ವೈವಾಹಿಕ ಜೀವನ ಎಂಬುದು ಹಿಂದಿನಂತೆ ಹೂ ಹಾಸಿನ ಹಾದಿಯಲ್ಲ. ವಂಚನೆ, ಕ್ರೌರ್ಯ ತುಂಬಿರುವ ದಾಂಪತ್ಯದ ಬಾಳು ಎನ್ನುತ್ತಿದೆ ವಿವಾಹೇತರರ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಸಂಸ್ಥೆ ಗ್ಲೀಡೆನ್.

ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದಾಂಪತ್ಯದಲ್ಲಿ ಬಿರುಕು ಮೂಡುತ್ತಿರುವ ಹಲವು ಪ್ರಕರಣಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿರುವ ನಗರಗಳ ಸಾಲಿಗೆ ಸೇರಿದೆ ಎಂದಿದೆ. ಹೊಂದಾಣಿಕೆ ಸಮಸ್ಯೆ, ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಪರಸ್ಪರ ಅಸಹಾಕಾರವೇ ಪ್ರಮುಖ ಕಾರಣ ಎಂದಿದೆ. ಇದನ್ನು ತಜ್ಞರು ಮತ್ತು ವಕೀಲರೂ ಮಾಹಿತಿ ನೀಡಿ ಅನುಮೋದಿಸಿದ್ದಾರೆ.

ಗ್ಲೀಡೆನ್ ಆ್ಯಪ್ ಬಳಸುತ್ತಿರುವ ಒಟ್ಟು ಭಾರತೀಯರಲ್ಲಿ ಬೆಂಗಳೂರಿನ ಶೇ 17ರಷ್ಟು ಜನರು ಭಾವನಾತ್ಮಕ ಅತೃಪ್ತಿ ಹೊಂದಿದ್ದಾರೆ. ಅದರಲ್ಲೂ 30ರಿಂದ 40ರ ವಯೋಮಾನದವರೇ ಹೆಚ್ಚು. ಇವರಲ್ಲಿ ಬಹುತೇಕರು ಸಂಗಾತಿಯಿಂದ ದೈಹಿಕ ಸಂಪರ್ಕಕ್ಕಿಂತಲೂ ಭಾವನಾತ್ಮಕವಾಗಿ ಜತೆಯಾಗಿರಲು ಬಯಸುತ್ತಾರೆ ಎಂದು ಗ್ಲೀಡೆನ್ ಆ್ಯಪ್ ಸಂಸ್ಥೆಯ ಭಾರತ ವಿಭಾಗದ ವ್ಯವಸ್ಥಾಪಕಿ ಸಿಬಿಲ್ ಶೆಡೆಲ್ ತಿಳಿಸಿದ್ದಾರೆ.

ಇಂಥ ಮನಸ್ಥಿತಿ ಹೊಂದಿರುವವರಲ್ಲಿ ಶೇ 65ರಷ್ಟು ಪುರುಷರು ಹಾಗೂ ಶೇ 35ರಷ್ಟು ಮಹಿಳೆಯರು ಇದ್ದಾರೆ. ಇದರಲ್ಲಿ ಬಹುತೇಕರು ಶ್ರೀಮಂತರು, ಎಂಜಿನಿಯರಿಂಗ್ ಹಾಗೂ ಉದ್ಯಮಶೀಲತೆಯ ಹಿನ್ನೆಲೆ ಹೊಂದಿರುವವರಾಗಿದ್ದಾರೆ ಎಂದು ಶಿಡೆಲ್ ತಿಳಿಸಿದ್ದಾರೆ.

ಗ್ಲೇಡೆನ್ ಅಪ್ಲಿಕೇಶನ್ ‘ದಾಂಪತ್ಯ ದ್ರೋಹ ಅಧ್ಯಯನ–2025‘ರಲ್ಲಿ, ಭಾರತದ 12 ನಗರಗಳ 18 ರಿಂದ 60 ವರ್ಷ ವಯಸ್ಸಿನ 1,510 ಜನರನ್ನು ಅಧ್ಯಯನಕ್ಕೆ ಒಳಡಿಸಿದೆ. ಇದಲ್ಲಿ ‘ಬೆಂಗಳೂರಿನಲ್ಲಿ ಶೇ 29ರಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ವಂಚನೆ (ಫ್ಲರ್ಟಿಂಗ್) ಮಾಡುವುದನ್ನು ಒಪ್ಪಿಕೊಂಡಿದ್ದಾರೆ.

ಶೇ 53ರಷ್ಟು ಜನರು ಬೇರೆ ಬೇರೆ ಬಗೆಯ ವಿವಾಹೇತರ ದ್ರೋಹ ಎಸಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಪೈಕಿ ಇದರಲ್ಲಿ ಶೇ 7ರಷ್ಟು ಜನರು ದೈಹಿಕ, ಶೇ12 ರಷ್ಟು ಜನರು ಭಾವನಾತ್ಮಕ ಮತ್ತು ಶೇಕಡಾ 34 ರಷ್ಟು ಜನರು ಎರಡೂ ಬಗೆಯ ವಂಚನೆ ಎಸೆಗಿದ್ದಾರೆ ಎಂದು ಶಿಡೆಲ್ ವಿವರಿಸಿದ್ದಾರೆ.

ಈ ವರ್ಷ ವರದಿಯಾಗಿರುವ ವಿವಾಹೇತರ ವಂಚನೆಗಳ ಪೈಕಿ, ಶೇ 50ರಷ್ಟು ಸಂಬಂಧದಲ್ಲಿನ (ರಿಲೇಶನ್ಶಿಪ್) ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದ್ದರೆ ಸುಮಾರು 20ರಷ್ಟು ಪ್ರಕರಣಗಳು ವ್ಯಭಿಚಾರಕ್ಕೆ ಸಂಬಂಧಿಸಿದ್ದಾಗಿವೆ ಎಂದು ಮಾನಸಿಕ ಮತ್ತು ಸಮಗ್ರ ಯೋಗಕ್ಷೇಮ ಕೇಂದ್ರ ಬಿಕಮಿಂಗ್ ಶಾಂತಾದ ಮನಃಶಾಸ್ತ್ರಜ್ಞರಾದ ನಿತ್ಯಾ ಜೆ. ರಾವ್ ತಿಳಿಸಿದರು.

‘ಪತಿ–ಪತ್ನಿಯಾದವರು ಭಾವನಾತ್ಮಕವಾಗಿ ಜೊತೆಯಾಗಿರಲು ಸಾಧ್ಯವಾಗದಿದ್ದಾಗ ಅಥವಾ ಹೊಂದಾಣಿಕೆಯಾಗದಿದ್ದಾಗ ಅವರು ತಮ್ಮ ಅಗತ್ಯತೆಗಳನ್ನು ಪೂರೈಸುವವರನ್ನು ಹುಡುಕಲು ಮುಂದಾಗುತ್ತಾರೆ. ಈ ರೀತಿಯಾಗಿ ವಂಚನೆ ಮಾಡುವವರು ಕೆಲಸದ ಸ್ಥಳದಲ್ಲಿ ಅಥವಾ ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಅಕ್ರಮ ಸಂಬಂಧ ಹೊಂದಲು ಬಯಸುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ಐದು ವರ್ಷಗಳಲ್ಲಿ ವ್ಯಭಿಚಾರ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿವೆ ಎಂದು ಮಹಿಳೆಯರ ಸುರಕ್ಷತೆ ಮತ್ತು ಲಿಂಗ ಸಮಾನತೆಯ ಮೇಲೆ ಕೇಂದ್ರೀಕರಿಸಿದ ಲಾಭರಹಿತ ಸಂಸ್ಥೆಯಾಗಿರುವ ದುರ್ಗಾ ಇಂಡಿಯಾದ ಸಂಸ್ಥಾಪಕಿ ಪ್ರಿಯಾ ವರ್ಧರಾಜನ್ ತಿಳಿದ್ದಾರೆ. ‘ನಮ್ಮ ಬಳಿಗೆ ಬರುವ ಅನೇಕ ಮಹಿಳೆಯರು ದಾಂಪತ್ಯ ಜೀವನದಲ್ಲಿ ನಡೆದಿರುವ ವಂಚನೆ ಕುರಿತು ಮಾತನಾಡುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ಈ ಹಿಂದೆ ಕೂಡ ಅನೈತಿಕ ಸಂಬಂಧದ ಪ್ರಕರಣಗಳು ಹೆಚ್ಚಾಗಿದ್ದವು. ಆದರೆ, ಅವು ಮಾತುಕತೆ ಮೂಲಕ ಮುಕ್ತಾಯಗೊಳ್ಳುತ್ತಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಮೊಬೈಲ್ ಕರೆಗಳು, ಮೆಸೇಜ್ಗಳು ಮತ್ತು ವೀಡಿಯೊ ಚಾಟ್ಗಳು ಅಕ್ರಮ ಸಂಬಂಧಗಳನ್ನು ಗಟ್ಟಿಯಾಗಿಸುತ್ತಿವೆ’ ಎಂದು ಕ್ಲಿನಿಕಲ್ ಮನಃಶಾಸ್ತ್ರಜ್ಞ ಕೆ.ಎಸ್. ಮುನಿಸ್ವಾಮಿ ತಿಳಿಸಿದರು. ಈ ರೀತಿಯ ಪ್ರಕರಣಗಳಲ್ಲಿ 27 ರಿಂದ 38 ವರ್ಷ ವಯೋಮಾನದ ಮೇಲ್ವರ್ಗದ ಪುರುಷರು ಹಾಗೂ 35 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

‘ಹೆಚ್ಚಿನ ವಿವಾಹೇತರ ಸಂಬಂಧಗಳು ಪರಿಚಿತರು, ಸಹೋದ್ಯೋಗಿಗಳು ಅಥವಾ ಸ್ನೇಹಿತರ ಜೊತೆಗಿನ ಭಾವನಾತ್ಮಕ ಬೆಂಬಲದಿಂದ ಪ್ರಾರಂಭವಾಗುತ್ತವೆ ಬಳಿಕ ಅದು ದೈಹಿಕವಾಗಿ ಬೆಳೆಯುತ್ತವೆ’ ಎಂದು ಮುನಿಸ್ವಾಮಿ ವಿವರಿಸಿದ್ದಾರೆ.

ನಗರದ ಪತ್ತೇದಾರಿ ಸಂಸ್ಥೆಗಳ ಪ್ರಕಾರ, ಕೆಲಸದ ಸ್ಥಳಗಳು ಅಕ್ರಮ ಸಂಬಂಧ ಹೊಂದಲು ಹೆಚ್ಚು ಅನುಕೂಲಕರ ವಾತಾವರಣ ನಿರ್ಮಿಸುತ್ತದೆ. ಸಾಮಾಜಿಕ ಮಾಧ್ಯಮಗಳು ಸಂಪರ್ಕವನ್ನು ಇನ್ನಷ್ಟು ಸುಲಭಗೊಳಿಸುತ್ತವೆ. ಸಂಗಾತಿ ಜೊತೆಗಿನ ಮಾತುಕತೆ ಕಡಿಮೆ ಮಾಡಿ ಮೊಬೈಲ್ನ ಅತಿಯಾದ ಬಳಕೆ ವೈವಾಹಿಕ ಸಂಬಂಧದಲ್ಲಿ ಅನುಮಾನ ಹುಟ್ಟುಹಾಕುತ್ತವೆ.

ಜೆ.ಸಿ. ನಗರದ ಗರುಡ ಪತ್ತೇದಾರಿ ಸೇವೆಗಳ ಕಣ್ಗಾವಲು ತಜ್ಞರ ಪ್ರಕಾರ, 2020 ರಲ್ಲಿ ತಿಂಗಳಿಗೆ 2 ರಿಂದ 3 ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಇದರ ಪ್ರಮಾಣ 40 ಕ್ಕಿಂತ ಹೆಚ್ಚಾಗಿವೆ ಎಂದು ಹೇಳುತ್ತಾರೆ.

ಕಾನೂನಿನ ಅಡಿಯಲ್ಲಿ ಕಳೆದ 5 ವರ್ಷಗಳಲ್ಲಿ ವ್ಯಭಿಚಾರಕ್ಕೆ ಸಂಬಂಧಿಸಿದ ವಿಚ್ಛೇದನಗಳು ಶೇಕಡಾ 25-30 ರಷ್ಟು ಹೆಚ್ಚಾಗಿದೆ ಎಂದು ವಕೀಲರಾದ ಕುಸುಮ ರಂಗನಾಥನ್ ತಿಳಿಸಿದ್ದಾರೆ. ‘ಇಂದು ಪುರುಷರಷ್ಟೇ ಅಲ್ಲ, ಮಹಿಳೆಯರೂ ಅಕ್ರಮ ಸಂಬಂಧ ಹೊಂದುತ್ತಿದ್ದಾರೆ ’ ಎಂದು ಅವರು ತಿಳಿಸಿದ್ದಾರೆ.

ವ್ಯಭಿಚಾರದಿಂದಾಗಿ ವಿಚ್ಛೇದನ ಪಡೆಯುವುದು ಎಲ್ಲಾ ವಯಸ್ಸಿನವರಲ್ಲೂ ಕಂಡುಬರುತ್ತದೆ. ಆದರೆ, ಸೀಮಿತ ಸಮಯ ಒಟ್ಟಿಗೆ ಇರುವ ಉದ್ಯೋಗಸ್ಥ ದಂಪತಿಗಳಲ್ಲಿ ಇದು ಹೆಚ್ಚಾಗಿದೆ ಎಂದು ವಕೀಲೆ ಪಿ.ಕೆ. ಬೋಜಮ್ಮ ತಿಳಿಸಿದ್ದಾರೆ. ಸೆಕ್ಷನ್ 13(1)(i) 1955 ರ ಹಿಂದೂ ವಿವಾಹ ಕಾಯ್ದೆ, ಸೆಕ್ಷನ್ 27(1)(a) ವಿಶೇಷ ವಿವಾಹ ಕಾಯ್ದೆ 1954, ಸೆಕ್ಷನ್ 22 ಮತ್ತು 11ರ ಭಾರತೀಯ ವಿಚ್ಛೇದನ ಕಾಯ್ದೆ 1869 (ಕ್ರಿಶ್ಚಿಯನ್), ಸೆಕ್ಷನ್ 32(d) ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ 1936 ಮತ್ತು ಸೆಕ್ಷನ್ 45 ಹಾಗೂ 46 ಆರ್ಮಿ ಆಕ್ಟ್ 1950 ಅಡಿಯಲ್ಲಿ ವ್ಯಭಿಚಾರವನ್ನು ವಿಚ್ಛೇದನಕ್ಕೆ ಆಧಾರವಾಗಿ ಬಳಸಬಹುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.