ಮಂಗಳವಾರ, ಮಾರ್ಚ್ 31, 2020
19 °C

ಖಾಲಿ ಮೈದಾನದಲ್ಲಿ ಪಂದ್ಯ: ಆಸ್ಟ್ರೇಲಿಯಾಕ್ಕೆ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಿಡ್ನಿ: ಪ್ರೇಕ್ಷಕರ ನಿರ್ಬಂಧದಿಂದ ಖಾಲಿಯಾಗಿದ್ದ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 71 ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿತು.

ಟಾಸ್ ಗೆದ್ದು ಬ್ಯಾಟ್‌ ಮಾಡಿದ ಆತಿಥೇಯರು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 258 ರನ್‌ ಗಳಿಸಿದರು. ನಂತರ ಆಸ್ಟ್ರೇಲಿಯಾ ಬೌಲರ್‌ಗಳು ಪಾರಮ್ಯ ಮೆರೆದು ಪ್ರವಾಸಿ ತಂಡವನ್ನು 41ನೇ ಓವರ್‌ನಲ್ಲಿ 187 ರನ್‌ಗಳಿಗೆ ಆಲೌಟ್‌ ಮಾಡಿದರು.

ಕೊರೊನಾ ವೈರಸ್‌ ಹಬ್ಬುವ ಭೀತಿಯಿಂದ ಕ್ರಿಕೆಟ್‌ ಆಸ್ಟ್ರೇಲಿಯಾ, ಪ್ರೇಕ್ಷಕರನ್ನು ನಿರ್ಬಂಧಿಸಿತ್ತು. ಹೀಗಾಗಿ ಆಟಗಾರರು ಅರ್ಧ ಶತಕ ತಲುಪಿದಾಗ ಬ್ಯಾಟ್ ಎತ್ತಿ ಖಾಲಿಯಿದ್ದ ಗ್ಯಾಲರಿಗಳಿಗೆ ತೋರಿ ಖುಷಿಪಡುತ್ತಿದ್ದ ದೃಶ್ಯ ಸೋಜಿಗವೆನಿಸಿತು.

ಸರಣಿಯ ಎರಡನೇ ಪಂದ್ಯ ಸಿಡ್ನಿಯಲ್ಲೇ ಮಾರ್ಚ್‌ 15ರಂದು ನಡೆಯಲಿದೆ.

ಸ್ಕೋರುಗಳು: ಆಸ್ಟ್ರೇಲಿಯಾ: 50 ಓವರುಗಳಲ್ಲಿ 7 ವಿಕೆಟ್‌ಗೆ 258 (ಡೇವಿಡ್‌ ವಾರ್ನರ್ 67, ಆ್ಯರನ್‌ ಫಿಂಚ್‌ 60, ಮಾರ್ನಸ್‌ ಲಾಬುಶೇನ್‌ 56, ಮಿಷೆಲ್‌ ಮಾರ್ಷ್‌ 27; ಮಿಷೆಲ್‌ ಸ್ಯಾಂಟನರ್‌ 34ಕ್ಕೆ2, ಈಶ್‌ ಸೋಧಿ 51ಕ್ಕೆ3); ನ್ಯೂಜಿಲೆಂಡ್‌: 41 ಓವರುಗಳಲ್ಲಿ 187 (ಮಾರ್ಟಿನ್‌ ಗಪ್ಟಿಲ್‌ 40, ಟಾಮ್‌ ಲಥಾಮ್‌ 38; ಹೇಜಲ್‌ವುಡ್‌ 37ಕ್ಕೆ2, ಪ್ಯಾಟ್‌ ಕಮಿನ್ಸ್‌ 25ಕ್ಕೆ3, ಮಿಷೆಲ್‌ ಮಾರ್ಷ್‌ 29ಕ್ಕೆ3, ಆ್ಯಡಂ ಜಂಪಾ 50ಕ್ಕೆ2).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು