ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಇದರಿಂದ ಆಟವನ್ನು ಸ್ಥಗಿತಗೊಳಿಸಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ, ಭಾರತ ಹಾಗೂ ನೇಪಾಳ ತಂಡಗಳು ಗ್ರೂಪ್ ‘ಎ‘ನಲ್ಲಿವೆ. ಈಗಾಗಲೇ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಜಯ ಸಾಧಿಸಿದೆ. ನಿನ್ನೆ ರದ್ದಾದ ಪಂದ್ಯದ ಒಂದು ಅಂಕ ಸೇರಿದಂತೆ ಪಾಕಿಸ್ತಾನ 3 ಅಂಕಗಳನ್ನು ಪಡೆದು ಸೂಪರ್4 ಹಂತಕ್ಕೆ ಪ್ರವೇಶಿಸಿದೆ.
ಭಾರತ ಒಂದು ಅಂಕವನ್ನು ಪಡೆದರೆ, ನೇಪಾಳ ಯಾವುದೇ ಅಂಕ ಪಡೆದಿಲ್ಲ. ಮುಂದಿನ ಪಂದ್ಯದಲ್ಲಿ ಭಾರತ, ನೇಪಾಳ ಸೆಣಸಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್4 ಹಂತ ತಲುಪಲಿದೆ.