ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಯಾಗಿ ಐದೂವರೆ ವರ್ಷಗಳ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ 

Last Updated 9 ಫೆಬ್ರುವರಿ 2020, 14:13 IST
ಅಕ್ಷರ ಗಾತ್ರ

ಮೆಲ್ಬರ್ನ್: ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಐದೂವರೆ ವರ್ಷಗಳಬಳಿಕ ಸಚಿನ್ ತೆಂಡೂಲ್ಕರ್ ಭಾನುವಾರ ಮೆಲ್ಬರ್ನ್‌ನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಬ್ಯಾಟ್ ಹಿಡಿದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಳ್ಗಿಚ್ಚಿನಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆಯೋಜಿಸಲಾಗಿದ್ದ ‘ಬುಷ್‌ಫೈರ್‌ ಕ್ರಿಕೆಟ್‌ ಬ್ಯಾಷ್‌’ ಪಂದ್ಯದಲ್ಲಿ ಆಸ್ಟೇಲಿಯಾ ಮಹಿಳಾ ಕ್ರಿಕೆಟ್ ತಂಡದ ವೇಗಿ ಎಲ್ಸಿ ಪೆರ್ರಿ ಅವರ ಸ್ಪೆಷಲ್ ಓವರ್‌ನ್ನು ಎದುರಿಸಿದ ಸಚಿನ್ ಮೊದಲ ಎಸೆತವನ್ನು ಬೌಂಡರಿಗಟ್ಟಿದ್ದಾರೆ.

'ಸಚಿನ್, ಬುಷ್‌ಫೈರ್ ಪಂದ್ಯದಲ್ಲಿ ನೀವು ಭಾಗವಹಿಸಿದರೆ ಒಳ್ಳೆದಿತ್ತು. ನೀವು ಒಂದು ತಂಡಕ್ಕೆ ತರಬೇತಿ ನೀಡುತ್ತಿದ್ದೀರಿ ಎಂದು ಗೊತ್ತು. ಕಳೆದ ರಾತ್ರಿ ನಾವೊಂದಿಷ್ಟು ಜನ ಮಾತನಾಡುತ್ತಾ, ನೀವು ಜಂಕ್ಷನ್ ಓವಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಭಾಗವಹಿಸಿದರೆ ಅದ್ಭುತವಾಗಿರುತ್ತದೆ ಎಂದಿದ್ದೆವು' - ಎಂದು ಎಲ್ಸಿ ಪೆರ್ರಿ ಟ್ವೀಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್, ಇದು ತುಂಬಾ ಒಳ್ಳೆ ಯೋಚನೆ.ತನಗೆ ಭುಜ ನೋವಿದೆ. ಆದರೂ ವೈದ್ಯರ ಸಲಹೆ ಬದಿಗಿಟ್ಟು ನಾನು ಬ್ಯಾಟಿಂಗ್ ಮಾಡಲು ಬರುವೆ. ಈ ಮೂಲಕ ನಾವು ಸಹಾಯಾರ್ಥ ಪಂದ್ಯದಲ್ಲಿ ಹೆಚ್ಚು ಹಣ ಸಂಗ್ರಹಿಸಬಹುದು ಎಂದಿದ್ದರು.

ನಾವು ನಿಮ್ಮ ವಿರುದ್ಧ ಬೌಲಿಂಗ್ ಮಾಡಲು ಇಷ್ಟಪಡುತ್ತೇವೆ ಮತ್ತುನೀವು ಬೌಂಡರಿ ಬಾರಿಸಿದಾಗ ಆ ಬಾಲ್‌ಗಳನ್ನು ಹುಡುಕಿತರಲು ಬಯಸುತ್ತೇವೆ. ಬುಷ್‌ಫೈರ್ ಪಂದ್ಯದಲ್ಲಿ ಸ್ವಲ್ಪ ಹೆಚ್ಚು ಹಣ ಸಂಗ್ರಹ ಮಾಡಲು ಇದು ಸಹಾಯವಾಗುತ್ತದೆ. ಈಗಾಗಲೇ ನೀವು ಸಾಕಷ್ಟು ಕಾರ್ಯಗಳನ್ನು ಮಾಡಿದ್ದೀರಿ. ನಾವೆಲ್ಲರೂ ಸಿದ್ಧರಾಗಿದ್ದೇವೆ, ನೀವು ಅಲ್ಲಿಗೆ ಬಂದರೆ ಖುಷಿ. ನೀವು ಆಡುವಾಗ ಫೀಲ್ಡಿಂಗ್ ಮಾಡಲು ನಾವು ಕಾಯುತ್ತಿದ್ದೇವೆ. ಯಾವುದಕ್ಕೂ ತಿಳಿಸಿ, ಧನ್ಯವಾದಗಳು ಎಂದು ಪೆರ್ರಿ ಪ್ರತಿಕ್ರಿಯಿಸಿದ್ದರು.

ರಿಕಿ ಪಾಂಟಿಂಗ್ಇಲೆವನ್ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ ಇಲೆವನ್ನಡುವೆ ನಡೆದ10 ಓವರ್‌ಗಳ ಬುಷ್‌ಫೈರ್‌ ಕ್ರಿಕೆಟ್‌ ಬ್ಯಾಷ್‌ ಪಂದ್ಯದಲ್ಲಿ ಪಾಂಟಿಂಗ್ ತಂಡ 1 ರನ್‌ನಿಂದ ಗೆಲುವು ಸಾಧಿಸಿದೆ.

ಪಾಂಟಿಂಗ್ ತಂಡ 5 ವಿಕೆಟ್ ನಷ್ಟಕ್ಕೆ 104 ರನ್ ದಾಖಲಿಸಿತ್ತು.ತಂಡದ ಪರವಾಗಿ ಬ್ರಯಾನ್‌ಲಾರಾ30 ಮತ್ತು ಪಾಂಟಿಂಗ್ 26 ರನ್ ದಾಖಲಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT