ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photos| ಗಾಲ್ವಾನ್‌ ಕಣಿವೆಯಿಂದ ಹಿಂದೆ ಸರಿದಿದೆಯೇ ಚೀನಾ? ಈ ಉಪಗ್ರಹ ಚಿತ್ರಗಳಲ್ಲಿದೆ ಉತ್ತರ

ಭಾರತ ಚೀನಾ ನಡುವಿನ ಗಡಿ ಕಲಹ ಸದ್ಯಕ್ಕೆ ನಿಂತಿರಬಹುದು. ಆದರೆ, ಚೀನಾದ ‘ಪೀಪಲ್ಸ್‌ ಲಿಬರೇಷನ್‌ ಆರ್ಮಿ’ ಮಾತ್ರ ಗಾಲ್ವಾನ್‌ ಗಣಿವೆಯಿಂದ ಹಿಂದೆ ಸರಿದಿಲ್ಲ ಎಂಬುದನ್ನು ಅಮೆರಿಕದ ಮ್ಯಾಕ್ಸರ್‌ ಟೆಕ್ನಾಲಜೀಸ್‌ ಸಂಸ್ಥೆ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಿಂದ ಬಯಲಾಗಿದೆ. ಜೂನ್‌ 22ರಂದು ಈ ಫೊಟೊಗಳನ್ನು ತೆಗೆಯಲಾಗಿದೆ.ಕಲಹಕ್ಕೂ ಮೊದಲೇ ಗಡಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಚೀನಾ,ಗಾಲ್ವಾನ್‌ ನದಿ ಪಕ್ಕದಲ್ಲಿ ರಸ್ತೆ ನಿರ್ಮಿಸಿರುವುದು ಉಪಗ್ರಹ ಚಿತ್ರಗಳಿಂದ ಗೊತ್ತಾಗಿದೆ. ಅಲ್ಲದೆ, ನದಿ ತಿರುವೊಂದರಲ್ಲಿ ಅದು ಸಣ್ಣ ಸೇತುವೆಯನ್ನೂ ಮಾಡಿದೆ. ಚೀನಾದಈ ಎಲ್ಲ ಸಿದ್ಧತೆಗಳ ನಂತರವೇ ಗಡಿಯಲ್ಲಿ ಎರಡೂ ದೇಶಗಳ ನಡುವೆ ಕಲಹ ಸಂಭವಿಸಿತ್ತು. ಈಗ ಗಾಲ್ವಾನ್‌ ಕಣಿವೆಯಿಂದ ಹಿಂದೆ ಸರಿದಂತೆ ತೋರಿಸಿಕೊಂಡಿರುವ ಚೀನಾ, ನದಿ ತಟದಲ್ಲೇ ಸೇನಾ ಶಿಬಿರವನ್ನು ಹಾಕಿಕೊಂಡಿರುವುದು ಚಿತ್ರದಲ್ಲಿ ಕಾಣಬಹುದು. ಅಲ್ಲದೆ, ವಾಸ್ತವ ಗಡಿ ನಿಯಂತ್ರಣ ರೇಖೆಯ ಸಮೀಪದ ಗೋಂಕಾ ಪಾಸ್‌ ಎಂಬಲ್ಲಿ ಚೀನಾ ಬಹುದೊಡ್ಡ ಸೇನಾ ನೆಲೆಯನ್ನೇ ನಿರ್ಮಿಸಿಕೊಂಡಿದೆ. ಇದೆಲ್ಲದರ ಚಿತ್ರಗಳು ಇಲ್ಲಿವೆ.ಇನ್ನಷ್ಟುಗಡಿ ಸಂಘರ್ಷ | ಲಡಾಖ್‌ನಲ್ಲಿ ಯುದ್ಧವಾದರೆ ಚೀನಾ ಸೋಲಬಹುದು ಎನ್ನುತ್ತವೆ ಅಧ್ಯಯನಗಳು ಆಳ-ಅಗಲ | ಹಿಮನದಿ ಮೇಲೊಂದು ಸೇತುವೆ ಮಾಡಿ... ಭಾರತದ ಗಡಿಯಲ್ಲಿ ಟ್ಯಾಂಕ್, ಆರ್ಟಿಲರಿ, ಸೇನೆ ಜಮಾವಣೆ: ಆತಂಕ ಮೂಡಿಸಿದ ಚೀನಾ ನಡೆExplainer | ಚೀನಾ ಹೆಣೆದ 'ಮುತ್ತಿನಮಾಲೆ': ಭಾರತದ ಪಾಲಿಗೆ ಮಗ್ಗುಲಿನ ಕೆಂಡ
Published : 25 ಜೂನ್ 2020, 9:06 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT