ಸಿಡ್ನಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಕ್ರಿಸ್ ಗೇಲ್ಗೆ ₹ 1.55 ಕೋಟಿ ಪರಿಹಾರ ನೀಡುವುದನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ಫೇರ್ಫಾಕ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯೂ ಸೌತ್ ವೇಲ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಮಹಿಳಾ ಮಸಾಜ್ ಥೆರಪಿಸ್ಟ್, ವಿಂಡೀಸ್ ತಂಡದ ಡ್ರೆಸಿಂಗ್ ಕೊಠಡಿಗೆ ಹೋಗಿದ್ದರು. ಆಗ ಆಕೆಗೆ ಜನನಾಂಗವನ್ನು ತೋರಿಸಿದ್ದ ಗೇಲ್ ಅಸಭ್ಯವಾಗಿ ವರ್ತಿಸಿದ್ದರು ಎಂದು ಫೇರ್ಫಾಕ್ಸ್ ಒಡೆತನದಲ್ಲಿದ್ದ ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮತ್ತು ದಿ ಏಜ್ ಪತ್ರಿಕೆಗಳು ಸರಣಿ ಸುದ್ದಿಗಳನ್ನು ಪ್ರಕಟಿಸಿದ್ದವು. ಈ ಪತ್ರಿಕೆಗಳು ಈಗ ನೈನ್ ಎಂಟರ್ಟೈನ್ಮೆಂಟ್ ಮಾಲೀಕತ್ವದಲ್ಲಿವೆ.

ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ನಿರಾಧಾರ. ಅವು ಸತ್ಯಕ್ಕೆ ದೂರವಾಗಿದ್ದು ನನ್ನ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಗೇಲ್ ಆರೋಪಿಸಿದ್ದರು. ಈ ಸಂಬಂಧ ಮಾನನಷ್ಟ ಮೊಕದ್ದಮೆಯನ್ನೂ (2016ರಲ್ಲಿ) ದಾಖಲಿಸಿದ್ದರು.

ಗೇಲ್ ವಿರುದ್ಧದ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳನ್ನು ಫೇರ್ಫಾಕ್ಸ್ ನೀಡಿರಲಿಲ್ಲ. ಹೀಗಾಗಿ ಈ ಸುದ್ದಿಗಳು ಸುಳ್ಳು ಎಂದು ಭಾವಿಸಿದ್ದ ನ್ಯೂ ಸೌತ್ ವೇಲ್ಸ್ ಸುಪ್ರೀಂಕೋರ್ಟ್ನ ನ್ಯಾಯಾಧೀಶೆ ಲೂಸಿ ಮೆಕ್ಲಮ್, ಫೇರ್ಫಾಕ್ಸ್ ಸಂಸ್ಥೆಯು ಗೇಲ್ಗೆ ₹1.55 ಕೋಟಿ ಪರಿಹಾರ ನೀಡುವಂತೆ ಹೋದ ವರ್ಷದ ಡಿಸೆಂಬರ್ನಲ್ಲಿ ತೀರ್ಪು ನೀಡಿದ್ದರು.

ಇದನ್ನು ಪ್ರಶ್ನಿಸಿ ಫೇರ್ಫಾಕ್ಸ್ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ತನಗೆ ನೀಡಲು ಆದೇಶಿಸಿರುವ ಪರಿಹಾರ ಮೊತ್ತ ಕಡಿಮೆಯಾಯಿತು. ಇದನ್ನು ಹೆಚ್ಚಿಸಬೇಕೆಂದು ಗೇಲ್ ಕೂಡ ಮೇಲ್ಮನವಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನೂ ನ್ಯಾಯಾಲಯ ಕೈಬಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.