ಜಾಗತಿಕವಾಗಿ 20 ನಗರಗಳಲ್ಲಿ ವಾಸಿಸುತ್ತಿರುವ ಜನರು ಅತಿ ಹೆಚ್ಚು ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ಬಿಡುಗಡೆ ಮಾಡಿದೆ.

ಟೈಮ್ ಔಟ್ ಸಂಸ್ಥೆಯು ಹೇಳಿರುವಂತೆ ನಗರದ ಜನರು ಸಂತೋಷವಾಗಿರುವಲ್ಲಿ ಅಲ್ಲಿನ ಪರಿಸರ, ಆರ್ಥಿಕತೆ ಮತ್ತು ಆರೋಗ್ಯದಂತಹ ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ನೆರೆಹೊರೆಯವರ ಸಮುದಾಯ ಪ್ರಜ್ಞೆ, ನಗರದ ಹಸಿರು ಸ್ಥಳಗಳು, ಪ್ರಕೃತಿ, ಕಲೆ ಮತ್ತು ಸಂಸ್ಕೃತಿ ಮುಖ್ಯವಾಗುತ್ತದೆ ಎಂದು ಹೇಳಿದೆ.

ಟೈಮ್ ಔಟ್ ಸಂಸ್ಥೆ ಒಂದು ವರ್ಷದಲ್ಲಿ ವಿವಿಧ ನಗರಗಳ 18,000 ಕ್ಕೂ ಹೆಚ್ಚು ನಗರವಾಸಿಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಅಧ್ಯಯನದಲ್ಲಿ ಭಾಗವಹಿಸಿದ ಜನರ ಅಭಿಪ್ರಾಯವನ್ನು ಆಧಾರಿಸಿ ವಿಶ್ವದ ಅತ್ಯುತ್ತಮ ನಗರಗಳ ನಿರ್ಣಾಯಕ ಪಟ್ಟಿಯನ್ನು ನೀಡಿದೆ.

ಅಧ್ಯಯನದಲ್ಲಿ ನಾಗರಿಕರಿಗೆ ಕೇಳಲಾದ 5 ಪ್ರಶ್ನೆಗಳು ಹೀಗಿವೆ.

ನನ್ನ ನಗರವು ನನ್ನನ್ನು ಸಂತೋಷ ಪಡಿಸುತ್ತದೆ.

ನಾನು ಭೇಟಿ ನೀಡಿದ ಅಥವಾ ವಾಸಿಸಿದ ಇತರ ಸ್ಥಳಗಳಿಗಿಂತ ನನ್ನ ನಗರದಲ್ಲಿ ನಾನು ಹೆಚ್ಚು ಸಂತೋಷವಾಗಿದ್ದೇನೆ.

ನನ್ನ ನಗರವು ನನ್ನನ್ನು ಸಂತೋಷ ಪಡಿಸುತ್ತದೆ.

ನನ್ನ ನಗರವು ನೀಡುವ ದೈನಂದಿನ ಅನುಭವಗಳಲ್ಲಿ ನಾನು ಸಂತೋಷವನ್ನು ಕಾಣುತ್ತೇನೆ.

ನನ್ನ ನಗರದಲ್ಲಿ ಸಂತೋಷದ ಪ್ರಜ್ಞೆ ಇತ್ತೀಚೆಗೆ ಬಹಳಷ್ಟು ಬೆಳೆದಿದೆ.

ಅಂಕಿ ಅಂಶಗಳು ಹಾಗೂ ನಾಗರಿಕರ ಪ್ರತಿಕ್ರಿಯೆ ಗಮನಿಸಿದಾಗ 2025 ರಲ್ಲಿ ವಿಶ್ವದ ಅತ್ಯಂತ ಸಂತೋಷದಾಯಕ ನಗರ ಅಬುಧಾಬಿ ಎಂದು ತಿಳಿಸಿದೆ.

ಎಮೈರೇಟ್ ರಾಜಧಾನಿ ಸರ್ವತೋಮುಖವಾಗಿ ಅತ್ಯುನ್ನತ ಅಂಕಗಳನ್ನು ಗಳಿಸಿದೆ. ಶೇ 99ರಷ್ಟು ಸ್ಥಳೀಯರು, ಅಬುಧಾಬಿಯಲ್ಲಿ ನಾವು ಸಂತುಷ್ಟದಿಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಶೇ 96ರಷ್ಟು ಜನರು ತಮ್ಮ ಅಬುಧಾಬಿಯನ್ನು ಸಕಾರಾತ್ಮಕವಾಗಿ ಕಾಣುತ್ತಾರೆ. ಶೇ 93ರಷ್ಟು ಜನರು ತಮ್ಮ ನಗರದಲ್ಲಿ ಬೇರೆಲ್ಲಿಯೂ ಇಲ್ಲದಷ್ಟು ಸಂತೋಷವಾಗಿದ್ದೇವೆ ಎಂದು ಹೇಳುತ್ತಾರೆ. ಅನುಕೂಲಕರ ಸ್ಥಳಗಳ ಪಟ್ಟಿಯಲ್ಲಿ ಅಬುಧಾಬಿ ಕೂಡ ಅಗ್ರಸ್ಥಾನದಲ್ಲಿದೆ. ಸಂಸ್ಕೃತಿ, ಉತ್ತಮ ಪರಿಸರವುಳ್ಳ ಪ್ರಸಿದ್ದ ನಗರಗಳಲ್ಲಿ ಅಬುಧಾಬಿ ಒಂದಾಗಿದೆ.

ಎರಡನೇ ಸ್ಥಾನದಲ್ಲಿ ಮೆಡೆಲಿನ್ ಇದೆ. ಅಲ್ಲಿ ಶೇ 97ರಷ್ಟು ಸ್ಥಳೀಯರು ತಮ್ಮ ದೈನಂದಿನ ಅನುಭವಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸ್ಥಳೀಯರ ಪ್ರಕಾರ ಇದು ವಿಶ್ವದ ಅತ್ಯಂತ ಹಸಿರು ನಗರವಾಗಿದೆ ಮತ್ತು ಈ ವರ್ಷ ಆಹಾರಕ್ಕಾಗಿ ಮೂರನೇ ಅತ್ಯುತ್ತಮ ನಗರವಾಗಿಯೂ ಸ್ಥಾನ ಪಡೆದಿದೆ .

ಒಟ್ಟಾರೆ ಅತ್ಯುತ್ತಮ ನಗರಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಕೇಪ್ ಟೌನ್ ಸಂತೋಷದ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾದ ಕರಾವಳಿ ನಗರವು ಬ್ಲೂ ಫ್ಲ್ಯಾಗ್ ಕಡಲತೀರಗಳು , ಆಕರ್ಷಕ ಕಲೆ ಮತ್ತು ಸಂಸ್ಕೃತಿ ಮತ್ತು ವೈವಿಧ್ಯಮಯ ಮತ್ತು ರೋಮಾಂಚಕಾರಿ ಆಹಾರ ದೃಶ್ಯವನ್ನು ಹೊಂದಿದೆ ಶೇ 97ರಷ್ಟು ಸ್ಥಳೀಯರು ತಮ್ಮ ನಗರವು ಅವರನ್ನು ಸಂತೋಷಪಡಿಸುತ್ತದೆ ಎಂದು ಹೇಳುವುದರಲ್ಲಿ ಆಶ್ಚರ್ಯವಿಲ್ಲ.

2025 ರಲ್ಲಿ ವಿಶ್ವದ 20 ಅತ್ಯಂತ ಸಂತೋಷದಾಯಕ ನಗರಗಳು

ಅಬುಧಾಬಿ , ಯುಎಇ

ಮೆಡೆಲಿನ್, ಕೊಲಂಬಿಯಾ

ಕೇಪ್ ಟೌನ್ , ದಕ್ಷಿಣ ಆಫ್ರಿಕಾ

ಮೆಕ್ಸಿಕೋ ನಗರ , ಮೆಕ್ಸಿಕೋ

ಮುಂಬೈ , ಭಾರತ

ಬೀಜಿಂಗ್, ಚೀನಾ

ಶಾಂಘೈ , ಚೀನಾ

ಷಿಕಾಗೊ , ಯುಎಸ್

ಸೆವಿಲ್ಲೆ , ಸ್ಪೇನ್

ಮೆಲ್ಬರ್ನ್ , ಆಸ್ಟ್ರೇಲಿಯಾ

ಬ್ರೈಟನ್ , ಯುಕೆ

ಪೋರ್ಟೊ , ಪೋರ್ಚುಗಲ್

ಸಿಡ್ನಿ , ಆಸ್ಟ್ರೇಲಿಯಾ

ಚಿಯಾಂಗ್ ಮಾಯ್ , ಥಾಯ್ಲೆಂಡ್

ಮರ್ರಾಕೇಶ್ , ಮೊರಾಕೊ

ದುಬೈ , ಯುಎಇ

ಹನೋಯ್ , ವಿಯೆಟ್ನಾಂ

ಜಕಾರ್ತಾ , ಇಂಡೋನೇಷ್ಯಾ

ವೇಲೆನ್ಸಿಯಾ , ಸ್ಪೇನ್

ಗ್ಲ್ಯಾಸ್ಗೋ , ಯುಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.