ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌– ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಸರಣಿ ರದ್ದು

Last Updated 14 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವಣ ಏಕದಿನ ಪಂದ್ಯಗಳ ಕ್ರಿಕೆಟ್‌ ಸರಣಿಯನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಭೀತಿಯಿಂದ ನ್ಯೂಜಿಲೆಂಡ್‌ ಪ್ರಯಾಣ ನಿರ್ಬಂಧ ಹೇರಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಶುಕ್ರವಾರ ಮೊದಲ ಏಕದಿನ ಪಂದ್ಯ ಪ್ರೇಕ್ಷಕರ ನಿರ್ಬಂಧದ ನಡುವೆ ನಡೆದಿದ್ದು, ಆತಿಥೇಯರು ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ಜಯಗಳಿಸಿದ್ದರು. ಈ ಕ್ರೀಡಾಂಗಣದಲ್ಲಿ 48 ಸಾವಿರ ಪ್ರೇಕ್ಷಕರಿಗೆ ಸ್ಥಳಾವಕಾಶವಿದೆ.

ಫರ್ಗ್ಯುಸನ್‌ ನಿರಾಳ: ವೇಗದ ಬೌಲರ್‌ ಲಾಕಿ ಫರ್ಗ್ಯುಸನ್‌ ಅವರನ್ನುಳಿದು ಉಳಿದ ಆಟಗಾರರೆಲ್ಲ ತವರಿಗೆ ಮರಳಿದರು. ಜ್ವರದಿಂದ ಬಳಲುತ್ತಿದ್ದ ಫರ್ಗ್ಯುಸನ್‌ ಅವರನ್ನು ಪರೀಕ್ಷೆಗೆ ಒಳಡಪಡಿಸಲಾಗಿತ್ತು. ಆದರೆ ಅವರಲ್ಲಿ ಕೊರೊನಾ ಸೋಂಕು ಇಲ್ಲದಿರುವುದು ಧೃಢಪಟ್ಟಿದೆ. 28 ವರ್ಷದ ಈ ಬೌಲರ್‌ಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ಭಾನುವಾರ ತವರಿಗೆ ವಾಪಸಾಗಲಿದ್ದಾರೆ.

ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮವಾಗಿ ನ್ಯೂಜಿಲೆಂಡ್‌ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಭಾನುವಾರ ಮಧ್ಯರಾತ್ರಿಯ ನಂತರ ದೇಶಕ್ಕೆ ಬರುವ ಎಲ್ಲರೂ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂಢಾ ಆರ್ಡೆರ್ನ್‌ ಶನಿವಾರ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ, ನ್ಯೂಜಿಲೆಂಡ್‌ನಲ್ಲಿ ಮೂರು ಪಂದ್ಯಗಳ ಟಿ–20 ಸರಣಿಯಲ್ಲಿ ಆಡಬೇಕಿದ್ದ ಆಸ್ಟ್ರೇಲಿಯಾ ಈಗ ಹಿಂದೆ ಸರಿಯಬೇಕಾಗಿದೆ. 14 ದಿನಗಳ ಪ್ರತ್ಯೇಕವಾಗಿರಿಸುವ ನಿಯಮ ಅನ್ವಯವಾಗುವ ಕಾರಣ ಈ ಸರಣಿಯ ಮಾತು ದೂರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT