ದುಬೈ: ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಅವರ ನಂತರ ರೋಹಿತ್ ಶರ್ಮಾ ಅವರು ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರ ಅಸಾಧಾರಣ ಪ್ರತಿಭೆಯ ಲಾಭ ಪಡೆದಿದ್ದರು. ಸುಮಾರು 13 ತಿಂಗಳಿಂದ ಭಾರತ ಟಿ20 ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೂ ಈಗ ಪಂದ್ಯಕ್ಕೆ ತಿರುವು ನೀಡಬಲ್ಲ ಬೂಮ್ರಾ ಅವರ ನಾಲ್ಕು ಓವರುಗಳ ಪ್ರಯೋಜನ ಪಡೆಯುವ ಅವಕಾಶ ಒದಗಿದೆ.

ಕೊಹ್ಲಿ ಮತ್ತು ರೋಹಿತ್ ಅವರು 2017 ರಿಂದ 2024ರವರೆಗೆ ನಾಯಕರಾಗಿದ್ದಾಗ ದೇಶಕ್ಕೆ ಮತ್ತು ಫ್ರಾಂಚೈಸಿ ಪರ ಅವರ ಕೌಶಲದ ಲಾಭ ಪಡೆದಿದ್ದರು.

ಭಾರತ 14 ತಿಂಗಳ ಹಿಂದೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಬೂಮ್ರಾ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಬೆನ್ನುನೋವಿನಿಂದಾಗಿ ಮಾರ್ಚ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಅವರು ಆಡಿರಲಿಲ್ಲ. ಇಂಗ್ಲೆಂಡ್ ಪ್ರವಾಸದ ವೇಳೆ ಅವರು ಕಾರ್ಯಭಾರ ಒತ್ತಡದ ಕಾರಣ ಕೆಲವು ಟೆಸ್ಟ್ಗಳನ್ನಷ್ಟೇ ಆಡಿದ್ದರು. ಅದರಲ್ಲೂ ಭಾರತ ಅವರ ಅನುಪಸ್ಥಿತಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಾಗ ಅವರು ಬೀರಬಹುದಾದ ಪರಿಣಾಮದ ಬಗ್ಗೆ ಪ್ರಶ್ನೆಗಳೂ ಎದ್ದಿದ್ದವು. ಆದರೆ ತಂಡದಲ್ಲಿ ಅವರ ಬದ್ಧತೆಯನ್ನು ಮಾತ್ರ ಪ್ರಶ್ನಿಸುವಂತಿರಲಿಲ್ಲ.

ಇಲ್ಲಿಗೆ ಬಂದ ಮೇಲೆ ನೆಟ್ಸ್ನಲ್ಲಿ ಬೂಮ್ರಾ ತೊಡಗಿಸಿಕೊಂಡ ರೀತಿ ಸೂರ್ಯಕುಮಾರ್ ಅವರ ಪಾಲಿಗಂತೂ ಖುಷಿ ಕೊಡುವ ವಿಷಯ. ಆದರೆ ಭಾರತ ತಂಡದ ಎದುರಾಳಿಗಳಿಗೆ ಇದು ಶುಭಸೂಚಕವಲ್ಲ.

ಬೂಮ್ರಾ ಅವರ ಗೈರಿನ ಅವಧಿಯಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಭಾರತ ತಂಡದ ಪ್ರಮುಖ ಟಿ20 ವೇಗಿಯಾಗಿ ಗುರುತಿಸಿಕೊಂಡರು. ಪದಾರ್ಪಣೆ ಮಾಡಿದ ನಂತರ ಮೂರು ವರ್ಷಗಳ ಅವಧಿಯಲ್ಲಿ 26 ವರ್ಷದ ಪಂಜಾಬ್ ವೇಗಿ 99 ವಿಕೆಟ್ಗಳನ್ನು ಪಡೆದು ಯಶಸ್ವಿಯೆನಿಸಿದ್ದಾರೆ. ತಮ್ಮ ಬದಲಿಗೆ ಬೂಮ್ರಾ ಅವರಿಗೆ ಅವಕಾಶ ನೀಡಿದರೆ ಅವರ ತಕರಾರೇನೂ ಇರಲಿಕ್ಕಿಲ್ಲ. ಆದರೆ ಬ್ಯಾಟಿಂಗ್ ಬಲಕ್ಕೆ ತೊಂದರೆಯಾಗದಂತೆ ಇವರಿಬ್ಬರಿಗೂ ಅವಕಾಶ ಕಲ್ಪಿಸುವುದು ಸೂರ್ಯಕುಮಾರ್ ಮುಂದಿರುವ ಸವಾಲಾಗಿದೆ.

ಭಾರತವು ಈ ಸರಣಿಯ ನಂತರ ಮುಂದಿನ ಟಿ20 ವಿಶ್ವಕಪ್ ನಡುವೆ ತವರಿನಲ್ಲಿ ನಾಲ್ಕು ಟೆಸ್ಟ್ಗಳನ್ನು ಆಡಲಿದೆ. ಬೂಮ್ರಾ ಅವರು ಇದರಲ್ಲಿ ಕೆಲವು ಪಂದ್ಯಗಳಲ್ಲಿ ಆಡಬಹುದು. ವಿಶ್ವಕಪ್ನಲ್ಲಿ ಕಳೆದ ಸಲದ ಅಮೋಘ ಆಟ ಪ್ರದರ್ಶಿಸಬೇಕಾದರೆ ಬೂಮ್ರಾ ಅವರ ಉಪಸ್ಥಿತಿ ಭಾರತದ ಪಾಲಿಗೆ ಅನಿವಾರ್ಯ. ಜಸ್ಸಿ ನಿಮಗಿದೊ ಸ್ವಾಗತ ಎಂದು ಎಂದು ಸೂರ್ಯ ಈಗ ಖುಷಿಯಿಂದ ಬರಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.