ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿ ಡಿವಿಲಿಯರ್ಸ್‌ ವಿದಾಯ; ಭಾವನಾತ್ಮಕ ಸಂದೇಶ ಬರೆದ ವಿರಾಟ್ ಕೊಹ್ಲಿ

Last Updated 19 ನವೆಂಬರ್ 2021, 14:07 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಎಲ್ಲ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಇದು ಅಭಿಮಾನಿಗಳು ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಅವರಲ್ಲೂಅತೀವ ಬೇಸರವನ್ನುಂಟು ಮಾಡಿದೆ. ಅಲ್ಲದೆ ತಮ್ಮ ಆಪ್ತ ಗೆಳೆಯನ ಬಗ್ಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ.

'ನನ್ನ ಹೃದಯದಲ್ಲಿ ನೋವುಂಟು ಮಾಡಿದೆ. ಆದರೆ ಎಂದಿನಂತೆ ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ. ಐ ಲವ್ ಯೂ' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

'ಎಬಿ ಡಿವಿಲಿಯರ್ಸ್ ನಮ್ಮ ಕಾಲಘಟ್ಟದ ಅತ್ಯುತ್ತಮ ಆಟಗಾರನಾಗಿದ್ದು, ನಾನು ಭೇಟಿಯಾದ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ಬ್ರದರ್, ನೀವು ಏನು ಮಾಡಿದ್ದೀರಿ ಹಾಗೂ ಆರ್‌ಸಿಬಿ ತಂಡಕ್ಕಾಗಿ ಏನು ಕೊಡುಗೆ ಸಲ್ಲಿಸಿದ್ದೀರಿ ಎಂಬುದಕ್ಕೆ ಸಂಬಂಧಿಸಿದಂತೆ ಹೆಮ್ಮೆಪಟ್ಟುಕೊಳ್ಳಬಹುದು. ನಮ್ಮ ಒಡನಾಟವು ಆಟಕ್ಕೂ ಮೀರಿದ್ದು, ಎಂದಿಗೂ ಹಾಗೆಯೇ ಉಳಿಯಲಿದೆ' ಎಂದು ಹೇಳಿದ್ದಾರೆ.

'ನೀವು ಆರ್‌ಸಿಬಿಗಾಗಿ ಎಲ್ಲವನ್ನು ಅರ್ಪಿಸಿದ್ದೀರಿ. ಅದು ನನ್ನ ಹೃದಯಕ್ಕೆ ತಿಳಿದಿದೆ. ಈ ಫ್ರಾಂಚೈಸಿ ಮತ್ತು ನನಗೆ ನೀವು ಏನೆಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣವು ನಿಮ್ಮನ್ನು ಹುರಿದುಂಬಿಸುವ ಕೊರತೆ ಕಾಡಲಿದೆ. ನಾನು ನಿಮ್ಮೊಂದಿಗೆ ಆಡುವುದನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಐ ಲವ್ ಯೂ, ನಾನು ಯಾವಾಗಲೂ ನಿಮ್ಮ ನಂ.1 ಅಭಿಮಾನಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT