ಭಾನುವಾರ, ಸೆಪ್ಟೆಂಬರ್ 22, 2019
25 °C

ಭಾರತದ 15 ಪ್ರವಾಸಿ ಸ್ಥಳಗಳು...

Published:
Updated:

ಪ್ರವಾಸೋದ್ಯಮ ಸೇವಾ ಸಂಸ್ಥೆ ಥಾಮಸ್ ಕುಕ್ ಇಂಡಿಯಾ ದೇಸಿ ಪ್ರವಾಸೋದ್ಯಮಕ್ಕೆ ಬಲ ತುಂಬುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಈ ಅಭಿಯಾನದ ಮೂಲಕ ಭಾರತದಲ್ಲಿ ಭೇಟಿ ನೀಡಲೇಬೇಕಾದ 15 ತಾಣ ಗಳನ್ನು ಸಂಸ್ಥೆ ಶಿಫಾರಸು ಮಾಡಿದೆ.

ಕೇಂದ್ರ ಸರ್ಕಾರದ ದೇಸೀಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಈ ಅಭಿಯಾನ ನಡೆಸಲಾಗುತ್ತಿದೆ’ ಎಂದು ಸಂಸ್ಥೆ ಹೇಳಿದೆ. ಥಾಮಸ್ ಕುಕ್ ಇಂಡಿಯಾದ ಆಂತರಿಕ ಅಧ್ಯಯನ ಹೇಳುವಂತೆ, ದೇಸಿ ಪ್ರವಾಸೋದ್ಯಮದಲ್ಲಿ ಗಮನಾರ್ಹ ಬೇಡಿಕೆ ಇದ್ದು, ಮೂರು ವರ್ಷಗಳಲ್ಲಿ ವಾರ್ಷಿಕ ಶೇ 25ರಷ್ಟು ಪ್ರಗತಿ ಕಾಣುತ್ತಿದೆ. ಈ ಅಧ್ಯಯನವನ್ನು ಆಧರಿಸಿ ಥಾಮಸ್ ಕುಕ್ ಇಂಡಿಯಾ 15 ಮುಂಚೂಣಿಯ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪರಿಚಯಿಸಿದೆ. ಅವು ಹೀಗಿವೆ.

ಮಾವ್ಲಿನ್ನಾಂಗ್ (ಮೇಘಾಲಯ), ತಾಜ್ ಮಹಲ್ (ಆಗ್ರಾ), ರಾಜಸ್ಥಾನದ ಕೋಟೆಗಳು ಮತ್ತು ಸ್ಮಾರಕಗಳು, ಏಕತಾ ಪ್ರತಿಮೆ (ಗುಜರಾತ್), ಖುಜರಾಹೊ (ಮಧ್ಯ ಪ್ರದೇಶ), ಋಷಿಕೇಶ (ಉತ್ತರಾಖಂಡ), ಮೋಟರ್ ಬೈಕ್‍ನಲ್ಲಿ ಲಡಾಖ್, ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ (ಉತ್ತರಾಖಂಡ), ಕೋನಾರ್ಕ್ ಸೂರ್ಯ ದೇಗುಲ (ಒಡಿಶಾ), ವಾರಾಣಸಿಯ ದೇಗುಲಗಳು ಮತ್ತು ಗಂಗಾ ಘಾಟ್ (ಉತ್ತರ ಪ್ರದೇಶ), ಕಾಜಿರಂಗಾ ನ್ಯಾಷನಲ್ ಪಾರ್ಕ್ (ಅಸ್ಸಾಂ), ಗುಲ್ಮಾರ್ಗ್ (ಕಾಶ್ಮೀರ), ಹೂವಿನ ಕಣ್ಣಿವೆ (ಉತ್ತರಾಖಂಡ), ಖಜ್ಜರ್ (ಹಿಮಾಚಲ ಪ್ರದೇಶ), ಕೇರಳದ ಹಿನ್ನೀರು. ಇವು ಆ 15 ತಾಣಗಳು. ಥಾಮಸ್ ಕುಕ್ ಇಂಡಿಯಾ ಪ್ಯಾಕೇಜ್‍ಗಳು ₹ 8929 ಗಳಿಂದ ಆರಂಭವಾಗುತ್ತದೆ.

ಥಾಮಸ್ ಕುಕ್ ಇಂಡಿಯಾದ ಹಾಲಿಡೇಸ್, ಎಂಐಸಿಇ, ವೀಸಾ ವಿಭಾಗದ ಅಧ್ಯಕ್ಷ ರಾಜೀವ್ ಕಾಳೆ ಹೇಳುವಂತೆ ‘ದೇಶಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರಧಾನಿ ಪುನಃ ಪ್ರಾಮುಖ್ಯತೆ ನೀಡಿದ್ದಾರೆ. ಸಂಸ್ಕೃತಿ, ಅಡುಗೆ, ವನ್ಯಜೀವಿ, ಸಾಹಸ ಇತ್ಯಾದಿ ಆಕರ್ಷಕ ಅನುಭವಗಳ ವೈವಿಧ್ಯವನ್ನು ಕಣ್ತುಂಬಿಕೊಳ್ಳಲು ಈ ಪಟ್ಟಿ ನೆರವಾಗಲಿದೆ’ ಎಂದು ಹೇಳಿದ್ದಾರೆ.

Post Comments (+)