ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಕೋಚ್‌‌ ಹಿಕ್‌ಗೆ ಕೊಕ್‌

Last Updated 18 ಜೂನ್ 2020, 11:03 IST
ಅಕ್ಷರ ಗಾತ್ರ

ಪರ್ತ್‌: ಆರ್ಥಿಕ ಸಂಕಷ್ಟದಿಂದ ನಲುಗಿರುವ ಕ್ರಿಕೆಟ್‌ ಆಸ್ಟ್ರೇಲಿಯಾವು (ಸಿಎ), ರಾಷ್ಟ್ರೀಯ ತಂಡದ ಬ್ಯಾಟಿಂಗ್‌ ಕೋಚ್‌ ಗ್ರೇಮ್‌ ಹಿಕ್‌ ಸೇರಿದಂತೆ ಒಟ್ಟು 40 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.

ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅವರು ಗುರುವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಕರ್ಟ್ಲಿ ಆ್ಯಂಬ್ರೋಸ್‌ ಮತ್ತು ಕರ್ಟ್ನಿ ವಾಲ್ಶ್‌ ಅವರ ಎಸೆತಗಳನ್ನು ಹೆಲ್ಮೆಟ್‌ ಇಲ್ಲದೆಯೇ ಎದುರಿಸುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು.ಕೆಲಸದಿಂದ ತೆಗೆದುಹಾಕಿರುವ ಸುದ್ದಿಯನ್ನು ಹಿಕ್‌ ಅವರಿಗೆ ಹೇಳುವಾಗ ನನಗೆ ಅದಕ್ಕಿಂತಲೂ ಹೆಚ್ಚುಸಂಕಟವಾಯಿತು’ ಎಂದು ಲ್ಯಾಂಗರ್‌ ತಿಳಿಸಿದ್ದಾರೆ.

‘ಹಿಕ್‌ ಅವರು ಅಪಾರ ಶ್ರದ್ಧೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರ ಕಾರ್ಯಶೈಲಿಗೆ ಮಾರು ಹೋಗದವರೇ ಇಲ್ಲ. ಕ್ರಿಕೆಟ್‌ ಬಗ್ಗೆ ಅವರು ಅಗಾಧ ಜ್ಞಾನ ಹೊಂದಿದ್ದರು. ಅವರನ್ನು ಕೈಬಿಟ್ಟಿದ್ದು ನಿಜಕ್ಕೂ ಕಠಿಣ ನಿರ್ಧಾರ’ ಎಂದು ಅವರು ಹೇಳಿದ್ದಾರೆ.

‘ಹಿಕ್‌ ಅವರ ಕಾರ್ಯವೈಖರಿಯಿಂದ ಬೇಸರಗೊಂಡು ಅವರನ್ನು ಈ ಜವಾಬ್ದಾರಿಯಿಂದ ವಿಮುಖಗೊಳಿಸಿಲ್ಲ. ಕೊರೊನಾ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿದ್ದರಿಂದ ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ಸಾಕಷ್ಟು ನಷ್ಟವಾಗಿದೆ. ಇದರಿಂದ ಪಾರಾಗುವ ಸಲುವಾಗಿ ವೇತನ ಕಡಿತ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವಂತಹ ಕಠಿಣ ನಿರ್ಧಾರಗಳನ್ನು ಸಿಎ ಕೈಗೊಂಡಿದೆ. ಇದು ಅನಿವಾರ್ಯ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT