ಸೆಂಚುರಿಯನ್: 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್, ಕೇವಲ 28 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಅಬ್ಬರಿಸಿದ್ದಾರೆ.

ಎಬಿಡಿ ಆಟ ನೋಡಿ ನಿಬ್ಬೇರಗಾಗಿರುವ ಕ್ರಿಕೆಟ್ ಲೋಕ, ಗತಕಾಲದ ವೈಭವ ಮರುಕಳಿಸಿದೆ ಎಂದು ಕೊಂಡಾಡಿದೆ.

ಸೆಂಚುರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ತಮ್ಮ ಹೆಸರಿಗೆ ತಕ್ಕಂತೆ 360ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ಟೈಟನ್ಸ್ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸಿದ ಡಿವಿಲಿಯರ್ಸ್, ಶತಕ ಗಳಿಸಿದ ನಿವೃತ್ತಿ ಹೊಂದಿದರು.

ಬುಲ್ ಲೆಜೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೈಟನ್ಸ್ ಲೆಜೆಂಡ್ಸ್ 20 ಓವರ್ಗಳಲ್ಲಿ 269 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಬುಲ್ ಲೆಜೆಂಡ್ಸ್ 14 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡಚಣೆಯುಂಟಾಯಿತು.
.ICC Team Of The Tournament: ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ!.2027ರ ವಿಶ್ವಕಪ್ನಲ್ಲಿ ರೋಹಿತ್ ಆಡುತ್ತಾರೆಯೇ? ಇಲ್ಲಿದೆ ಹಿಟ್ಮ್ಯಾನ್ ಉತ್ತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.