ನವದೆಹಲಿ: ಮಂಗಳವಾರ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿರುವ ಭಾರತ ತಂಡವನ್ನು ಶ್ಲಾಘಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ನಲ್ಲಿ ವಿರಾಟ್ ಕೊಹ್ಲಿ ಅವರ ಅಮೋಘ ಆಟದ ಬಲದಿಂದ ಭಾರತ ತಂಡ 4 ವಿಕೆಟ್ಗಳ ಜಯಗಳಿಸಿತ್ತು.

‘ಭಾರತ ತಂಡದಿಂದ ಮತ್ತೊಂದು ಅದ್ಭುತ ಸಾಧನೆ. ಕೌಶಲ್ಯ, ಧೃಡತೆ ಮತ್ತು ತಂಡದ ಒಗ್ಗಟ್ಟಿನ ಆಟಕ್ಕೆ ಹಿಡಿದ ಕೈಗನ್ನಡಿ. ರೋಹಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೆ, ವಿರಾಟ್ ಕೊಹ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದರು’ ಎಂದು ರಾಹುಲ್ ಹೇಳಿದ್ದಾರೆ.

‘ಈ ಅಮೋಘ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ. ಫೈನಲ್ಗೆ ಇನ್ನು ಒಂದೇ ಒಂದು ಹೆಜ್ಜೆ ದೂರ. ಟ್ರೋಫಿಯನ್ನು ಮನೆಗೆ ತನ್ನಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು(ಬುಧವಾರ) ಲಾಹೋರ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವನ್ನು ಭಾನುವಾರ(ಮಾ.9) ನಡೆಯಲಿರುವ ಫೈನಲ್ನಲ್ಲಿ ಭಾರತ ಎದುರಿಸಲಿದೆ.
.VIDEOS | ಫೈನಲ್ಗೆ ಭಾರತ ಲಗ್ಗೆ: ಸಂಭ್ರಮದ ಹೊನಲಿನಲಿ ಮಿಂದ ಅಭಿಮಾನಿಗಳು....Champions Trophy: ಕೊಹ್ಲಿ ಚೆಂದದ ಆಟ; ಆಸೀಸ್ ಮಣಿಸಿದ ಭಾರತ ಫೈನಲ್ಗೆ ಲಗ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.