ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಗನ್‌ ವಿರುದ್ಧದ ಸರಣಿ: ಹಿಂದೆ ಸರಿದ ಆಸ್ಟ್ರೇಲಿಯಾ

Last Updated 13 ಜನವರಿ 2023, 3:05 IST
ಅಕ್ಷರ ಗಾತ್ರ

ಸಿಡ್ನಿ: ಯುಎಇನಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯಬೇಕಿದ್ದ ಆಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಿಂದ ಆಸ್ಟ್ರೇಲಿಯಾ ತಂಡ ಹಿಂದೆ ಸರಿದಿದೆ.

ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಿರುವುದು ಸೇರಿದಂತೆ ಆಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಮಹಿಳೆಯರ ಮೇಲೆ ಕೆಲವು ನಿರ್ಬಂಧ ಹೇರಿರುವುದಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಈ ನಿಲುವು ತಳೆದಿದೆ.

‘ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ತಾಲಿಬಾನ್‌ ಇನ್ನಷ್ಟು ನಿರ್ಬಂಧ ವಿಧಿಸಿರುವುದು, ಉದ್ಯಾನ ಮತ್ತು ಜಿಮ್‌ಗಳಿಗೆ ಹೋಗದಂತೆ ನಿಷೇಧ ಹೇರಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸರ್ಕಾರದ ಜತೆಗಿನ ಸಮಾಲೋಚನೆ ಬಳಿಕ ಸರಣಿಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಸಿಎ ಪ್ರಕಟಣೆ ತಿಳಿಸಿದೆ.

ಒಪ್ಪಲು ಸಾಧ್ಯವಿಲ್ಲ: ಸಿಎ ನಿರ್ಧಾರಕ್ಕೆ ಆಫ್ಗಾನಿಸ್ತಾನ ಕ್ರಿಕೆಟ್‌ ಸಂಸ್ಥೆ (ಎಸಿಬಿ) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಸರಣಿಯಿಂದ ಹಿಂದೆ ಸರಿಯುವ ತೀರ್ಮಾನವನ್ನು ಒಪ್ಪಲಾಗದು. ಇದು ಕ್ರೀಡೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಟೀಕಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡುತ್ತಿರುವ ಆಫ್ಗಾನಿಸ್ತಾನದ ಆಟಗಾರರನ್ನು ವಾಪಸ್‌ ಕರೆಸುವ ಬಗ್ಗೆ ಚಿಂತಿಸುತ್ತಿರುವುದಾಗಿಯೂ ಹೇಳಿದೆ.

‘ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು. ಸಿಎ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಅಫ್ಗಾನಿಸ್ತಾನ ಏಕದಿನ ತಂಡದ ನಾಯಕ ಹಶ್ಮತ್‌ಉಲ್ಲಾ ಶಾಹಿದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT