ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಬೆಳವಣಿಗೆ, ಶಿಕ್ಷಣ ಮತ್ತು ಭವಿಷ್ಯಕ್ಕೆ ಪೂರಕವಾಗಿ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಬೆಳವಣಿಗೆ, ಶಿಕ್ಷಣ ಮತ್ತು ಭವಿಷ್ಯಕ್ಕೆ ಪೂರಕವಾಗಿ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. 2006ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಲಾಯಿತು. 2020-21ರಿಂದ ಈ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಯಡಿ ಭಾಗ್ಯಲಕ್ಷ್ಮಿ ಯೋಜನೆಯನ್ನೂ ತರಲಾಗಿದೆ. ಇದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಆದಾಯ ಮತ್ತು ಭದ್ರತೆಯನ್ನು ನೀಡುತ್ತದೆ.
.ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ .
ಭಾಗ್ಯಲಕ್ಷ್ಮಿ ಯೋಜನೆಯ ಉದ್ದೇಶವೇನು..?

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು.

ಸಮಾಜದಲ್ಲಿನ ಹೆಣ್ಣು ಮಗುವಿನ ಸ್ಥಾನಮಾನವನ್ನು ಹೆಚ್ಚಿಸುವುದು.

ಆರ್ಥಿಕವಾಗಿ ದುರ್ಬಲ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಗುವನ್ನು ಪ್ರೋತ್ಸಾಹಿಸುವುದು.

ಕೆಲವು ಷರತ್ತುಗಳಿಗೆ ಒಳಪಟ್ಟು ಪಾಲಕರು ಹೆಣ್ಣು ಮಗುವನ್ನು ದತ್ತು ನೀಡಿದರೆ, ಯೋಜನೆಯ ಫಲ ಆ ಮಗುವಿಗೆ ಹಾಗೇ ಮುಂದುವರಿಯಲಿದೆ.

ಭಾಗ್ಯಲಕ್ಷ್ಮಿ ಪ್ರಯೋಜನಗಳೇನು..?

ಮಗುವಿಗೆ ವರ್ಷಕ್ಕೆ ಗರಿಷ್ಠ ₹25 ಸಾವಿರದವರೆಗೆ ಆರೋಗ್ಯ ವಿಮಾ ರಕ್ಷಣೆ ಸಿಗುತ್ತದೆ.

10ನೇ ತರಗತಿಯವರೆಗೆ ವಾರ್ಷಿಕ ₹300 ರಿಂದ ₹1,000ರದವರೆಗೆ ವಿದ್ಯಾರ್ಥಿವೇತನವನ್ನು ಬಾಲಕಿಗೆ ನೀಡಲಾಗುತ್ತದೆ.

ಆರ್ಥಿಕವಾಗಿ ದುರ್ಬಲ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು ಮತ್ತು ಕುಟುಂಬ ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವನ್ನು ಹೆಚ್ಚಿಸುವುದು.

ಈ ಪ್ರಯೋಜನಗಳ ಜೊತೆಗೆ, ಪೋಷಕರು ಅಪಘಾತದ ಸಂದರ್ಭದಲ್ಲಿ ₹1 ಲಕ್ಷ ಮತ್ತು ಫಲಾನುಭವಿ ಸಹಜವಾಗಿ ಮೃತಪಟ್ಟರೆ ₹42,500 ಪಡೆಯುತ್ತಾರೆ. 18 ವರ್ಷಗಳ ಕೊನೆಯಲ್ಲಿ ಫಲಾನುಭವಿಗೆ ₹34,751 ಪಾವತಿಸಲಾಗುತ್ತದೆ.

ಅರ್ಹತಾ ಷರತ್ತುಗಳನ್ನು ನಿರಂತರವಾಗಿ ಪೂರೈಸಿದ ನಂತರ ಫಲಾನುಭವಿಗೆ ವಾರ್ಷಿಕ ವಿದ್ಯಾರ್ಥಿವೇತನಗಳು ಮತ್ತು ವಿಮಾ ಪ್ರಯೋಜನಗಳಂತಹ ಕೆಲವು ಮಧ್ಯಂತರ ಪಾವತಿಗಳು ಲಭ್ಯವಾಗುವಂತೆ ಮಾಡಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆಯ ವಾರ್ಷಿಕ ವಿದ್ಯಾರ್ಥಿವೇತನದ ಮೊತ್ತ ಎಷ್ಟು..?

1 ರಿಂದ 3ನೇ ತರಗತಿಯ ಬಾಲಕಿಯರಿಗೆ ₹300

4ನೇ ತರಗತಿಯ ಬಾಲಕಿಯರಿಗೆ ₹500

5ನೇ ತರಗತಿಯ ಬಾಲಕಿಯರಿಗೆ ₹600

6 ಮತ್ತು 7 ನೇ ತರಗತಿಯ ಬಾಲಕಿಯರಿಗೆ ₹700

8ನೇ ತರಗತಿಯ ಬಾಲಕಿಯರಿಗೆ ₹800

9 ಮತ್ತು 10 ನೇ ತರಗತಿಯ ಬಾಲಕಿಯರಿಗೆ ₹1,000

ಭಾಗ್ಯಲಕ್ಷ್ಮಿ ಯೋಜನೆಗೆ ಬೇಕಾಗಿರುವ ಅರ್ಹತೆಗಳೇನು?

ಹುಟ್ಟಿದ ಹೆಣ್ಣು ಮಗುವಿಗೆ ಒಂದು ವರ್ಷ ಪೂರ್ಣವಾಗುವುದರೊಳಗಾಗಿ ಯೋಜನೆಗೆ ನೋಂದಾಯಿಸಬೇಕು

ಹುಡುಗಿಯರು ಬಾಲ ಕಾರ್ಮಿಕ ಪದ್ಧತಿಯಲ್ಲಿ ಭಾಗಿಯಾಗಬಾರದು.

2 ಹೆಣ್ಣು ಮಕ್ಕಳನ್ನು ಹೊಂದಿರುವ ಬಿಪಿಎಲ್ ಕುಟುಂಬಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನಗಳು ಸಿಗಲಿವೆ.

ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾಗಿ ರೋಗನಿರೋಧಕ ಲಸಿಕೆ ಹಾಕಿಸಿರಬೇಕು.

ಬಿಪಿಎಲ್ ಕುಟುಂಬದಲ್ಲಿ ಹೆಣ್ಣು ಮಕ್ಕಳು 2006ರ ಮಾರ್ಚ್ 31ರ ಬಳಿಕ ಜನಿಸಿರಬೇಕು.

ಭಾಗ್ಯಲಕ್ಷ್ಮಿ ಯೋಜನೆ ಅರ್ಹತೆ ಪಡೆಯಲು ಬಾಲಕಿ 8ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಬಾಲಕಿಗೆ 18 ವರ್ಷ ತುಂಬುವ ಮೊದಲು ಮದುವೆ ಮಾಡಲು ಸಾಧ್ಯವಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಭಾಗ್ಯಲಕ್ಷ್ಮಿ ಯೋಜನೆ ಕರ್ನಾಟಕ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಸಂಬಂಧಪಟ್ಟ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆಯಬಹುದು. ಭಾಗ್ಯಲಕ್ಷ್ಮಿ ಯೋಜನೆ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯ ಮೇಲೆ ಕ್ಲಿಕ್ ಮಾಡಿ. ನಂತರ ನಮೂನೆಯು ಪಿಡಿಎಫ್ ರೂಪದಲ್ಲಿ ಅರ್ಜಿ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಇದಾದ ಬಳಿಕ ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿಬೇಕು. ಅಂತಿಮವಾಗಿ ನಮೂನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ.

ಅಗತ್ಯವಿರುವ ದಾಖಲೆಗಳೇನು?

ಭಾಗ್ಯಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ

ಹೆಣ್ಣು ಮಗುವಿನ ಜನನ ಪ್ರಮಾಣಪತ್ರದ ಪ್ರಮಾಣೀಕೃತ ಪ್ರತಿ

ಪೋಷಕರ ಆದಾಯದ ವಿವರಗಳು

ಹೆಣ್ಣು ಮಗುವಿನ ಪೋಷಕರ ವಿಳಾಸ

ಬಿಪಿಎಲ್ ಕಾರ್ಡ್

ಹೆಣ್ಣು ಮಗುವಿನ ಕಾರ್ಡ್ನ ಬ್ಯಾಂಕ್ ವಿವರಗಳು

ಪೋಷಕರೊಂದಿಗೆ ಮಗುವಿನ ಛಾಯಾಚಿತ್ರ

ಪೋಷಕರ ವಿವಾಹ ಪ್ರಮಾಣಪತ್ರ

ಈ ಯೋಜನೆಯಡಿಯಲ್ಲಿ ಎರಡನೇ ಮಗುವನ್ನು ನೋಂದಾಯಿಸುವಾಗ, ಮೇಲಿನ ಎಲ್ಲಾ ದಾಖಲೆಗಳೊಂದಿಗೆ ಕುಟುಂಬ ಯೋಜನಾ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.