ಮಂಗಳವಾರ, ಅಕ್ಟೋಬರ್ 27, 2020
26 °C

ಮಾಗಡಿ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮಾಗಡಿ ಕ್ರಿಕೆಟ್ ಅಕಾಡೆಮಿ ತಂಡ ಈಚೆಗೆ ನಡೆದ 19 ವರ್ಷದೊಳಗಿನವರ ಬಿಐಸಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬಿಐಸಿಸಿ ಇನ್ಫಿನಿಟಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಾಗಡಿ ಅಕಾಡೆಮಿ ತಂಡ ಕಪಿಲ್ ಕ್ರಿಕೆಟ್ ಅಕಾಡೆಮಿಯನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು. 

ಮೊದಲು ಬ್ಯಾಟಿಂಗ್‌ ಮಾಡಿದ ಕಪಿಲ್ ಕ್ರಿಕೆಟ್ ಅಕಾಡೆಮಿ 30 ಓವರ್‌ಗಳಲ್ಲಿ 9ಕ್ಕೆ 151 ರನ್ ಗಳಿಸಿತು. ಗುರಿ ಬೆನ್ನತ್ತಿದ ಮಾಗಡಿ ಅಕಾಡೆಮಿ ತಂಡ 28 ಓವರ್‌ಗಳಲ್ಲಿ ಅರು ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು: ಕಪಿಲ್ ಕ್ರಿಕೆಟ್ ಅಕಾಡೆಮಿ: 30 ಓವರ್‌ಗಳಲ್ಲಿ 9ಕ್ಕೆ 151 (ಅಭಿಷೇಕ್‌ 61, ಶಶಾಂಕ್ 34); ಮಾಗಡಿ ಅಕಾಡೆಮಿ: 28 ಓವರ್‌ಗಳಲ್ಲಿ 6ಕ್ಕೆ152 (ವಸಿಷ್ಠ ರಾಮಪ್ರಿಯ 51, ದೀಪಕ್ 23). ಫಲಿತಾಂಶ: ಮಾಗಡಿ ಅಕಾಡೆಮಿಗೆ 4 ವಿಕೆಟ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು