ರಾಯಚೂರು ಬಸವೇಶ್ವರ ನಗರದಲ್ಲಿರುವ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಉಪವಿಭಾಗ–13 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕರೆಡ್ಡಿ ಪಾಟೀಲ ಅವರ ಮನೆಮೇಲೆ ಎಸಿಬಿ ಅಧಿಕಾರಿಗಳ ತಂಡವು ಪರಿಶೀಲನೆ ಮುಂದುವರಿಸಿದ್ದು, ಮನೆ ಕಸದ ಡಬ್ಬಿಯಲ್ಲೂ ನಗದು ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.