PHOTOS: ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆ, ಬಿರು ಬಿಸಿಲಿಗೆ ತತ್ತರಿಸಿದ ಜನ
ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕ, ಒಡಿಶಾ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಜಮ್ಮು –ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಏರಿಕೆಯಾಗಿದೆ. ಈ ರಾಜ್ಯಗಳಲ್ಲಿ ಪ್ರತಿನಿತ್ಯ 40ರಿಂದ 44 ಡಿಗ್ರಿವರೆಗೂ ತಾಪಮಾನ ದಾಖಲಾಗುತ್ತಿದೆ. ತಾಪಮಾನ ಏರಿಕೆ ಆಗಿರುವುರಿಂದ ತಂಪು ಹವೆ ಕಡಿಮೆಯಾಗುತ್ತಿದೆ. ಮಹಿಳೆಯರು ತಲೆ ಮೇಲೆ ದುಪ್ಪಟ್ಟಾ ಹಾಕಿಕೊಂಡು ಓಡಾಡುತ್ತಿದ್ದಾರೆ. ವೃದ್ಧರು ಮತ್ತು ಮಕ್ಕಳು ಗಿಡ, ಮರಗಳ ನೆರಳಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಒಮ್ಮೆ ಹೊರಗೆ ಸುತ್ತಾಡಿ ಮನೆಗೆ ಬಂದರೆ ಜನರನ್ನು ‘ಸುಸ್ತು’ ಕಾಡುತ್ತಿದೆ. ಬಿಸಿಲು ಹೆಚ್ಚಿರುವುದರಿಂದ ಪ್ರಾಣಿಗಳು ಮತ್ತು ಪಕ್ಷಿ ಸಂಕುಲ ಅಪಾಯಕ್ಕೆ ಸಿಲುಕಿವೆ.
Temperature | Heat wave | Delhi | Rajasthan | Odisha | Summer Season |ಕೃಷ್ಣಾ ನದಿ ನೀರಿನಲ್ಲಿ ಈಜಾಟವಾಡುತ್ತಿರುವ ಹುಡುಗರು –ಪಿಟಿಐ ಚಿತ್ರ
ದೆಹಲಿಯಲ್ಲಿ ಜನರು ನೀರಿನ ಕಾರಂಜಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ –ಪಿಟಿಐ ಚಿತ್ರ
ಬಿಸಿಲಿನ ಬೇಗೆಯಿಂದ ತಲ್ಲಣಿಸಿರುವ ಮಹಿಳೆಯರು ತಲೆ ಮೇಲೆ ಬಟ್ಟೆ ಹೊದ್ದುಕೊಂಡಿರುವುದು -ಪಿಟಿಐ ಚಿತ್ರ
ದೆಹಲಿಯಲ್ಲಿ ವೃದ್ಧರೊಬ್ಬರು ಬಾಯಾರಿಕೆ ತಣಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು –ಪಿಟಿಐ ಚಿತ್ರ
ಬಿಸಿಲಿನ ಬೇಗೆಯಿಂದ ತಲ್ಲಣಿಸಿರುವ ಜನರು ಮುಖ ಮತ್ತು ತಲೆಯನ್ನು ಬಟ್ಟೆಯಿಂದ ಹೊದ್ದುಕೊಂಡಿರುವುದು -ಪಿಟಿಐ ಚಿತ್ರ
ಬಿಸಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು –ಪಿಟಿಐ ಚಿತ್ರ
ಬಿಸಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ತಲೆ ಮೇಲೆ ಬಟ್ಟೆ ಹೊದ್ದುಕೊಂಡಿರುವುದು -ಪಿಟಿಐ
ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಕೋತಿಯೊಂದು ನಲ್ಲಿಯಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಕ್ಯಾಮೆರಾಗೆ ಸೆರೆಯಾಗಿದ್ದು ಹೀಗೆ. –ಪ್ರಜಾವಾಣಿ ಚಿತ್ರ/ ವಿ.ಚಂದ್ರಪ್ಪ
ಕೋಲಾರದ ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ಅಂಗಡಿಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುತ್ತಿರುವ ಸಾರ್ವಜನಿಕರು
ಮೈಸೂರಿನಲ್ಲಿ ಬಿರುಬಿಸಿಲನ್ನು ತಡೆಯಲಾಗದ ರಸ್ತೆಬದಿ ವ್ಯಾಪಾರಿಗಳು ಕೊಡೆ ಹಿಡಿದು ವ್ಯಾಪಾರ ಮಾಡಿದ ದೃಶ್ಯ ಬುಧವಾರ ಕಂಡು ಬಂತು
ರಾಜ್ಯಸ್ಥಾನದಲ್ಲಿ ಸುಡುವ ಬಿಸಿನಲ್ಲಿ ಮಹಿಳೆಯರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ದೃಶ್ಯ
ದೆಹಲಿಯ ರಾಜ್ಘಾಟ್ನಲ್ಲಿ ಪ್ರವಾಸಿಗರು ನಲ್ಲಿಗಳಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಕಂಡುಬಂತು –ಪಿಟಿಐ ಚಿತ್ರ
ಅಮೃತಸರದ ನದಿಯೊಂದರಲ್ಲಿ ಬಾಲಕ ಈಜಾಟವಾಡುತ್ತಿರುವ ದೃಶ್ಯ –ಪಿಟಿಐ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | 100ನೇ ವಸಂತಕ್ಕೆ ಕಾಲಿಟ್ಟ ತಾಯಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಗುಜರಾತಿನ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದು, 100ನೇ ವಸಂತಕ್ಕೆ ಕಾಲಿಟ್ಟಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ. ಜತೆಗೆ ಕೆಲಹೊತ್ತು ತಾಯಿಯೊಂದಿಗೆ ಸಮಯ ಕಳೆದಿದ್ದಾರೆ. –ಪಿಟಿಐ ಚಿತ್ರಗಳು
Gujrat | Narendra Modi | Mother | Birthday |ಪ್ರಧಾನಿ ನರೇಂದ್ರ ಮೋದಿ ಅವರು 100ನೇ ವಸಂತಕ್ಕೆ ಕಾಲಿಟ್ಟಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.
ಹೀರಾಬೆನ್ ಮೋದಿ ಅವರ ಪಾದ ತೊಳೆಯುತ್ತಿರುವ ಪ್ರಧಾನಿ ಮೋದಿ
ತಾಯಿ ಹೀರಾಬೆನ್ ಅವರಿಂದ ಆರ್ಶೀವಾದ ಪಡೆದ ನರೇಂದ್ರ ಮೋದಿ
ತಾಯಿ ಹೀರಾಬೆನ್ ಅವರಿಗೆ ಪ್ರಧಾನಿ ಮೋದಿ ನಮಸ್ಕಾರ
ತಾಯಿ ಹೀರಾಬೆನ್ ಅವರಿಂದ ಆರ್ಶೀವಾದ ಪಡೆದ ನರೇಂದ್ರ ಮೋದಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ
ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಪೂರ್ಣಗೊಂಡಿದ್ದು, ಇದು ಸಾಧನೆಯ ಮೈಲಿಗಲ್ಲು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ. 1.3 ಕಿಲೋಮೀಟರ್ ಉದ್ದದ ಈ ಸೇತುವೆ ಕಾಶ್ಮೀರ ಕಣಿವೆಯ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಸೇತುವೆಯು ನೆಲಮಟ್ಟದಿಂದ 359 ಮೀಟರ್ ಎತ್ತರವಿದ್ದು, ಇದು ವಿಶ್ವ ವಿಖ್ಯಾತ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರದಲ್ಲಿದೆ. ಗಂಟೆಗೆ 266 ಕಿ.ಮೀ. ವೇಗದಲ್ಲಿ ಬೀಸುವ ಗಾಳಿ ಮತ್ತು ಹೆಚ್ಚಿನ ತೀವ್ರತೆಯ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಸೇತುವೆ ಹೊಂದಿದೆ.
Jammu and Kashmir | Railway bridge | Railway Department | Railway Ministry | Indian Railway |ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಪೂರ್ಣಗೊಂಡಿದೆ. (ಭಾರತೀಯ ರೈಲ್ವೆ ಇಲಾಖೆಯ ಟ್ವಿಟರ್ ಚಿತ್ರ)
1.3 ಕಿಲೋಮೀಟರ್ ಉದ್ದದ ಈ ಸೇತುವೆ ಕಾಶ್ಮೀರ ಕಣಿವೆಯ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. (ಭಾರತೀಯ ರೈಲ್ವೆ ಇಲಾಖೆಯ ಟ್ವಿಟರ್ ಚಿತ್ರ)
ಚೆನಾಬ್ ನದಿ ಮೇಲೆ ನಿರ್ಮಿಸಲಾಗಿರುವ ರೈಲ್ವೆ ಸೇತುವೆ (ಭಾರತೀಯ ರೈಲ್ವೆ ಇಲಾಖೆಯ ಟ್ವಿಟರ್ ಚಿತ್ರ)
ಈ ಸೇತುವೆ ನೆಲಮಟ್ಟದಿಂದ 359 ಮೀಟರ್ ಎತ್ತರದಲ್ಲಿದೆ. (ಭಾರತೀಯ ರೈಲ್ವೆ ಇಲಾಖೆಯ ಟ್ವಿಟರ್ ಚಿತ್ರ)
ಚೆನಾಬ್ ನದಿ ಮೇಲೆ ನಿರ್ಮಿಸಲಾಗಿರುವ ರೈಲ್ವೆ ಸೇತುವೆ (ಭಾರತೀಯ ರೈಲ್ವೆ ಇಲಾಖೆಯ ಟ್ವಿಟರ್ ಚಿತ್ರ)
ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಪರಿಶೀಲಿಸುತ್ತಿರುವ ಅಧಿಕಾರಿಗಳು –ಪಿಟಿಐ ಚಿತ್ರ
ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಪರಿಶೀಲಿಸುತ್ತಿರುವ ಅಧಿಕಾರಿಗಳು –ಪಿಟಿಐ ಚಿತ್ರ
ಚೆನಾಬ್ ನದಿ -ಪಿಟಿಐ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ರೈತರ ಹೋರಾಟಕ್ಕೆ ಗೆಲುವು; ನೆನಪುಗಳೊಂದಿಗೆ ಊರಿನತ್ತ ಹೆಜ್ಜೆ
ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರವು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿರುವ ರೈತರು ಹೋರಾಟದ ನೆನಪುಗಳೊಂದಿಗೆ ಊರಿನತ್ತ ಹೆಜ್ಜೆ ಹಾಕಿದರು. (ಚಿತ್ರಕೃಪೆ: ಪಿಟಿಐ, ಎಎಫ್ಪಿ, ಐಎಎನ್ಎಸ್)
Farmers protest | Farm Bills |ಪ್ರತಿಭಟನೆ ಹಿಂಪಡೆದ ರೈತರ ವಿಜಯೋತ್ಸವ
ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ರೈತರು
ಸಿಂಘು, ಟಿಕ್ರಿ, ಘಾಜಿಪುರ ಬಳಿ ಬೀಡು ಬಿಟ್ಟಿದ್ದ ರೈತರು
ಹೋರಾಟದ ಸ್ಥಳದಲ್ಲಿ ಹೆದ್ದಾರಿಗಳಿಗೆ ಹಾಕಿದ್ದ ತಡೆಗಳನ್ನು ತೆರವುಗೊಳಿಸಿದ್ದಾರೆ.
ರೈತರು ಕುಟುಂಬ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಹೋರಾಟದ ನೆನಪುಗಳೊಂದಿಗೆ ಊರುಗಳತ್ತ ಹೆಜ್ಜೆ
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.
ಹೋರಾಟದ ನೆಲವನ್ನು ತೊರೆಯುವಾಗ ರೈತರು ಭಾವುಕರಾಗಿದ್ದೂ ಕಂಡುಬಂತು.
ರೈತರು ಡಿ. 11 ಅನ್ನು ವಿಜಯ ದಿನವೆಂದು ಆಚರಿಸುತ್ತಿದ್ದಾರೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಹೆಲಿಕಾಪ್ಟರ್ ದುರಂತ; ತನಿಖೆಗೆ ಡ್ರೋನ್ ಬಳಕೆ; ರಾವತ್ಗೆ ಭಾವಪೂರ್ಣ ಶ್ರದ್ಧಾಂಜಲಿ
ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸುತ್ತಿದೆ. ವೆಲ್ಲಿಂಗ್ಟನ್ಗೆ ತಲುಪಿರುವ ತನಿಖಾಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
IAF | Bipin Rawat | investigation |ಹೆಲಿಕಾಪ್ಟರ್ ಪತನದಲ್ಲಿ ನಿಧನರಾದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ (ಚಿತ್ರ ಕೃಪೆ: ಐಎಎನ್ಎಸ್)
ತಮಿಳುನಾಡಿನ ಕೂನೂರಿನ ಅಪಘಾತ ನಡೆದ ಸ್ಥಳ ಪರಿಶೀಲಿಸಿದ ಸೇನಾ ಸಿಬ್ಬಂದಿ (ಚಿತ್ರ ಕೃಪೆ: ಎಎಫ್ಪಿ)
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ (ಚಿತ್ರ ಕೃಪೆ: ಎಎಫ್ಪಿ)
ತನಿಖೆಗಾಗಿ ಡ್ರೋನ್ ಬಳಕೆ (ಚಿತ್ರ ಕೃಪೆ: ಎಎಫ್ಪಿ)
ಬುಧವಾರ ನಡೆದ ಅಪಘಾತದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. (ಚಿತ್ರ ಕೃಪೆ: ಎಎಫ್ಪಿ)
ಹೆಲಿಕಾಪ್ಟರ್ ದುರಂತದ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. (ಚಿತ್ರ ಕೃಪೆ: ಎಎಫ್ಪಿ)
ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತಿಮ ನಮನ (ಚಿತ್ರ ಕೃಪೆ: ಪಿಟಿಐ)
ಜನರಲ್ ಬಿಪಿನ್ ರಾವತ್ಗೆ ಅಂತಿಮ ನಮನ ಸಲ್ಲಿಸಿದ ಮರಳು ಶಿಲ್ಪಿ ಅಜಯ್ ರಾವತ್ (ಚಿತ್ರ ಕೃಪೆ: ಪಿಟಿಐ)
ಪಾಟ್ನಾ ಸರ್ಕಾರಿ ಶಾಲಾ ಮಕ್ಕಳಿಂದ ಗೌರವ (ಚಿತ್ರ ಕೃಪೆ: ಪಿಟಿಐ)
ಶ್ರೀನಗರದಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ (ಚಿತ್ರ ಕೃಪೆ: ಐಎಎನ್ಎಸ್)