ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಮುಂದೂಡುವುದು ಖಚಿತ; ಇಂಗ್ಲೆಂಡ್‌ ಎದುರಿನ‌ ಸರಣಿಗೆ ಸಜ್ಜಾಗಿ

ಆಟಗಾರರಿಗೆ ಸೂಚನೆ ನೀಡಿದ ಕ್ರಿಕೆಟ್‌ ಆಸ್ಟ್ರೇಲಿಯಾ
Last Updated 6 ಜುಲೈ 2020, 11:45 IST
ಅಕ್ಷರ ಗಾತ್ರ

ಮೆಲ್ಬರ್ನ್‌: ‘ತವರಿನಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಮುಂದೂಡುವುದು ಖಚಿತ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ನಡೆಯುವ ಇಂಗ್ಲೆಂಡ್‌ ಎದುರಿನ ಕ್ರಿಕೆಟ್‌ ಸರಣಿಯತ್ತ ಮಾತ್ರ ಚಿತ್ತ ಹರಿಸಿ. ಅದಕ್ಕಾಗಿ ತಯಾರಿ ನಡೆಸಿ’...

ಕ್ರಿಕೆಟ್‌‌ ಆಸ್ಟ್ರೇಲಿಯಾವು (ಸಿಎ) ತನ್ನ ಆಟಗಾರರಿಗೆ ಮೇಲಿನಂತೆಸೂಚನೆ ನೀಡಿದೆ ಎಂದು ಆಸ್ಟ್ರೇಲಿಯಾದ ‘ದಿ ಡೈಲಿ ಟೆಲಿಗ್ರಾಫ್‌’ ಪತ್ರಿಕೆಯು ವರದಿ ಮಾಡಿದೆ.

‘ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಕಾಂಗರೂ ನೆಲದಲ್ಲಿ ನಿಗದಿಯಾಗಿರುವ ವಿಶ್ವಕಪ್‌ ಟೂರ್ನಿಯನ್ನು ಮುಂದೂಡುವುದು ಖಚಿತವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಈ ವಾರಾಂತ್ಯದೊಳಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ’ ಎಂದೂ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವಕಪ್‌ ಮುಂದೂಡಿದರೆ ಅದೇ ಅವಧಿಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿ ಆಯೋಜಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ಸುಕವಾಗಿದೆ.

‘ಐಪಿಎಲ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಆಟಗಾರರಿಗೆ ಇಂಗ್ಲೆಂಡ್‌ನಿಂದಲೇಭಾರತಕ್ಕೆ ಪ್ರಯಾಣ ಮಾಡಲು ಅನುಮತಿ ನೀಡುವ ಬಗ್ಗೆ ಸಿಎ ಚಿಂತಿಸುತ್ತಿದೆ. ಇಂಗ್ಲೆಂಡ್‌ ಎದುರಿನ ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿಗಳ ಪರಿಷ್ಕೃತ ವೇಳಾಪಟ್ಟಿಯು ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಆ್ಯರನ್‌ ಫಿಂಚ್‌ ಬಳಗವು ಈ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ತಾಲೀಮು ಶುರುಮಾಡಿದೆ’ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT