ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಇಂಗ್ಲೆಂಡ್‌ 4ನೇ ಟೆಸ್ಟ್‌: ಚೇತೇಶ್ವರ್ ಪೂಜಾರ ದಿಟ್ಟ ಶತಕ

Last Updated 31 ಆಗಸ್ಟ್ 2018, 20:24 IST
ಅಕ್ಷರ ಗಾತ್ರ

ಸೌಥಾಂಪ್ಟನ್, ಲಂಡನ್: ಇಂಗ್ಲೆಂಡ್‌ನ ಸ್ಪಿನ್ನರ್ ಮೋಯಿನ್ ಅಲಿ ಅವರ ದಾಳಿಯ ಮುಂದೆ ಅಲ್ಪಮೊತ್ತಕ್ಕೆ ಪತನ ವಾಗಬೇಕಿದ್ದ ಭಾರತ ತಂಡವನ್ನು ಚೇತೇ ಶ್ವರ್ ಪೂಜಾರ ಪಾರು ಮಾಡಿದರು.

ಅವರ ದಿಟ್ಟತನದ ಆಟದಲ್ಲಿ ಆರಳಿದ ಶತಕದ (ಔಟಾಗದೆ 132; 257ಎಸೆತ, 16ಬೌಂಡರಿ) ಬಲದಿಂದ ಭಾರತ ತಂಡವು ಇಂಗ್ಲೆಂಡ್ ಎದುರು ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಮುನ್ನಡೆ ಸಾಧಿಸಿತು.

ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು 246 ರನ್‌ ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡವು ಶುಕ್ರವಾರ 84.5 ಓವರ್‌ಗಳಲ್ಲಿ 273 ರನ್‌ ಗಳಿಸಿತು.

ಬೆಳಿಗ್ಗೆಯ ವಾತಾವರಣದಲ್ಲಿ ವೇಗಿ ಸ್ಟುವರ್ಟ್‌ ಬ್ರಾಡ್ ಪೆಟ್ಟು ನೀಡಿದರು. ಎಂಟನೇ ಓವರ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು 18ನೇ ಓವರ್‌ನಲ್ಲಿ ಶಿಖರ್ ಧವನ್ ಅವರ ವಿಕೆಟ್ ಕಬಳಿಸಿದರು. ಈ ಹಂತದಲ್ಲಿ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದರು. ಇಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 92 ರನ್‌ ಗಳನ್ನು ಸೇರಿಸಿದರು. ಪೂಜಾರ ಸಹನೆಯಿಂದ ಆಡಿದರು. ಆದರೆ, 42ನೇ ಓವರ್‌ನಲ್ಲಿ ಅವರು ಸ್ಯಾಮ್‌ ಕರನ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಅಲಸ್ಟೇರ್‌ ಕುಕ್‌ಗೆ ಕ್ಯಾಚಿತ್ತರು. ಕೇವಲ 4 ರನ್‌ಗಳ ಅಂತರದಿಂದ ಅರ್ಧಶತಕ ಕೈತಪ್ಪಿತು.

ಆದರೆ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ.ಆದರೂ ಪೂಜಾರ ತಮ್ಮ ದಿಟ್ಟ ಆಟವನ್ನು ಕೈಬಿಡಲಿಲ್ಲ. 210 ಎಸೆತಗಳನ್ನು ಆಡಿದ ಅವರು 101 ರನ್‌ಗಳನ್ನು ಹೊಡೆದರು. ಅದರಲ್ಲಿ 11 ಬೌಂಡರಿಗಳು ಇದ್ದವು. ದೂಳು ಏಳುತ್ತಿದ್ದ ಪಿಚ್‌ನಲ್ಲಿ ಫೂಜಾರಾ ಏಕಾಗ್ರತೆ ಮತ್ತು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ತಮ್ಮ ಕಲಾತ್ಮಕ ಹೊಡೆತಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

‌ಎರಡನೇ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡವು 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT