ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ಕೋಹಾಲ್‌ ಕಂಪನಿ ಲೋಗೊ ಧರಿಸುವುದಿಲ್ಲ: ಪಾಕ್‌ ಏಕದಿನ ತಂಡದ ನಾಯಕ ಬಾಬರ್‌ ಆಜಂ

Last Updated 4 ಸೆಪ್ಟೆಂಬರ್ 2020, 12:07 IST
ಅಕ್ಷರ ಗಾತ್ರ

ಕರಾಚಿ: ಆಲ್ಕೋಹಾಲ್‌ ಜಾಹೀರಾತು ಕಂಪನಿಯ ಲೋಗೊವನ್ನು ಧರಿಸುವುದಿಲ್ಲ ಎಂದು ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ತಾನು ಆಡುತ್ತಿರುವ ಕೌಂಟಿ ಕ್ರಿಕೆಟ್‌ ಕ್ಲಬ್‌ ಸೋಮರ್‌ಸೆಟ್‌ ತಂಡಕ್ಕೆ ಅವರು ಈ ವಿಷಯ ತಿಳಿಸಿದ್ದಾರೆ. ಸದ್ಯ ಅವರು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಪಾಕಿಸ್ತಾನ ತಂಡದ ಸರಣಿ ಮಂಗಳವಾರ ಮುಕ್ತಾಯಗೊಂಡ ಬಳಿಕ ಬಾಬರ್‌ ಸೋಮರ್‌ಸೆಟ್‌ ಕ್ಲಬ್‌ ಸೇರಿಕೊಂಡಿದ್ದರು. ಈ ವೇಳೆ ಅವರು ಧರಿಸಿದ್ದ ಜೆರ್ಸಿಯ ಹಿಂಭಾಗದಲ್ಲಿ ಆಲ್ಕೋಹಾಲ್‌ ಕಂಪನಿಯ ಲೋಗೊ ಇತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬಾಬರ್ ಅವರ ನಿಕಟ ಮೂಲಗಳು ’ಆಲ್ಕೋಹಾಲ್‌ ಕಂಪನಿಯ ಯಾವುದೇ ಲೋಗೊವನ್ನು ಧರಿಸುವುದಿಲ್ಲ ಎಂದು ಸೋಮರ್‌ಸೆಟ್‌‌ ಕ್ಲಬ್‌ನೊಂದಿಗೆ ಬಾಬರ್‌ ಒಪ್ಪಂದ ಮಾಡಿಕೊಂಡಿದ್ದಾರೆ‘ ಎಂದು ತಿಳಿಸಿವೆ.

‘ಅವರ ಜೆರ್ಸಿಯ ಮೇಲೆ ಆಲ್ಕೋಹಾಲ್‌ ಕಂಪನಿಯ ಲೋಗೊವನ್ನು ತಪ್ಪಾಗಿ ಮುದ್ರಿಸಲಾಗಿದೆ. ಮುಂದಿನ ಪಂದ್ಯದಲ್ಲಿ ಇದನ್ನು ತೆಗೆದುಹಾಕಲಾಗುವುದು ಎಂದು ಬಾಬರ್‌ ಅವರಿಗೆ ತಿಳಿಸಲಾಗಿದೆ‘ ಎಂದು ಮೂಲಗಳು ಹೇಳಿವೆ.

ಈ ಹಿಂದೆಯೂ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಪ್ರತಿನಿಧಿಸಿದ್ದ ಮುಸ್ಲಿಂ ಆಟಗಾರರು ಆಲ್ಕೋಹಾಲ್‌ ಕಂಪನಿಯ ಲೋಗೊ ಧರಿಸಲು ನಿರಾಕರಿಸಿದ್ದರು. ಇದರಿಂದ ಸಾಕಷ್ಟು ಆದಾಯವನ್ನೂ ಕಳೆದುಕೊಂಡಿದ್ದರು.

ದಕ್ಷಿಣ ಆಫ್ರಿಕಾ ತಂಡದ ಹಶೀಂ ಆಮ್ಲಾ, ಇಮ್ರಾನ್ ತಾಹೀರ್‌, ಇಂಗ್ಲೆಂಡ್‌ ತಂಡದಲ್ಲಿ ಆಡುವ ಮೊಯಿನ್‌ ಅಲಿ ಹಾಗೂ ಆದಿಲ್‌ ರಶೀದ್‌ ಇದಕ್ಕೆ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT