ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | T20 Cricket: ಫೈನಲ್‌ನಲ್ಲಿ ಭಾರತ–ಅಫ್ಗಾನಿಸ್ತಾನ ಮುಖಾಮುಖಿ

ಚಿನ್ನದ ಪದಕಕ್ಕಾಗಿ ಹಣಾಹಣಿ
Published 6 ಅಕ್ಟೋಬರ್ 2023, 13:29 IST
Last Updated 6 ಅಕ್ಟೋಬರ್ 2023, 13:29 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳು ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 9 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ವಾಷಿಂಗ್ಟನ್ ಸುಂದರ್ (15ಕ್ಕೆ2) ಮತ್ತು ಸಾಯಿ ಕಿಶೋರ್ (12ಕ್ಕೆ3) ಅವರ ಅಮೋಘ ಬೌಲಿಂಗ್‌ ಮುಂದೆ ಬಾಂಗ್ಲಾದೇಶ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 96 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.  ಗುರಿ ಬೆನ್ನಟ್ಟಿದ ಭಾರತ ತಂಡವು ಇನಿಂಗ್ಸ್‌ನಲ್ಲಿ ಇನ್ನೂ  64 ಎಸೆತಗಳು ಬಾಕಿಯಿರುವಾಗಲೇ ಜಯದ ಗಡಿ ಮುಟ್ಟಿತು. ಋತುರಾಜ್ ಗಾಯಕವಾಡ (ಅಜೇಯ 40; 26ಎ, 4X4, 6X3) ಮತ್ತು ತಿಲಕ್ ವರ್ಮಾ (ಅಜೇಯ 55; 26ಎ, 4X2, 6X6) ಮಿಂಚಿದರು.

ಅಫ್ಗಾನಿಸ್ತಾನ ಜಯಭೇರಿ

ಇನ್ನೊಂದು ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ ತಂಡವು 4 ವಿಕೆಟ್‌ಗಳಿಂದ ಪಾಕಿಸ್ತಾನ ತಂಡಕ್ಕೆ ಆಘಾತ ನೀಡಿತು.

ಟಾಸ್ ಗೆದ್ದ ಅಫ್ಗನ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಫರೀದ್ ಅಹಮದ್ (15ಕ್ಕೆ3), ಖೈಸ್ ಅಹಮದ್ (11ಕ್ಕೆ2) ಮತ್ತು ಝಹೀರ್ ಖಾನ್ (20ಕ್ಕೆ2) ಅವರ ದಾಳಿಗೆ ಪಾಕ್ ತಂಡವು 18 ಓವರ್‌ಗಳಲ್ಲಿ 115 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಅಫ್ಗನ್ ತಂಡವು ನೂರ್‌ ಅಲಿ ಝದ್ರಾನ್ (39; 33ಎ) ಮತ್ತು ಗುಲ್ಬದೀನ್ ನೈಬ್ (26; 19ಎ) ಅವರ ನೆರವಿನಿಂದ ಗೆಲುವಿನ ಗುರಿ ಮುಟ್ಟಿತು. ಫೈನಲ್ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು

ಬಾಂಗ್ಲಾದೇಶ:

20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 96 (ಪರ್ವೇಜ್ ಹುಸೇನ್ ಇಮಾನ್ 23, ಜಾಕೀರ್ ಅಲಿ ಔಟಾಗದೆ 24, ರಕೀಬುಲ್ ಹಸನ್ 14, ವಾಷಿಂಗ್ಟನ್ ಸುಂದರ್ 15ಕ್ಕೆ2, ಸಾಯಿ ಕಿಶೋರ್ 12ಕ್ಕೆ3) ಭಾರತ: 9.2 ಓವರ್‌ಗಳಲ್ಲಿ 1 ವಿಕೆಟ್‌ಗೆ 97 (ಋತುರಾಜ್ ಗಾಯಕವಾಡ ಔಟಾಗದೆ 40, ತಿಲಕ್‌ ವರ್ಮಾ ಔಟಾಗದೆ 55, ರಿಪನ್ ಮಂಡಲ್ 26ಕ್ಕೆ1) ಫಲಿತಾಂಶ:ಭಾರತ ತಂಡಕ್ಕೆ 9 ವಿಕೆಟ್‌ಗಳ ಜಯ 

ಪಾಕಿಸ್ತಾನ:

18 ಓವರ್‌ಗಳಲ್ಲಿ 115 (ಒಮರ್ ಯೂಸುಫ್ 24, ಅಮೀರ್ ಜಮಾಲ್ 14, ಫರೀದ್ ಅಹಮದ್ 15ಕ್ಕೆ3, ಖೈಸ್ ಅಹಮದ್ 11ಕ್ಕೆ2, ಝಹೀರ್ ಖಾನ್ 20ಕ್ಕೆ2) ಅಫ್ಗಾನಿಸ್ತಾನ: 17.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 116 (ನೂರ್ ಅಲಿ ಝದ್ರಾನ್ 39, ಅಫ್ಸರ್ ಝಝೈ 13, ಗುಲ್ಬದೀನ್ ನಬಿ ಔಟಾಗದೆ 26, ಅರಾಫತ್ ಮಿನಾಸ್ 11ಕ್ಕೆ2, ಉಸ್ಮಾನ್ ಖಾದೀರ್ 20ಕ್ಕೆ2) ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 4 ವಿಕೆಟ್‌ಗಳ ಜಯ.

ಫೈನಲ್ ಪಂದ್ಯ:

ಭಾರತ–ಅಫ್ಗಾನಿಸ್ತಾನ

ಆರಂಭ: ಬೆಳಿಗ್ಗೆ 11.30

ಮೂರನೇ ಸ್ಥಾನಕ್ಕಾಗಿ ಪಂದ್ಯ

ಬಾಂಗ್ಲಾದೇಶ–ಪಾಕಿಸ್ತಾನ

ಆರಂಭ: ಬೆಳಿಗ್ಗೆ 6.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT