ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ ಕೆರಿಯರ್ ಅಂತ್ಯ?

Last Updated 1 ಅಕ್ಟೋಬರ್ 2021, 11:15 IST
ಅಕ್ಷರ ಗಾತ್ರ

ದುಬೈ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೂ ಮೊದಲು ಮಾನಸಿಕವಾಗಿ ಸಿದ್ಧರಾಗಲು ಬಯಸಿರುವ ವೆಸ್ಟ್‌ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್, ಐಪಿಎಲ್ ಬಯೋಬಬಲ್ ತೊರೆಯಲು ನಿರ್ಧರಿಸಿದ್ದಾರೆ.

ಇದರೊಂದಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಕ್ರಿಸ್ ಗೇಲ್ ವೃತ್ತಿ ಜೀವನ ಬಹುತೇಕ ಅಂತ್ಯ ಕಂಡಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಅತಿ ಹೆಚ್ಚು ಯಶಸ್ಸು ಕಂಡಿರುವ ಗೇಲ್, ಸದ್ಯ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು.

ಇದುವರೆಗೆ 142 ಐಪಿಎಲ್ ಪಂದ್ಯಗಳನ್ನು ಆಡಿರುವ ಗೇಲ್, ಒಟ್ಟು 4,965 ರನ್ ಪೇರಿಸಿದ್ದಾರೆ. ಅಲ್ಲದೆ ದಾಖಲೆಯ ಆರು ಶತಕಗಳನ್ನು ಬಾರಿಸಿದ್ದಾರೆ.

42 ವರ್ಷದ ಗೇಲ್ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಲಭ್ಯರಾಗುವರೇ ಎಂಬುದು ತಿಳಿದು ಬಂದಿಲ್ಲ.

ಭಾರತದಲ್ಲೂ ಗೇಲ್ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಆದರೆ 2021ನೇ ಸಾಲಿನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು. ಆಡಿರುವ 10 ಪಂದ್ಯಗಳಲ್ಲಿ 125.32ರ ಸ್ಟ್ರೇಕ್‌ರೇಟ್‌ನಲ್ಲಿ 193 ರನ್ ಗಳಿಸಿದ್ದರು. ಗರಿಷ್ಠ ಸ್ಕೋರ್ 46 ಆಗಿದೆ.

ಕ್ರಿಸ್ ಗೇಲ್ ಐಪಿಎಲ್ ಅಂಕಿಅಂಶ ಇಂತಿದೆ:
ಪಂದ್ಯ: 142
ಅಜೇಯ: 16
ರನ್: 4965
ಗರಿಷ್ಠ: 175*
ಸರಾಸರಿ: 39.72
ಸ್ಟ್ರೈಕ್‌ರೇಟ್: 148.96
ಶತಕ: 6
ಅರ್ಧಶತಕ: 31
ಸಿಕ್ಸರ್: 357
ಬೌಂಡರಿ: 405
ಕ್ಯಾಚ್: 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT