ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಏಕದಿನದಲ್ಲೂ ಭಾರತೀಯ ವನಿತೆಯರಿಗೆ ಸೋಲು; ಆಸ್ಟ್ರೇಲಿಯಾಕ್ಕೆ ಸರಣಿ

Published 30 ಡಿಸೆಂಬರ್ 2023, 16:01 IST
Last Updated 30 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮಹಿಳೆಯರ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಮೂರು ರನ್ ಅಂತರದ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 0-2ರ ಅಂತರದಲ್ಲಿ ಸರಣಿ ಸೋಲಿಗೆ ಗುರಿಯಾಗಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಫೋಬಿ ಲಿಚ್‌ಫೀಲ್ಡ್ (68) ಹಾಗೂ ಎಲಿಸ್ ಪೆರಿ (50)ಆಕರ್ಷಕ ಅರ್ಧಶತಕ ಗಳಿಸಿದರು.

ಭಾರತದ ಪರ ದೀಪ್ತಿ ಶರ್ಮಾ 38 ರನ್ ತೆತ್ತು ಐದು ವಿಕೆಟ್ ಗಳಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಭಾರತೀಯ ವನಿತೆಯರ ಬಳಗ, 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 255 ರನ್ ಗಳಿಸಲಷ್ಟೇ ಸಾಧ್ಯವಾಯಿತು. ದಿಟ್ಟ ಹೋರಾಟ ತೋರಿದ ರಿಚಾ ಘೋಷ್ 96 ರನ್ ಗಳಿಸಿ ಔಟ್ ಆದರು. ಜೆಮಿಮಾ ರಾಡ್ರಿಗಸ್ 44 ಹಾಗೂ ದೀಪ್ತಿ ಶರ್ಮಾ ಅಜೇಯ 24 ರನ್ ಗಳಿಸಿದರು.

ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಆದರೆ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಮೊದಲ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಆರು ವಿಕೆಟ್ ಅಂತದ ಗೆಲುವು ಸಾಧಿಸಿತ್ತು. ಸರಣಿಯ ಅಂತಿಮ ಪಂದ್ಯವು ಜನವರಿ 2ರಂದು ಇದೇ ಮೈದಾನದಲ್ಲಿ ನಡೆಯಲಿದೆ.

ಗಾಯಗೊಂಡ ಸ್ನೇಹಾ ರಾಣಾ

ಸ್ನೇಹಾ ಬದಲಿಗೆ ಹರ್ಲಿನ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡ ಸ್ನೇಹಾ ರಾಣಾ ಅವರ ಬದಲಿಗೆ ಹರ್ಲೀನ್ ಡಿಯೊಲ್ ಅವರನ್ನು ಕಂಕಷನ್ ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿ ಕಣಕ್ಕಿಳಿಸಲಾಯಿತು. ಆಸ್ಟ್ರೇಲಿಯಾದ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಬ್ಯಾಟರ್ ಬೆತ್ ಮೂನಿ ಆಫ್‌ಸೈಡ್‌ಗೆ ಕಟ್ ಮಾಡಿದ ಚೆಂಡನ್ನು ಹಿಡಿತಕ್ಕೆ ಪಡೆಯಲು ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಸ್ನೇಹಾ ಓಡಿದರು. ಅದೇ ಹೊತ್ತಿಗೆ ಶಾರ್ಟ್‌ ಥರ್ಡ್‌ ಪೊಸಿಷನ್‌ನಲ್ಲಿದ್ದ ಪೂಜಾ ವಸ್ತ್ರಾಕರ್ ಅವರೂ ಚೆಂಡಿನತ್ತ ಓಡಿದ್ದರು.  ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಡಿಕ್ಕಿ ಹೊಡೆದರು. ಇಬ್ಬರೂ ತೀವ್ರ ನೋವು ಅನುಭವಿಸಿದರು.  ಅದರಲ್ಲೂ ಸ್ನೇಹಾ ಅವರ ತಲೆಗೆ ಪೆಟ್ಟಾಗಿತ್ತು. ಅವರು ಬಹಳಷ್ಟು ಹೊತ್ತು ನೆಲದ ಮೇಲೆ ಬಿದ್ದಿದ್ದರು. ಧಾವಿಸಿದ ಫಿಸಿಯೊ ತಲೆಗೆ ಐಸ್‌ಪ್ಯಾಕ್ ಹಾಕಿ ಪ್ರಥಮ ಉಪಚಾರ ನೀಡಿದರು. ನಂತರ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ‘ಸ್ನೇಹಾ ಅವರು ತಲೆನೋಯುತ್ತಿರುವುದಾಗಿ ಹೇಳಿದರು. ಆದ್ದರಿಂದ ಅವರನ್ನು ಸ್ಕ್ಯಾನಿಂಗ್‌ಗೆ ಕಳುಹಿಸಲಾಯಿತು. ಅವರು ಈ ಪಂದ್ಯದಲ್ಲಿ ಮುಂದುವರಿಯುವುದಿಲ್ಲ. ಕಂಕಷನ್ ನಿಯಮದಡಿಯಲ್ಲಿ ಬದಲೀ ಫೀಲ್ಡರ್‌ ಆಗಿ ಹರ್ಲಿನ್ ಡಿಯೊಲ್ ಆಡಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT