ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಸಿ ತಿಂಗಳ ಪ್ರಶಸ್ತಿ: ಬೂಮ್ರಾ, ಮಂದಾನಗೆ ಒಲಿದ ಗೌರವ

Published 9 ಜುಲೈ 2024, 10:16 IST
Last Updated 9 ಜುಲೈ 2024, 10:16 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದ ಜಸ್‌ಪ್ರೀತ್‌ ಬೂಮ್ರಾ ಅವರು ‘ಐಸಿಸಿ ತಿಂಗಳ ಆಟಗಾರ’ ಗೌರವಕ್ಕೆ ಭಾಜನರಾಗಿದ್ದಾರೆ. 

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ‘ಐಸಿಸಿ ತಿಂಗಳ ಆಟಗಾರ್ತಿ’ ಆಗಿ ಆಯ್ಕೆಗೊಂಡಿದ್ದಾರೆ. 

ಮಂದಾನ ಅವರು ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 3–0 ಕ್ಲೀನ್‌ಸ್ವೀಪ್‌ ಸಾಧಿಸಿತ್ತು. ಈ ಸರಣಿಯಲ್ಲಿ ಮಂದಾನ ಉತ್ತಮ ಪ್ರದರ್ಶನ ತೋರಿದ್ದರು.

30 ವರ್ಷ ವಯಸ್ಸಿನ ಬೂಮ್ರಾ ಅವರು ರೋಹಿತ್ ಶರ್ಮಾ ಮತ್ತು ಅಫ್ಗಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಅವರನ್ನು ಹಿಂದೆಹಾಕಿ ಪ್ರಶಸ್ತಿಗೆ ಆಯ್ಕೆಯಾದರು. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 8.26 ಸರಾಸರಿಯಲ್ಲಿ 15 ವಿಕೆಟ್‌ ಪಡೆದು ಮಿಂಚಿದ್ದ ಬೂಮ್ರಾ ಸರಣಿಯ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದರು.  

ಮಂದಾನ ಅವರು ಇಂಗ್ಲೆಂಡ್‌ನ ಮಾಯಾ ಬುಷಿಯಾ ಹಾಗೂ ಶ್ರೀಲಂಕಾದ ವಿಶ್ಮಿ ಗುಣರತ್ನೆ ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರರಾದರು.

ಬೆಂಗಳೂರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಮಂದಾನ 114.33 ಸರಾಸರಿಯಲ್ಲಿ 343 ರನ್‌ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT