ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯ

ಎರಡು ವಾರಗಳ ಹಿಂದೆ ಮಾರಿಷ್‌ನ ಕಡಲ ತೀರಕ್ಕೆ ಬಂದಿದ್ದ ಜಪಾನ್‌ ಸರಕು ಸಾಗಾಣೆಯ ಬೃಹತ್‌ ಹಡಗೊಂದ್ದು ಹಾನಿಗೀಡಾಗಿ ಮುಳುಗಲಾರಂಭಿಸಿದೆ. ಹಡಗಿನಿಂದ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ಡೀಸೆಲ್‌ ಸಮುದ್ರದ ಬೃಹತ್‌ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಅಲ್ಲದೆ, ಕಡ ತೀರವನ್ನೂ ಕಪ್ಪಾಗಿಸಿದೆ. ಇದರಿಂದ ಹಿಂದೂ ಮಹಾಸಾಗರದಲ್ಲಿ ಹವಳದ ದಂಡೆಗಳು, ಮೀನುಗಳೂ ಸೇರಿದಂತೆ ಅಪಾರ ಪ್ರಮಾಣದ ಜಲಚರಗಳಿಗೆ ಅಪಾಯ ಎದುರಾಗಿದೆ.ಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅರ್ಧಭಾಗ ಮುಳುಗಿರುವ ಹಡಗಿನಿಂದ ಸಿಬ್ಬಂದಿಯನ್ನೆಲ್ಲ ಯಶಸ್ವಿಯಾಗಿ ರಕ್ಷಿಸಲಾಗಿದೆ. ಸರಕು ಸಾಗಣಿಕ ಹಡಗಿನಲ್ಲಿ ಖಾಲಿ ಇತ್ತಾದರೂ, 200 ಟನ್‌ನಷ್ಟು ಡೀಸೆಲ್‌, 3,800 ಬಂಕರ್‌ ತೈಲವನ್ನು ದಾಸ್ತಾನು ಮಾಡಲಾಗಿತ್ತು. ಅದು ಈಗ ಸೋರಿಕೆಯಾಗುತ್ತಿದೆ. ನೆಲಕಚ್ಚಿರುವ ಹಡಗಿನಲ್ಲಿ ದೊಡ್ಡ ಬಿರುಕು ಕಂಡು ಬಂದಿದ್ದು, ಎರಡು ತುಂಡಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರೊಂದಿಗೆ ಭಾರಿ ಪ್ರಮಾಣದಲ್ಲಿ ಇಂಧನ ಹೊರಚೆಲ್ಲುವ ಅತಂಕ ಎದುರಾಗಿದೆ.ತೈಲ ಸೋರಿಕೆ ತಡೆಯುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಹೀಗಾಗಿ ಕಡಲ ತೀರ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.‘ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದೇ ನಮಗೆ ತೋಚುತ್ತಿಲ್ಲ. ಹೀಗಾಗಿ ಫ್ರಾನ್ಸ್‌ ಸರ್ಕಾರದ ನೆರವು ಕೋರಿದ್ದೇವೆ. ಆ ದೇಶದ ಅಧ್ಯಕ್ಷ ಎಮ್ಯಾನುವೆಲ್‌‌ ಮ್ಯಾಕ್ರನ್‌ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್‌ ಜುಗ್ನಾಥ್‌ ತಿಳಿಸಿದ್ದಾರೆ.‘ಇಂಧನ ಸೋರಿಕೆಯಿಂದ ಬ್ಲೂ ಬೇ ಮರಿನ್‌ ಪಾರ್ಕ್‌ ಹಾಗೂ ಇತರ ಪ್ರದೇಶಗಳ ನೀರು ರಾಸಾಯನಿಕಯುಕ್ತವಾಗಿದೆ. ನಾವೀಗ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಮಾರಿಷಸ್‌ನ ಪರಿಸರ ಸಚಿವ ಕ್ಯಾವಿ ರಮಣೊ ಹೇಳಿದ್ದಾರೆ.‘ಈ ಹಡಗು ಜಪಾನ್‌ನ ಒಕಿಯೊ ಮಾರಿಟೈಮ್‌ ಕಾರ್ಪೊರೇಷನ್‌ ಆ್ಯಂಡ್‌ ನಾಗಸಾಕಿ ಶಿಪ್ಪಿಂಗ್‌ ಕಂಪನಿ‌ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿಯ ವಿರುದ್ಧ ನಿರ್ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಡಗು ಜುಲೈ 25ರಂದು ನಮ್ಮ ಆಗ್ನೇಯ ಕರಾವಳಿ ಭಾಗದಲ್ಲಿ ಸಂಚರಿಸಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಫೋಟೊಗಳು: AFP, AP
Last Updated 11 ಆಗಸ್ಟ್ 2020, 3:40 IST
ಅಕ್ಷರ ಗಾತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT