ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡ

ದುಬೈ: ಭಾರತ ತಂಡದ ವಿರುದ್ಧ 2–1ಸರಣಿ ಗೆದ್ದುಕೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ಆರನೇ ಸ್ಥಾನದಲ್ಲಿದೆ.
ಸದ್ಯ ಒಟ್ಟು 40 ಪಾಯಿಂಟ್ ಸಂಗ್ರಹಿಸಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತದ ಬಳಿ ಸದ್ಯ ಒಂಬತ್ತು ಪಾಯಿಂಟ್ಗಳಿವೆ.
ಆಸ್ಟ್ರೇಲಿಯಾ ತಾನು ಆಡಿದ ಈ ಹಿಂದಿನ ಸರಣಿಯಲ್ಲಿ ಇಂಗ್ಲೆಂಡ್ಅನ್ನು 2–1ರಿಂದ ಸೋಲಿಸಿತ್ತು.
2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಳಿಸುವ ಏಳು ತಂಡಗಳನ್ನು ನಿರ್ಧರಿಸಲು ಈ ಚಾಂಪಿಯನ್ಷಿಪ್ ಪಾಯಿಂಟ್ಸ್ ಪಟ್ಟಿಯನ್ನು ಪರಿಚಯಿಸಲಾಗಿದೆ. ಆತಿಥೇಯ ರಾಷ್ಟ್ರವಾಗಿ ಭಾರತ ಸ್ವಯಂ ಅರ್ಹತೆ ಗಳಿಸಿದ್ದರೂ ದೀರ್ಘಕಾಲದ ಸಿದ್ಧತೆಗಾಗಿ ಈ ಅವಕಾಶವನ್ನು ಬಳಸಿಕೊಳ್ಳಲಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.