ಲಂಡನ್: ವಿಶ್ವಕಪ್ ಗೆದ್ದುಕೊಂಡ ಇಂಗ್ಲೆಂಡ್ ತಂಡದ ಕೋಚ್ ಟ್ರೇವರ್ ಬೇಯ್ಲಿಸ್ ಅವರನ್ನು ಐಪಿಎಲ್‌ನಲ್ಲಿ ಆಡುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಆ ಫ್ರಾಂಚೈಸ್‌ನ ಪ್ರಕಟಣೆ ಗುರುವಾರ ತಿಳಿಸಿದೆ.

ವಿಶ್ವಕಪ್ ಯಶಸ್ಸಿನ ನಂತರ ಐಪಿಎಲ್‌ನ ತಂಡವೊಂದಕ್ಕೆ 56 ವರ್ಷದ ಬೇಯ್ಲಿಸ್ ಕೋಚ್ ಆಗಬಹುದೆಂಬ ಮಾತುಗಳು ಕೇಳಿಬಂದಿದ್ದವು. ಅವರು ಈ ಹಿಂದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ 2012 ರಿಂದ 2015ರವರೆಗೆ ಕೋಚ್ ಆಗಿದ್ದು ಈ ಅವಧಿಯಲ್ಲಿ ತಂಡ ಎರಡು ಬಾರಿ ಚಾಂಪಿಯನ್ ಆಗಿತ್ತು. ಬಿಗ್ ಬ್ಯಾಷ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಗೆದ್ದ ಸಿಡ್ನಿ ಸಿಕ್ಸರ್ಸ್ ತಂಡಕ್ಕೂ ಅವರು ಕೋಚ್ ಆಗಿದ್ದರು.

ಸನ್‌ರೈಸರ್ಸ್ ತಂಡಕ್ಕೆ, 2016ರಿಂದ ಇದುವರೆಗೆ ಆಸ್ಟ್ರೇಲಿಯಾದ ಇನ್ನೊಬ್ಬ ಆಟಗಾರ ಟಾಮ್ ಮೂಡಿ ಕೋಚ್ ಆಗಿದ್ದರು.

ಆಸ್ಟ್ರೇಲಿಯಾ ಮೂಲದ ಬೇಯ್ಲಿಸ್ ಅವರು ಆ್ಯಷಸ್ ಸರಣಿಯವರೆಗೆ ಇಂಗ್ಲೆಂಡ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸ್ವದೇಶದಲ್ಲಿ ಈ ಸರಣಿ ಆಡಲಿದ್ದು ಮೊದಲ ಟೆಸ್ಟ್ ಆ. 1ರಂದು ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.