ಬೆಂಗಳೂರು: ಬಾಬಾಸಾಫಿ ಪಠಾಣ್ (20ಕ್ಕೆ 4) ಮತ್ತು ಲುಕ್ಮಾನ್ ಮೇರಿವಾಲಾ (44ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಬರೋಡಾ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದೆ.

ಟೂರ್ನಿಯ ಮೊದಲ ದಿನವಾದ ಮಂಗಳವಾರ ಬ್ಯಾಟಿಂಗ್ ಇಳಿದ ಮಹಾರಾಷ್ಟ್ರ ತಂಡವನ್ನು ಪಠಾನ್ ಮತ್ತು ಲುಕ್ಮಾನ್ ಕಾಡಿದರು. ಹೀಗಾಗಿ ತಂಡವು 33.5 ಓವರ್‌ಗಳಲ್ಲಿ 127 ರನ್‌ಗೆ ಕುಸಿಯಿತು. ಅರ್ಷಿನ್ ಕುಲಕರ್ಣಿ (48) ಅವರನ್ನು ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ರಾಜ್ ಲಿಂಬಾನಿ ಎರಡು ವಿಕೆಟ್ ಪಡೆದರು.

ಬರೋಡಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಮಿತೇಶ್ ಪಟೇಲ್ (ಔಟಾಗದೇ 77; 97ಎ) ಅವರ ಬ್ಯಾಟಿಂಗ್ ಬಲದಿಂದ 33 ಓವರ್‌ಗಳಲ್ಲಿ 4 ವಿಕೆಟ್‌ಗೆ 130 ರನ್ ಗಳಿಸಿದೆ. ಮಹಾರಾಷ್ಟ್ರ ಪರ ರಾಮಕೃಷ್ಣ ಘೋಷ್ ಮತ್ತು ರಾಜವರ್ಧನ್ ಹಂಗೇಕರ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: ಚಿನ್ನಸ್ವಾಮಿ ಕ್ರೀಡಾಂಗಣ: ಮಹಾರಾಷ್ಟ್ರ: 33.5 ಓವರ್‌ಗಳಲ್ಲಿ 127 (ಅಂಕೀತ್ ಭಾವ್ನೆ 22, ಅರ್ಷಿನ್ ಕುಲಕರ್ಣಿ 48; ಬಾಬಾಸಾಫಿ ಪಠಾಣ್ 20ಕ್ಕೆ 4, ಲುಕ್ಮಾನ್ ಮೇರಿವಾಲಾ 44ಕ್ಕೆ 4, ರಾಜ್ ಲಿಂಬಾನಿ 35ಕ್ಕೆ 2). ಬರೋಡಾ: 33 ಓವರ್‌ಗಳಲ್ಲಿ 4ಕ್ಕೆ 130 (ಮಿತೇಶ್ ಪಟೇಲ್ ಔಟಾಗದೇ 77, ಕೃನಾಲ್ ಪಾಂಡ್ಯ ಔಟಾಗದೇ 24, ರಾಮಕೃಷ್ಣ ಘೋಷ್ 37ಕ್ಕೆ 2, ರಾಜವರ್ಧನ್ ಹಂಗೇಕರ್ 30ಕ್ಕೆ 2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.