ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20 ವಿಶ್ವಕಪ್‌: ಭಾರತ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ

Last Updated 23 ಫೆಬ್ರುವರಿ 2023, 14:35 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಲೀಗ್‌ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಹಾಗೂ ಒಂದು ಸೋಲು ಕಂಡಿರುವ ಭಾರತಕ್ಕೆ, ಸೋಲಿನ ರುಚಿ ಕಾಣದ ಆಸ್ಟ್ರೇಲಿಯಾ ಕಠಿಣ ಸವಾಲಾಗಲಿದೆ.

ಭಾರತ ಪರ ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ರಿಚಾ ಘೋಷ್‌ ಅವರು ಮಾತ್ರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಜೆಮಿಮಾ ರಾಡ್ರಿಗಸ್‌ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕಿದೆ.

ಟೂರ್ನಿಯಲ್ಲಿ ಇದುವರೆಗೆ ಮಿಂಚಲು ವಿಫಲವಾಗಿರುವ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಒತ್ತಡದಲ್ಲಿದ್ದಾರೆ. ತಂಡವನ್ನು ಫೈನಲ್‌ನತ್ತ ಮುನ್ನಡೆಸುವ ಜತೆಗೆ, ವೈಯಕ್ತಿಕ ಕೊಡುಗೆ ನೀಡುವ ಸವಾಲೂ ಅವರ ಮುಂದಿದೆ.

ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್‌ ಮತ್ತು ದೀಪ್ತಿ ಶರ್ಮಾ ಅವರನ್ನು ಹೊರತುಪಡಿಸಿದರೆ, ಇತರರಿಂದ ಪ್ರಭಾವಿ ಪ್ರದರ್ಶನ ಮೂಡಿಬಂದಿಲ್ಲ. ಇಂಗ್ಲೆಂಡ್‌ ವಿರುದ್ಧ 15 ರನ್‌ಗಳಿಗೆ ಐದು ವಿಕೆಟ್‌ ಪಡೆದಿದ್ದ ರೇಣುಕಾ ಒಟ್ಟು ಏಳು ವಿಕೆಟ್‌ ಗಳಿಸಿದ್ದಾರೆ.

ಸ್ಪಿನ್ನರ್‌ ದೀಪ್ತಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಪೂಜಾ ವಸ್ತ್ರಕರ್‌, ರಾಜೇಶ್ವರಿ ಗಾಯಕವಾಡ್‌ ಮತ್ತು ರಾಧಾ ಯಾದವ್‌ ಅವರು ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಆಸ್ಟ್ರೇಲಿಯಾ ವಿರುದ್ಧ ಶಿಸ್ತಿನಿಂದ ಬೌಲಿಂಗ್‌ ಮಾಡಬೇಕಿದೆ.

ಮುಯ್ಯಿ ತೀರಿಸುವ ಅವಕಾಶ
2020ರಲ್ಲಿ ನಡೆದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಮೆಲ್ಬರ್ನ್‌ನಲ್ಲಿ ನಡೆದಿದ್ದ ಆ ಪಂದ್ಯವನ್ನು 85 ರನ್‌ ಅಂತರದ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು.

ಯಸ್ತಿಕಾಗೆ ಅವಕಾಶ
ಟೂರ್ನಿಯಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿದಿದ್ದ ಯಸ್ತಿಕಾ ಭಾಟಿಯಾ ಇಂದು ಕಣಕ್ಕಿಳಿಯಲಿದ್ದಾರೆ. ಹೀಗಾಗಿ ದೇವಿಕಾ ವೈದ್ಯ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ತಂಡವೂ ಎರಡು ಬದಲಾವಣೆಗಳೊಂದಿಗೆ ಆಡಲಿದೆ. ಜಸ್‌ ಜಾನ್ಸನ್‌ ಹಾಗೂ ಅಲಿಸ್ಸಾ ಹೀಲಿ ಅವರಿಗೆ ಅಲನಾ ಕಿಂಗ್‌ ಮತ್ತು ಅನ್ನಾಬೆಲ್‌ ಸುದರ್‌ಲ್ಯಾಂಡ್‌ ಬದಲು ಸ್ಥಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT