ಮಂಗಳವಾರ, ಮೇ 17, 2022
29 °C
ಅಂಧರ ರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ ಟೂರ್ನಿ

ಅಂಧರ ರಾಷ್ಟ್ರೀಯ ಟಿ-20: ಕರ್ನಾಟಕ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಾರ್ಖಂಡ್‌ ವಿರುದ್ಧ ಹತ್ತು ರನ್‌ಗಳ ರೋಚಕ ಜಯ ಗಳಿಸಿದ ಕರ್ನಾಟಕ ತಂಡವು ಇಲ್ಲಿ ಆರಂಭಗೊಂಡ 3ನೇ ಇಂಡಸ್‌ಇಂಡ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಸೋಮವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ, ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸಿತು. ಉಮೇಶ್‌ ಅವರು 57 ಎಸೆತಗಳಲ್ಲಿ 88 ರನ್‌ ಸಿಡಿಸಿದರು. ಇದಕ್ಕೆ ಉತ್ತರವಾಗಿ ಜಾರ್ಖಂಡ್‌ 6 ವಿಕೆಟ್‌ ಕಳೆದುಕೊಂಡು 182 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಂಧ್ರಪ್ರದೇಶ ತಂಡವು ತಾಂಡವ ಕೃಷ್ಣ (62 ಎಸೆತಗಳಲ್ಲಿ 102 ರನ್‌) ಅವರ ಶತಕದ ಬಲದಿಂದ, ಪಶ್ಚಿಮ ಬಂಗಾಳದ ವಿರುದ್ಧ 136 ರನ್‌ಗಳ ಜಯ ಗಳಿಸಿತು.

ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 (ಉಮೇಶ್‌ 88), ಜಾರ್ಖಂಡ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 (ರಾಜೀವ್‌ ರಂಜನ್‌ ದಾಸ್‌ 57, ನಿಶಿತ್‌ ವಿಲಿಯಂ 42). ಫಲಿತಾಂಶ: ಕರ್ನಾಟಕ ತಂಡಕ್ಕೆ 10 ರನ್‌ಗಳ ಜಯ. ತಮಿಳುನಾಡು: 241 (ವೆಂಕಟಮುನಿಕರಣ್‌ 112, ದಿನಕರನ್‌ 55; ಮಹಾರಾಜನ್‌ 31ಕ್ಕೆ 3), ಬಿಹಾರ: 130. ಫಲಿತಾಂಶ: ತಮಿಳುನಾಡು ತಂಡಕ್ಕೆ 111 ರನ್‌ಗಳ ಗೆಲುವು. ಮಹಾರಾಷ್ಟ್ರ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157, ಉತ್ತರ ಪ್ರದೇಶ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156. ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 1 ರನ್ ಗೆಲುವು. ಆಂಧ್ರಪ್ರದೇಶ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 250 (ತಾಂಡವಕೃಷ್ಣ 102, ವೆಂಕಟೇಶ್ವರ ರಾವ್‌ 64), ಪಶ್ಚಿಮ ಬಂಗಾಳ: 9 ವಿಕೆಟ್‌ಗೆ 114 (ಅರ್ಜುನ ರೆಡ್ಡಿ 26ಕ್ಕೆ 3). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ 136 ರನ್‌ಗಳ ಗೆಲುವು. ತ್ರಿಪುರ: 17.1 ಓವರ್‌ಗಳಲ್ಲಿ 83 (ಗಂಡಿ ವೆಂಕಟೇಶ್‌ 9ಕ್ಕೆ 3), ತೆಲಂಗಾಣ 8.5 ಓವರ್‌ಗಳಲ್ಲಿ 1 ಕ್ಕೆ 84 (ಮಧು ಗುಂಜ 58). ಫಲಿತಾಂಶ: ತೆಲಂಗಾಣ ತಂಡಕ್ಕೆ 9 ವಿಕೆಟ್‌ಗಳ ಗೆಲುವು. ಗೋವಾ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 280 (ನೀಲೇಶ್‌ ನಾನಾವ್ರೆ 104, ಅಕ್ಷಯ ಬೋರಿಕರ್‌ 78) ಮಣಿಪುರ 167 (ಅರುಣ ಹಾರೊಡೆ 31ಕ್ಕೆ 4 ಸಂದೀಪ್‌ ಘುಗೆ 13ಕ್ಕೆ 3). ಫಲಿತಾಂಶ: ಗೋವಾ ತಂಡಕ್ಕೆ 113 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು