ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷನ್‌ ಅಂತಿಮ ಟೆಸ್ಟ್‌: ಲಂಚ್‌ ನಂತರ ಇಂಗ್ಲೆಂಡ್‌ ತಿರುಗೇಟು

Published 28 ಜುಲೈ 2023, 16:31 IST
Last Updated 28 ಜುಲೈ 2023, 16:31 IST
ಅಕ್ಷರ ಗಾತ್ರ

ಲಂಡನ್‌: ಲಂಚ್‌ ಮತ್ತು ಚಹ ವಿರಾಮದ ನಡುವೆ ಐದು ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ಆ್ಯಷಸ್‌ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ತೊಂದರೆಗೆ ಸಿಲುಕಿತು. ಇಂಗ್ಲೆಂಡ್‌ನ 281 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೆಲಿಯಾ ಮೊದಲ ಇನಿಂಗ್ಸ್‌ನಲ್ಲಿ 80 ಓವರುಗಳ ನಂತರ 7 ವಿಕೆಟ್‌ಗೆ 201 ರನ್‌ ಗಳಿಸಿದೆ.

ಕ್ರೀಸ್‌ನಲ್ಲಿ ತಳವೂರಿರುವ ಹಳೆಯ ಹುಲಿ ಸ್ಟೀವ್‌ ಸ್ಮಿತ್‌ 46 ರನ್ ಮತ್ತು ನಾಯಕ ಪ್ಯಾಟ್‌ ಕಮಿನ್ಸ್‌ 9 ರನ್‌ ಗಳಿಸಿ ಆಟವಾಡುತ್ತಿದ್ದರು.

ಮೊದಲ ದಿನದಾಟದ ಕೊನೆಗೆ 1 ವಿಕೆಟ್‌ಗೆ 61 ರನ್ ಗಳಿಸಿದ್ದ ಆಸ್ಟ್ರೇಲಿಯಾ ಲಂಚ್‌ ಮೊದಲು, ಅಸಾಧ್ಯ ತಾಳ್ಮೆಯಿಂದ ಆಡುತ್ತಿದ್ದ ಲಾಬುಷೇನ್ (82 ಎಸೆತಗಳಲ್ಲಿ 9) ಅವರನ್ನು ಕಳೆದುಕೊಂಡಿತು. ಲಂಚ್‌ ವೇಳೆ (2 ವಿಕೆಟ್‌ಗೆ 115) ಉತ್ತಮ ಸ್ಥಿತಿಯಲ್ಲೇ ಇತ್ತು.

ಆದರೆ ಇದೇ ಮೊತ್ತಕ್ಕೆ ಉಸ್ಮಾನ್‌ ಖ್ವಾಜಾ (47) ಅವರು ಬ್ರಾಡ್‌ಗೆ ಬಲಿಯಾದರು. ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕ್ಯಾರಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ರೂಟ್‌ ಬೌಲಿಂಗ್‌ನಲ್ಲಿ ನಾಯಕ ಸ್ಟೋಕ್ಸ್‌ ಅವರು ಕ್ಯಾರಿ ಕ್ಯಾಚ್‌ ಹಿಡಿದರು. ಇದು ಟೆಸ್ಟ್‌ನಲ್ಲಿ ಅವರ 100ನೇ ಕ್ಯಾಚ್‌.

ಇಂಗ್ಲೆಂಡ್‌ ಕಡೆ ವೇಗದ ಬೌಲರ್‌ಗಳಾದ ಸ್ಟುವರ್ಟ್‌ ಬ್ರಾಡ್‌ ಮತ್ತು ಮಾರ್ಕ್ ವುಡ್‌ ತಲಾ ಎರಡು ವಿಕೆಟ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT