ಕಾಂಗರೂ ಪಡೆಗೆ ’1000‘ದ ಗೆಲುವು

7

ಕಾಂಗರೂ ಪಡೆಗೆ ’1000‘ದ ಗೆಲುವು

Published:
Updated:

ಸಿಡ್ನಿ: ಇಲ್ಲಿ ನಡೆಯುತ್ತಿರುವ ಭಾರತ–ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 34 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ‘1000’ ಪಂದ್ಯಗಳಲ್ಲಿ ‌ಜಯಗಳಿಸಿದಂತಾಗಿದೆ.

ಕಾಂಗೂರು ಪಡೆಗೆ '1000' ಪಂದ್ಯಗಳಲ್ಲಿ ಗೆಲುವು
* 558– ಏಕದಿನ ಪಂದ್ಯಗಳು
* 384– ಟೆಸ್ಟ್‌ ಪಂದ್ಯಗಳು
* 58– ಟಿ20 ಪಂದ್ಯಗಳು

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಆಯ್ದುಕೊಂಡ ಆಸ್ಪ್ರೇಲಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 288 ರನ್‌ ಗಳಿಸಿತು. ಭಾರತದ ಬಿಗಿ ಬೌಲಿಂಗ್‌ ದಾಳಿಗೆ ತಕ್ಕ ಉತ್ತರ ನೀಡಿದ ಆಸ್ಟ್ರೇಲಿಯಾ ಉತ್ತಮ ಮೊತ್ತವನ್ನೇ ಕಲೆ ಹಾಕಿತ್ತು. 

289 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಶಿಖರ್‌ ಧವನ್ ಮತ್ತು ಅಂಬಟಿ ರಾಯುಡು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರೆ, ವಿರಾಟ್‌ ಕೊಹ್ಲಿ 3 ರನ್‌ ಗಳಿಸಿ ಪೆವಿಲಿಯನ್‌ನತ್ತಾ ದಾವಿಸಿದರು. ಈ ಹಂತದಲ್ಲಿ ರೋಹಿತ್‌ ಶರ್ಮಾ(133) ಮತ್ತು ದೋನಿ(51) ಜತೆಯಾಟ ತಂಡಕ್ಕೆ ಆಸರೆಯಾಯಿತು.

ಶರ್ಮಾ ಗಳಿಸಿದ ಶತಕ, ದೋನಿಯ ತಾಳ್ಮೆಯ ಆಟ ಹಾಗೂ ಬೌಲರ್‌ ಭುವನೇಶ್ವರ್‌ ಕುಮಾರ್ (29) ಮಿಂಚಿನ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. 

ಆಸ್ಟ್ರೇಲಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಖವಾಜಾ (59), ಶಾನ್ ಮಾರ್ಷ್‌ (54) ಹಾಗೂ ಪೀಟರ್ ಹ್ಯಾಂಡ್ಸ್‌ಕಾಬ್‌ (73) ಆಕರ್ಷಕ ಅರ್ಧ ಶತಕ ದಾಖಲಿಸಿದರು. 

ಭುವನೇಶ್ವರ್ ಕುಮಾರ್ ಮತ್ತು ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಕಬಳಿಸುವ ಮೂಲಕ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !