ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಪ್ರಮಾಣವಚನ ಸ್ವೀಕಾರದ ಈ ಪರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಲಾರಿ ಅಪಘಾತವಾಗಿ ಮಗುಚಿ ಬಿದ್ದಿತ್ತು. ಅಲ್ಲಿ ಸೇರಿದ ಜನರು ಚಾಲಕ, ಕ್ಲೀನರ್ ಅವರನ್ನು ರಕ್ಷಣೆ ಮಾಡುವುದು ಬಿಟ್ಟು, ಲಾರಿಯಲ್ಲಿ ಇದ್ದ ಸೋಪು, ಶಾಂಪೂ ಮತ್ತಿತರ ವಸ್ತುಗಳನ್ನು ಎಷ್ಟು ಸಿಗುತ್ತದೋ ಅಷ್ಟನ್ನು ಎತ್ತಿಕೊಂಡು ಓಡುತ್ತಿದ್ದರು. ಮತ್ತೊಮ್ಮೆ, ಪೆಟ್ರೋಲ್ ತುಂಬಿದ ಲಾರಿ ಮಗುಚಿದಾಗ ಜನರು ಅಪಾಯ ಲೆಕ್ಕಿಸದೆ, ಮನೆಯಲ್ಲಿನ ಪಾತ್ರೆ, ಚೊಂಬು, ಬಕೆಟ್‌ನಲ್ಲಿ ಸಿಕ್ಕಷ್ಟು ಪೆಟ್ರೋಲ್ ತುಂಬಿಸಿಕೊಂಡು ಓಡುತ್ತಿದ್ದರು.

ಇತ್ತೀಚೆಗೆ ರಾಜ್ಯದಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಪರಿ ನೋಡಿ ಈ ಘಟನೆಗಳು ನೆನಪಿಗೆ ಬಂದವು. ರಾಜ್ಯದ ಜನರು ಕೋವಿಡ್, ನೆರೆ ಹಾವಳಿ, ಬೆಲೆ ಏರಿಕೆ, ನಿರುದ್ಯೋಗದಂತಹ ಆಘಾತಗಳಿಂದ ಒದ್ದಾಡುತ್ತಿರುವಾಗ
ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಾ, ಸಿಕ್ಕರೆ ಸಾಕೆಂದು ಅವಸರಪಡುತ್ತಾ ಪರದಾಡುತ್ತಿದ್ದರು. ಸ್ಥಾನ ಸಿಕ್ಕವರಿಗೆ ಒಳಗೊಳಗೆ ಒಂದಿಷ್ಟು ಖುಷಿ, ಸಿಗದಿದ್ದವರ ಅಪಾರ ದುಃಖ ನೋಡಿ ರಾಜ್ಯದ ಜನ ಮುಸಿ ಮುಸಿ ನಗುತ್ತಿದ್ದರು. ಜನರ ಸೇವೆ ಮಾಡಲು ಲಾಬಿ ಮಾಡಿ ಸಚಿವರಾಗಬೇಕೇ ಎಂಬ ಪ್ರಶ್ನೆ ಮತದಾರನನ್ನು ಸದಾ ಕಾಡುತ್ತಲೇ ಇರುತ್ತದೆ. 

-ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.