ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೇ ಐಪಿಎಲ್‌ ಆಯೋಜಿಸಬಹುದು ಎಂದ ಕುಂಬ್ಳೆ, ಲಕ್ಷ್ಮಣ್

Last Updated 28 ಮೇ 2020, 14:25 IST
ಅಕ್ಷರ ಗಾತ್ರ

ಮುಂಬೈ: ಐಪಿಎಲ್‌ 13ನೇ ಆವೃತ್ತಿಯು ಈ ವರ್ಷದ ಮಾರ್ಚ್‌ 29ರಿಂದಲೇ ಆರಂಭವಾಗಬೇಕಿತ್ತು. ಆದರೆ, ಕೋವಿಡ್‌–19 ಸೋಂಕು ಭೀತಿಯಿಂದಾಗಿ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಿಂದ, ಈ ವರ್ಷ ಐಪಿಎಲ್‌ ನಡೆಯುತ್ತದೆಯೇ ಎಂಬುದು ಅನುಮಾನವಾಗಿದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆಸಲು ಯೋಜಿಸಿರುವ ಟಿ20 ವಿಶ್ವಕಪ್‌ ನಡೆಯದಿದ್ದರೆ, ಭಾರತದಲ್ಲಿ ಐಪಿಎಲ್ ಆಯೋಜಿಸಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ವಿವಿಎಸ್‌ ಲಕ್ಷ್ಮಣ್‌ ಈ ವರ್ಷವೇ ಐಪಿಎಲ್‌ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.

ಕ್ರೀಡಾ ವಾಹಿನಿಯೊಂದಿಗೆ ನಡೆಸಿದ ಮಾತುಕತೆ ವೇಳೆ,‘ಹೌದು. ನಾವು ಭರವಸೆ ಇಟ್ಟುಕೊಂಡಿದ್ದೇವೆ. ಈ ವರ್ಷವೇ ಐಪಿಎಲ್‌ ನಡೆಸಲು ಸಾಧ್ಯವಿದೆ. ಒಂದು ವೇಳೆ ನಾವು ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸಲು ಮುಂದಾದರೆ, ಮೂರು–ನಾಲ್ಕು ಸ್ಥಳಗಳಲ್ಲಿ ಆಯೋಜಿಸಬಹುದು’ ಎಂದು ಕುಂಬ್ಳೆಹೇಳಿದ್ದಾರೆ.

ಕುಂಬ್ಳೆ ಮಾತನ್ನು ಒಪ್ಪಿರುವ ಲಕ್ಷ್ಮಣ್‌, ಹೆಚ್ಚು ಕ್ರೀಡಾಂಗಣಗಳನ್ನು ಹೊಂದಿರುವ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದರಿಂದ ಆಟಗಾರರು ಹೆಚ್ಚು ಪ್ರಯಾಣ ಮಾಡುವುದನ್ನು ತಪ್ಪಿಸಬಹುದು. ಬಿಸಿಸಿಐ ಮತ್ತು ಪ್ರಾಂಚೈಸ್‌ಗಳೂ ಈ ಬಗ್ಗೆ ಆಲೋಚಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT