ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ರಾಮ ಮಂದಿರ ಹೇಗೆ ಕಾಣಲಿದೆ ಗೊತ್ತೆ? ಇಲ್ಲಿವೆ ಚಿತ್ರಗಳು

ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದೆ. ಈ ಮಧ್ಯೆ ಸರ್ಕಾರ ದೇಗುಲದ ಹೊರ ರಚನೆಯ ನೀಲನಕ್ಷೆ ಬಿಡುಗಡೆ ಮಾಡಿದೆ.ಗೋಪುರಗಳು, ಕಂಬಗಳು ಮತ್ತು ಗುಮ್ಮಟಗಳನ್ನು ಒಳಗೊಂಡ ಮೂರು ಅಂತಸ್ತಿನ ಭವ್ಯವಾದ ರಚನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯದ ಯೋಜನೆಯ ಪ್ರಕಾರ ದೇಗುಲವು ಈ ಮೊದಲು ರೂಪಿಸಿದ್ದಕ್ಕಿಂತಲೂ ಎರಡು ಪಟ್ಟು ದೊಡ್ಡದಾಗುವ ಸಾದ್ಯತೆಗಳಿವೆ. ಭೂ ವ್ಯಾಜ್ಯ ಪ್ರಕರಣದಲ್ಲಿ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ.ದೇವಾಲಯವನ್ನು ನಗರಾ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದೆ. ಹೆಚ್ಚಿನ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಎರಡು ಗುಮ್ಮಟಗಳ ಬದಲಿಗೆ ಈಗ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ.
Published : 4 ಆಗಸ್ಟ್ 2020, 10:08 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT