳುವವರು ಎಲ್ಲರೂ ಉನ್ನತ ವರ್ಗದ ಜನರು. ಯಾರೇ ಮಾಡಿದರೂ ಅಪರಾಧ ಅಪರಾಧವೇ. ಆದರೆ ಕೇವಲ ಕೆಲವೇ ಕೆಲವು ವಸ್ತುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಿ ಇವುಗಳ ಮಾರಾಟ ಹಾಗೂ ಸೇವನೆಯನ್ನು ಅಪರಾಧವೆಂದು ಪರಿಗಣಿಸುವುದು ಎಷ್ಟರ ಮಟ್ಟಿಗೆ ಸರಿ? ಕೇವಲ ಇವುಗಳು ಮಾತ್ರ ಆರೋಗ್ಯಕ್ಕೆ ಹಾನಿಕರವೇ? ಕೇವಲ ಇವುಗಳು ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವಯೇ? ಕೇವಲ ಇವುಗಳು ಮಾತ್ರ ವಿದ್ಯಾರ್ಥಿಗಳು ಮತ್ತು ಯುವಕರನ್ನು ಹಾಳು ಮಾಡುತ್ತವಯೇ? ಇಲ್ಲವಲ್ಲ ಇವುಗಳ ಜೊತೆಗೆ ಚಿಕ್ಕ ಮಕ್ಕಳ ಕೈಗೆ ಸುಲಭವಾಗಿ ಸಿಗುವ ಗುಟಕಾ ಪಾನಮಸಾಲಗಳು, ಕಾಲೇಜು ವಿದ್ಯಾರ್ಥಿಗಳು ಸ್ಟೈಲಾಗಿ ಹೊಗೆ ಬಿಡುವ ಬೀಡಿ ಸಿಗರೇಟಗಳು, ಯುವಕ ಯುವತಿಯರನ್ನು ನಶೆಯಲ್ಲಿ ತೇಲಿಸುತ್ತಿರುವ ಮಧ್ಯಪಾನಗಳು ಇವುಗಳೂ ಸಹ ಮಾದಕ ವಸ್ತುಗಳೆ. ಸರಕಾರ ಕೇವಲ ಇವುಗಳಿಂದ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಈ ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನು ಪ್ರೋತ್ಸಾಹಿಸುವುದು ಸರಿಯಲ್ಲ. ಇವುಗಳನ್ನು ಸಹ ಸರಕಾರ ನಿಷೇಧಿಸಿ ಇವುಗಳ ಮಾರಾಟ ಹಾಗೂ ಸೇವನೆಯನ್ನು ಅಪರಾಧವೆಂದು ಪರಿಗಣಿಸುವುದು ಅತಿ ಜರೂರಿನ ಸಂಗತಿಯಾಗಿದೆ.-ಚನ್ನಪ್ಪ ಗಂಟೇರ. ಉಪ್ಪುಣಸಿ, ಹಾನಗಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು