ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020| ಆರ್‌ಸಿಬಿ ನಾಯಕತ್ವ ತೊರೆಯಲು ವಿರಾಟ್‌ಗೆ ಸಕಾಲ: ಗಂಭೀರ್‌

Last Updated 7 ನವೆಂಬರ್ 2020, 17:06 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತೋರಿರುವ ಕಳಪೆ ಆಟಕ್ಕೆ ಹೊಣೆ ಹೊತ್ತು ನಾಯಕ ವಿರಾಟ್‌ ಕೊಹ್ಲಿ ಅವರು ಹುದ್ದೆ ತೊರೆಯಲು ಇದು ಸಕಾಲ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅಭಿಪ್ರಾಯಪಟ್ಟಿದ್ದಾರೆ.

‘ಐಪಿಎಲ್‌ ಟೂರ್ನಿಯ ಅತ್ಯಂತ ಯಶಸ್ವಿ ನಾಯಕರು ಎನಿಸಿಕೊಂಡ ಮಹೇಂದ್ರ ಸಿಂಗ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರ ಜೊತೆ ಕೊಹ್ಲಿ ಹೆಸರನ್ನು ಪರಿಗಣಿಸಲು ಸಾಧ್ಯವಿಲ್ಲ‘ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಸಂವಾದ ಕಾರ್ಯಕ್ರಮದಲ್ಲಿ ಗಂಭೀರ್‌ ಹೇಳಿದ್ದಾರೆ.

‘ವಿರಾಟ್‌ ಎಂಟು ವರ್ಷಗಳಿಂದ ತಂಡ ಮುನ್ನಡೆಸುತ್ತಿದ್ದಾರೆ. ಇಷ್ಟು ದೀರ್ಘ ಸಮಯದಲ್ಲಿ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೆ, ನಾಯಕನನ್ನು ಹೊಣೆಗಾರನನ್ನಾಗಿ ಮಾಡಬೇಕು‘ ಎಂದಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, 7 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 131 ರನ್‌ ಗಳಿಸಿತ್ತು. ಈ ಗುರಿಯನ್ನು ರೈಸರ್ಸ್‌ ಪಡೆ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತ್ತು. ಇದರೊಂದಿಗೆ ಆರ್‌ಸಿಬಿಗೆ ಈ ವರ್ಷವೂ ಕಪ್‌ ಗೆಲ್ಲುವ ಅವಕಾಶ ಕೈ ತಪ್ಪಿತ್ತು.

‘ಎಂಟು ವರ್ಷಗಳು ಎಂಬುದು ಬಹಳ ದೀರ್ಘ ಸಮಯ. ನಾಯಕನ ವಿಚಾರವನ್ನು ಮರೆತುಬಿಡಿ; ಎಂಟು ವರ್ಷ ವರ್ಷಗಳ ಕಾಲ ಟ್ರೋಫಿ ಗೆಲ್ಲದೆ ಆಟ ಮುಂದುವರಿಸುತ್ತಿರುವ ಬೇರೊಬ್ಬ ಆಟಗಾರ ಇದ್ದರೆ ಹೇಳಿ. ಹಾಗಾಗಿ ಇದು ಹೊಣೆಗಾರಿಕೆಯ ವಿಚಾರ. ನಾಯಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

ಗಂಭೀರ್‌ ಅವರು ಕೆಲವು ವರ್ಷಗಳಿಂದ ಕೊಹ್ಲಿ ಅವರ ಐಪಿಎಲ್‌ ನಾಯಕತ್ವದ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಈ ವಿಷಯದಲ್ಲಿ ವೈಯಕ್ತಿಕವಾದುದು ಏನೂ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮುನ್ನಡೆಸಿದ್ದ ಗಂಭೀರ್‌, 2012 ಹಾಗೂ 2014ರಲ್ಲಿ ತಂಡವನ್ನು ಚಾಂಪಿಯನ್‌ ಆಗಿಸಿದ್ದರು.

ಕೊಹ್ಲಿವೈಫಲ್ಯಆರ್‌ಸಿಬಿ ಸೋಲಿಗೆ ಕಾರಣ: ಗಾವಸ್ಕರ್

ದುಬೈ: ನಾಯಕ ವಿರಾಟ್ಕೊಹ್ಲಿಬ್ಯಾಟಿಂಗ್‌ನಲ್ಲಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲು ವಿಫಲರಾದದ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸದೇ ಇರಲು ಪ್ರಮುಖ ಕಾರಣ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್‌ಗಳಿಗೆ ಸೋತು ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿತ್ತು.

’ವಿರಾಟ್ಕೊಹ್ಲಿಅತ್ಯುತ್ತಮ ಆಟಗಾರ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಆಡಲು ಸಾಧ್ಯವಾಗಲಿಲ್ಲ ಎಂದು ಅವರೇ ಹೇಳಲೂಬಹುದು. ಅದು ನಿಜ ಕೂಡ. ಯಾಕೆಂದರೆ ಡಿವಿಲಿಯರ್ಸ್ ಜೊತೆಗೂಡಿಕೊಹ್ಲಿಚೆನ್ನಾಗಿ ಆಡಿದ ‍ಪಂದ್ಯಗಳಲ್ಲೆಲ್ಲ ಆರ್‌ಸಿಬಿ ಉತ್ತಮ ಮೊತ್ತ ಕಲೆ ಹಾಕಿದೆ. ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಆ್ಯರನ್ ಫಿಂಚ್ ಇದ್ದಾರೆ. ಯುವ ಆಟಗಾರ ದೇವದತ್ತ ಪಡಿಕ್ಕಲ್ ಭರವಸೆಯಿಂದ ಬ್ಯಾಟ್ ಬೀಸಿದ್ದಾರೆ. ಡಿವಿಲಿಯರ್ಸ್ ಮತ್ತುಕೊಹ್ಲಿಅವರ ಇನಿಂಗ್ಸ್ ಕೂಡ ಸೇರಿದಾಗ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚುತ್ತಿತ್ತು. ಆದರೆ ಈ ತಂಡದ ಬೌಲಿಂಗ್ ವಿಭಾಗ ಹಿಂದಿನಂತೆ ಈಗಲೂ ದುರ್ಬಲವಾಗಿದೆ‘ ಎಂದು ಗಾವಸ್ಕರ್ ಅಭಿಪ್ರಾಯಪಟ್ಟರು.

‘ಆರ್‌ಸಿಬಿಗೆ ಕೊನೆಯ ಓವರ್‌ಗಳಲ್ಲಿ ಪಂದ್ಯ ಗೆಲ್ಲಿಸಿಕೊಡುವ ಆಟಗಾರನ ಅಗತ್ಯ ಸದ್ಯ ಇದೆ. ಶಿವಂ ದುಬೆ ಈ ಪಾತ್ರ ನಿರ್ವಹಿಸಲು ಸಮರ್ಥರಾಗಿದ್ದಾರೆ. ಅವರಿಗೆ ಸರಿಯಾದ ಸ್ಥಾನ ನೀಡಿದರೆಕೊಹ್ಲಿಅವರ ಭಾರ ಕಡಿಮೆಯಾಗಲಿದೆ’ ಎಂದು ಅವರು ನುಡಿದರು. 13ನೇ ಆವೃತ್ತಿಯಲ್ಲಿಕೊಹ್ಲಿ15 ಪಂದ್ಯಗಳನ್ನು ಆಡಿದ್ದು121.35ರ ಸ್ಟ್ರೈಕ್ ರೇಟ್‌ನಲ್ಲಿ 466 ರನ್ ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT