Photos: ಮದುವೆ ಸಂಭ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ
ಮುಂಬೈ: ಬಾಲಿವುಡ್ನಲ್ಲಿ ಈಗ ಸಾಲು ಸಾಲು ಮದುವೆಯ ಸಂಭ್ರಮ. ಕಳೆದ ತಿಂಗಳಷ್ಟೇ ಕ್ರಿಕೆಟಿಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹವಾಗಿದ್ದರು. ಇದೀಗ ಬಾಲಿವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ತಾನದ ಜೈಸಲ್ಮೇರ್ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಲಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರುವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ. ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ವಿವಾಹವು ಅವರ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗುತ್ತಿದ್ದಾರೆ.
Kiara Advani |ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ಸಿದ್ಧಾರ್ಥ್ ಮಲ್ಹೊತ್ರಾ ಜೊತೆ ನಟಿ ಕಿಯಾರಾ ಅಡ್ವಾಣಿ ಫೆ.6ರಂದು ಮದುವೆಯಾಗಲಿದ್ದಾರೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಯುಗಾದಿ 2023: ನವ ಪಲ್ಲವ
ನಮಗೆ ನಿತ್ಯವೂ ನಿದ್ದೆಗೊಮ್ಮೆ ಮರಣ, ಮತ್ತೆ ಎದ್ದೊಡನೆ ಹೊಸಹುಟ್ಟು. ಯುಗಯುಗಾಂತರಗಳ ಹಿಂದೆಯೇ ಪ್ರಕೃತಿ ಹುಟ್ಟು ಪಡೆದರೂ ವರುಷಕ್ಕೊಮ್ಮೆ ಹೊಸಹುಟ್ಟು. ಪ್ರಕೃತಿ ಜೀವನ್ಮುಖಿ, ನಿಂತ ನೀರಲ್ಲ. ಕಾಲಕ್ಕೆ ಸರಿಯಾಗಿ ನಿಸರ್ಗದ ಬದಲಾವಣೆ ನಿರಂತರ. ಇದುವೇ ಋತುಮಾನ. ಋತುವಿನ ಆರಂಭವೆಂದರೆ ಹೊಸ ಜೀವನ ಯಾನ. ನವಿರು, ಸೊಗಸು, ವೈವಿಧ್ಯ ತುಂಬಿದ ನವ ಪಲ್ಲವಿಯ ಋತುಗಾನ. ಕಂಗೊಳಿಸುವ ನಿಸರ್ಗವನ್ನು ನೋಡುವುದೇ ಆಪ್ಯಾಯಮಾನ. ಈಗ ನಿಸರ್ಗದ ಹೋಳಿ ಆರಂಭಗೊಂಡಿದೆ. ಬೋಳಾದ ಮರಗಳಲ್ಲಿ ಬಣ್ಣಬಣ್ಣದ ಚಿಗುರೆಲೆಗಳು, ಹೂಗಳು ಮೂಡಿವೆ. ಎಲೆಯೋ ಹೂವೋ ತಿಳಿಯದಂತೆ ವರ್ಣಮಯ ಮರಗಳ ಒಡಲಲ್ಲಿ ವಿವಿಧ ಹಕ್ಕಿಗಳ ಹಾಡು ವಸಂತನ ಆಗಮನದ ಕುರುಹು ನೀಡುತ್ತಿವೆ. ಜೇನು ಹುಳು, ಭ್ರಮರದ ಉಲ್ಲಾಸ, ಕೀಟಗಳ ಹಾರಾಟ ಮಧುಪಾನದ ಕುರುಹಾಗಿದೆ. ಕಾಡೊಳಗೆ ವಿವಿಧ ಹೂಗಳ ಸುವಾಸನೆ ಮಿಶ್ರಿತಗೊಂಡು ವಿಶಿಷ್ಟ ಪರಿಮಳ ಪಸರಿಸುತ್ತಿದೆ. ಹೊಂಗೆಯ ಹುಲುಸು, ಅರಳಿಯ ಸೊಗಸು, ಬೇವಿನ ಕುಡಿ, ಮಾವಿನ ಮಿಡಿ, ಜಾಜಿ, ಜಾಲಿ, ಗೊಬ್ಬಳಿ ಹೂವಿನ ಚಪ್ಪರ, ರಸ್ತೆಯುದ್ದಕ್ಕೂ ಗುಲ್ಮೊಹರಿನ ಮೊಹರು. ಹಾದಿಗುಂಟ ಹೂ ಮಳೆ ಸುರಿಸಿದ ಮಳೆಮರ, ಕಾಪರ್ ಪಾಡ್ ಮರ ಭೂರಮೆಯ ಬೆಡಗಿಗೆ ಸಾಕ್ಷಿಯಾಗುತ್ತಲಿವೆ. ಹೂನಂತೆ ಭಾಸವಾಗುವ ತಿಳಿಗೆಂಪು, ಹಳದಿ, ನಸುಗೆಂಪು, ತಿಳಿಹಳದಿ, ಚಿನ್ನದ ಬಣ್ಣದ ಚಿಗುರೆಲೆಗಳ ಸೊಬಗು ಚೈತ್ರದಲ್ಲಿ ರಂಗುರಂಗಿನ ಹೋಳಿಯಾಟ ಆಡುತ್ತಲಿವೆ. ನಿಸರ್ಗದ ಉಲ್ಲಾಸವನ್ನು ನೋಡುವುದೇ ಒಂದು ದೊಡ್ಡಹಬ್ಬ. ಭೂಮಿ ಚಂದ್ರರ ಚಲನೆಯ ಪರಿಣಾಮದ ಫಲವೇ ಪ್ರಕೃತಿಯ ಸ್ಥಿತ್ಯಂತರದ ಭಾಗವಾಗುವ ಆಶಯ ನಮ್ಮಗಳದ್ದು. ಪ್ರಕೃತಿಯ ಹೊಸಹುಟ್ಟನ್ನು ನೋಡುತ್ತಾ ನಮ್ಮಲ್ಲೂ ಬದಲಾವಣೆಯ ತುಡಿತದೊಂದಿಗೆ ಉಲ್ಲಾಸದ ಆಚರಣೆಯೇ, ಉತ್ಸಾಹದ ಪ್ರತೀಕವೇ ಉಗಾದಿ ಹಬ್ಬದ ಹರುಷಕ್ಕೆ ಕಾರಣ. ಬಾಳಿನ ಸಿಹಿಕಹಿಯನ್ನು ಸಮನಾಗಿ ಸ್ವೀಕರಿಸುವ ಆಶಯವೇ ಹಬ್ಬದ ಹೂರಣ.
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo Gallery| ಚಿತ್ರಗಳಲ್ಲಿ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡ ಕೀರ್ತಿ ಸುರೇಶ್
ಹೈದರಾಬಾದ್: ತೆಲುಗಿನ ಬಹು ಬೇಡಿಕೆಯ ನಟಿ ಕೀರ್ತಿ ಸುರೇಶ್ ತಮ್ಮ ಹೊಸ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಚಿತ್ರಗಳಲ್ಲಿ ನಟಿ ತುಂಬಾ ಬೋಲ್ಡ್ಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ ಕೀರ್ತಿ ಕ್ಯೂಟ್ಯಾಗಿ ಕಾಣಿಸುತ್ತಿದ್ದು, ಕೆಲವು ಹೃದಯದ ಇಮೋಜಿಗಳನ್ನು ನೀಡಿದರೆ, ಇನ್ನೂ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Keerthy Suresh | Telugu Film Industry |ಬೋಲ್ಡ್ ಲುಕ್ನಲ್ಲಿ ನಟಿ ಕೀರ್ತಿ ಸುರೇಶ್
ಕ್ಯಾಮರಾಗೆ ಫೋಸ್ ನೀಡುತ್ತಿರುವ ಚಿತ್ರ
ಚಿತ್ರಗಳಲ್ಲಿ ನಟಿ ಬೋಲ್ಡ್ಯಾಗಿ ಕಾಣಿಸಿಕೊಂಡಿದ್ದಾರೆ.
ಸ್ಟೈಲಿಶ್ ಲುಕ್ನಲ್ಲಿ ಸುರೇಶ್
ದೃಶ್ಯಗಳಲ್ಲಿ ಕೀರ್ತಿ ಹಸಿರು ಆಭರಣದೊಂದಿಗೆ ಕಾಣಿಸಿಕೊಂಡಿದ್ದಾರೆ.
ಸ್ಟೈಲಿಶ್ ಲುಕ್ನಲ್ಲಿ ಕೀರ್ತಿ ಸುರೇಶ್
ನಟಿ ದಸರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಫೋಟೊ ಶೂಟ್ನಲ್ಲಿ ಕೀರ್ತಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo Gallery| ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ ಅನುಪಮಾ ಪರಮೇಶ್ವರನ್
ಹೈದರಾಬಾದ್: ತೆಲುಗಿನ ಕ್ಯೂಟ್ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ತಮ್ಮ ಹೊಸ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬಳೆಗಳನ್ನು ಧರಿಸಿದ್ದಾರೆ. ಹ್ಯಾಶ್ ಟ್ಯಾಗ್ನಲ್ಲಿ ಕರಿವಾಲಾ ಎಂದು ಬರೆದುಕೊಂಡಿದ್ದಾರೆ.
Anupama Parameswaran | Telugu Film Industry | actress |ಕಪ್ಪು ಬಣ್ಣದ ಉಡುಗೆಯಲ್ಲಿ ಅನುಪಮಾ
ಫೋಟೊಗೆ ಪೋಸ್ ಕೊಡುತ್ತಿರುವ ನಟಿ
ಕಪ್ಪು ಬಣ್ಣದಲ್ಲಿ ಮಿಂಚಿದ ಪರಮೇಶ್ವರನ್
ಕಪ್ಪು ಬಣ್ಣದ ಬಳೆಗಳೊಂದಿಗೆ ನಟಿ ಅನುಪಮಾ
ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ.
ನಗುವಿನೊಂದಿಗೆ ನಟಿ ಅನುಪಮಾ ಕಾಣಿಸಿಕೊಂಡ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ಸಾಂಪ್ರದಾಯಿಕ ಪಾತ್ರೆಗಳ ಪ್ರದರ್ಶನ ‘ಪಾತ್ರೆ’
ಮಾ.17ರಂದು ಬೆಂಗಳೂರಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕರ್ನಾಟಕ ಕರಕುಶಲ ಮಂಡಳಿ ಆಯೋಜಿಸಿದ್ದ ಸಾಂಪ್ರದಾಯಿಕ ಪಾತ್ರೆಗಳ ಪ್ರದರ್ಶನ 'ಪಾತ್ರೆ'ಯನ್ನು ಮೈಸೂರಿನ ಪ್ರಮೋದಾ ದೇವಿ ಒಡೆಯರ್ ವೀಕ್ಷಿಸಿದರು. ಕರ್ನಾಟಕ ಕರಕುಶಲ ಮಂಡಳಿ ಅಧ್ಯಕ್ಷರಾದ ಮಂಗಳಾ ನರಸಿಂಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಲಾಲ್, ಉಪಾಧ್ಯಕ್ಷೆ ಚಂದ್ರಾ ಜೈನ್ ಜತೆಗಿದ್ದರು.
vessel collection | Pramoda Devi Wadiyar |